ಎನ್ಆರ್ಎನ್ ಮೂರ್ತಿ ಬರ್ತಿದಾರೆ, ದಾರಿಬಿಡಿ

NR Narayana Murthy should inaugurate Belgaum Kannada Convention
ಬೆಂಗಳೂರು, ಮಾ. 4 : ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನವನ್ನು ಯಾರು ಉದ್ಘಾಟಿಸಬೇಕು, ಯಾರು ಉದ್ಘಾಟಿಸಬಾರದು ಎಂಬ ಜಿಜ್ಞಾಸೆ ನಿಜಕ್ಕೂ ಬೆಸರ ಹುಟ್ಟಿಸುತ್ತಿದೆ. ಅಪ್ಪಟ ಕನ್ನಡಿಗರಲ್ಲಿ ಒಬ್ಬರಾದ, ಹಿರಿಯ ನಾಗರಿಕ ಎನ್ ಆರ್ ನಾರಾಯಣಮೂರ್ತಿ ಅವರನ್ನು ಕರ್ನಾಟಕ ಸರಕಾರ ಅಧಿಕೃತವಾಗಿ ಆಹ್ವಾನಿಸಿದೆ. ಆದರೆ, ಅವರ ಹೆಸರೆತ್ತಿದರೆ ಸಾಕು, ಉರಿದುಕೊಳ್ಳುವ ಜನಗಳು ಅಪಸ್ವರ ಎತ್ತಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನವನ್ನು ಸಾಹಿತಿ, ಕವಿ ಪುಂಗವ, ವಿಚಾರವಾದಿ, ಚಿಂತಕರೇ ಉದ್ಘಾಟಿಸಬೇಕು ಎಂಬ ನಿಯಮ ಇಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಹಿತ್ಯಕ್ಕೇ ಮೀಸಲಾದ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ನಮ್ಮ ನಿಘಂಟು ತಜ್ಞ ಜಿ ವಿ ವೆಂಕಟಸುಬ್ಬಯ್ಯ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದು ಯೋಗ್ಯ ಮತ್ತು ಸಾಕು.

ಎನ್ಆರ್ಎನ್ ರಿಂದ ಏನ್ ಕಲಿಬೇಕು, ಏನ್ ಬೇಡ?

ಉದ್ಘಾಟನೆ ಮಾಡುವುದಕ್ಕೆ ಮೂರ್ತಿಗಳು ಸರಕಾರಕ್ಕೆ ಅರ್ಜಿ ಹಾಕಿಕೊಂಡಿರಲಿಲ್ಲ. ಸ್ವತಃ ಸರಕಾರವೇ ಅವರಿಗೆ ಆಹ್ವಾನ ಕೊಟ್ಟಿದೆ. ಕನ್ನಡಕ್ಕೆ ಅವರೇನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಮೂರ್ತಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವವರಿಗೆ ಇದು ಗೊತ್ತಿರಲಿ. ಒಂದು ಕಾದಂಬರಿ, ನಾಲಕ್ಕು ವಿಮರ್ಶೆ, ಹತ್ತಾರು ಭಾಷಣ ಮಾಡಿರುವ ಅಪ್ಪಟ ಕನ್ನಡಿಗರು ಮೂರ್ತಿ ಅವರ ವಿರುದ್ಧ ಚಳವಳಿ ನಡೆಸುತ್ತಿರುವುದರ ಹಿಂದೆ ಏನೋ ಒಂದು ಪರಿಕಲ್ಪನೆ ಇದೆ.

ಇಂಥ ಪರಿಕಲ್ಪನೆಗಳಿಂದ ಕನ್ನಡ ನಾಡಿಗೆ ಏನೂ ಪ್ರಯೋಜನವಿಲ್ಲ. ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ಜಾಗತಿಕ ಮಟ್ಟದ ಲಾಭದಾಯಕ ಕಂಪನಿಯನ್ನು ತೆರೆದು ಸೈ ಎನಿಸಿಕೊಂಡ ಮೂರ್ತಿ ಅವರು ಹಿಂದೆ ಮುಂದೆ ನೋಡದೆ ಉದ್ಘಾಟನೆ ಜವಾಬ್ದಾರಿ ಹೊತ್ತುಕೊಂಡು ಸಮ್ಮೇಳನ ಸಾಂಗವಾಗಿ ನಡೆಯಲು ದಾರಿ ತೋರಲಿ. ಇತರರು ಅವರಿಗೆ ದಾರಿಬಿಡಿ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+