ಬೆಳಗಾವಿ ಮೇಯರ್ ನಿರ್ವಾಣಿ ರಾಜೀನಾಮೆ?
ಬೆಳಗಾವಿ,
ಮಾ.9: ಕನ್ನಡಿಗ ಮೇಯರ್ ನಿಂಗಪ್ಪ ಬಸಪ್ಪ ನಿರ್ವಾಣಿ ಅವರು, ವಿಶ್ವ ಕನ್ನಡ ಸಮ್ಮೇಳನಕ್ಕೆ ಮುನ್ನ ಅಮಂಗಳ ರಾಗ ಹಾಡಿದ್ದಾರೆ. ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸದೆ ಆಯೋಜಕರು ತಮಗೆ ಮತ್ತು ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಬೊಬ್ಬಿಡುತ್ತಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪ್ರಭಾಕರ್ ಕೋರೆ, ಮನು ಬಳಿಗಾರ್ ಅವರಂಥ ಹಿರಿಯರು ಇದ್ದೂ ಈ ರೀತಿ ಲೋಪ ಹೇಗೆ ಆಗಿದೆ ಎಂಬ ಪ್ರಶ್ನೆ ಎದ್ದಿದೆ. ಆಹ್ವಾನ ಪತ್ರಿಕೆಯ ಪ್ರತಿಗೆ ಮಾಹಿತಿ ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಇದರ ಹೊಣೆ ಹೊರಲು ಸಿದ್ಧವಾಗಿಲ್ಲ. id="toptextpromo">ಇಂದು
ಸಂಜೆ ವೇಳೆಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಮಹಾಪೌರ ಎನ್ ಬಿ ನಿರ್ವಾಣಿ ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಬಿಟ್ಟಿದ್ದಾರೆ. ಮೇಯರ್ ಸ್ಥಾನಕ್ಕೆ ಬೆಲೆ ಇಲ್ಲದ್ದಂತಾಗಿದೆ. ಸರ್ಕಾರ ಮಹಾಪೌರ ಹುದ್ದೆಗೆ ಅವಮಾನ ಮಾಡಿದೆ ಎಂದು ನಿರ್ವಾಣಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಮಾ.11 ರಿಂದ 13ರವರೆಗೂ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಬ್ಬ ಕನ್ನಡಿಗನಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಮೇಯರ್ ಸ್ಥಾನಕ್ಕೆ ಸಿಗುವ ಯಾವುದೇ ಸೌಲಭ್ಯ ಬಳಸುವುದಿಲ್ಲ. ನನ್ನ ಮನವೊಲಿಸಲು ಸಾಧ್ಯವಿಲ್ಲ. ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಿರ್ವಾಣಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.











Click it and Unblock the Notifications