Get Updates
Get notified of breaking news, exclusive insights, and must-see stories!

ಬೆಳಗಾವಿ ಸಮ್ಮೇಳನದಲ್ಲಿ ಯಾರ್ಯಾರು ಸಿಗ್ತಾರೆ?

SP Balasubramanyam
ಬೆಳಗಾವಿ, ಮಾ. 4 : ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು, ಚಿಂತಕರನ್ನು ಆಹ್ವಾನ ಮಾಡಿ ವಿಚಾರ ವಿನಿಮಯಕ್ಕೆ ಮತ್ತು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 15 ವೇದಿಕೆಗಳಲ್ಲಿ ಏರ್ಪಡಿಸಲಾಗುತ್ತಿದೆ. ಉದ್ಘಾಟನೆಯ ಸಮಾರಂಭದಂದು ಬೆಳಗಾವಿಯ ಶಾಲಾ/ಕಾಲೇಜುಗಳಿಂದ 500 ಜನ ಬಾಲಕ/ಬಾಲಕಿಯರನ್ನು ನಾಡಗೀತೆಯ ಗಾಯನಕ್ಕೆ ಸಿದ್ಧಗೊಳಿಸಲಾಗಿದೆ. ಸಮ್ಮಳನ ದಿನಾಂಕ ಮಾರ್ಚ್ 11ರಿಂದ 13. ಶುಕ್ರವಾರದಿಂದ ಭಾನುವಾರ.

ಕಾವ್ಯನೃತ್ಯಾಂಜಲಿ ಎಂಬ ಸಮೂಹ ನೃತ್ಯ ಕಾರ್ಯಕ್ರಮಕ್ಕಾಗಿ ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಿಂದ 1200 ಜನ ವಿದ್ಯಾರ್ಥಿಗಳನ್ನು ಆಯ್ದು ಸಮೂಹನೃತ್ಯಕ್ಕೆ ಖ್ಯಾತ ಕಲಾವಿದೆ ಡಾ|| ಮಾಯಾರಾವ್ ಅವರ ನಿರ್ದೇಶನದಲ್ಲಿ ತರಬೇತಿ ನೀಡಲಾಗುತ್ತಿದೆ. ರಾಜ್ಯದ 13 ಜನಪದ ಕಲಾತಂಡಗಳನ್ನು ಆಯ್ದು 1001 ಜನಪದ ಕಲಾವಿದರಿಂದ ಜನಪದ ಕಲಾವೈಭವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಾ. ಕದ್ರಿ ಗೋಪಾಲನಾಥ್, ಡಾ. ನರಸಿಂಹಲು ವಡವಾಟಿ ಅವರಿಂದ ಜುಗಲ್‌ಬಂದಿ ಕಾರ್ಯಕ್ರಮ ; ಎಂ.ಎಸ್.ಶೀಲ ತಂಡದಿಂದ ಕರ್ನಾಟಕ ಸಂಗೀತ ; ಸಂಗೀತಾ ಕಟ್ಟಿ, ಮೌನಾ ರಾಮಚಂದ್ರ, ಪಂಡಿತ್ ಪರಮೇಶ್ವರ ಹೆಗಡೆ, ಅಂಬಯ್ಯ ನುಲಿ, ಅನಿತಾ ಪಾಗದ್, ಪಂ.ಎಂ.ವೆಂಕಟೇಶ್ ಕುಮಾರ್, ಪಂ. ವಿನಾಯಕ ತೊರವಿ, ಪಂ.ರಾಜಪ್ರಭು ದೋತ್ರೆ, ಡಾ. ಹನುಮಣ್ಣ ನಾಯಕದೊರೆ, ಪಂ.ಅನಂತ ತೇರದಾಳ್, ಶಕ್ತಿ ಪಾಟೀಲ್, ಮಾನಸಿ ಪ್ರಸಾದ್, ರವೀಂದ್ರ ಹಂದಿಗನೂರು, ಡಿ.ಕುಮಾರದಾಸ್, ಕೈವಲ್ಯ ಕುಮಾರ್ ಗುರುವ, ಶಾಂತಲಾ ವಟ್ಟಂ, ಎಂ.ಎಸ್.ಕಾಮತ್, ಮುಂತಾದ ಹಿರಿಯ ಕಲಾವಿದರಿಂದ ಶಾಸ್ತ್ರೀಯ ಸಂಗೀತ, ವಚನ ಮತ್ತು ದಾಸರಪದ ಗಾಯನ, ಗುಜಲ್ ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗಿದೆ.

ಬಿ.ಜಯಶ್ರೀ, ಸುಭದ್ರಮ್ಮ ಮನ್ಸೂರ್, ಶಾಮಿತ್ ಸಾಹೇಬ್ ಲಾಟಿ ಮತ್ತು ತಂಡ, ಲಕ್ಷ್ಮಣದಾಸ್ ಮತ್ತು ತಂಡ, ಸಮುದಾಯ ತಂಡ, ಮುಂತಾದವರಿಂದ ರಂಗಗೀತೆಗಳು ; ಡಾ. ಮಾಯಾರಾವ್ ತಂಡ, ನಿರುಪಮ ರಾಜೇಂದ್ರ ತಂಡ, ಪ್ರಸಿದ್ಧ ಫೌಂಡೇಷನ್, ನವದೆಹಲಿ, ಪ್ರಭಾತ್ ಕಲಾವಿದರು, ಶುಭಾ ಧನಂಜಯ ತಂಡ, ಮಂಗಳೂರಿನ ಸನಾತನ ನಾಟ್ಯಾಲಯ, ಉಷಾ ದಾತಾರ್ ಅವರ ತಂಡ, ಅನುರಾಧ ವಿಕ್ರಾಂತ್ ಅವರ ತಂಡ, ಕೃಪಾ ಪಡಕೆ ಅವರ ತಂಡ, ಸಪ್ತಸ್ವರ ಆರ್ಟ್ ಅಂಡ್ ಕ್ರಿಯೇಷನ್ಸ್ ಅವರ ತಂಡ, ಭ್ರಮರಿ ಜ್ಯೋತಿ ಪಟ್ಟಭಿರಾಮನ್ ಅವರ ತಂಡ, ನೂಪುರ ಫೈನ್ ಆರ್ಟ್ಸ್ ತಂಡಗಳಿಂದ ನೃತ್ಯರೂಪಕಗಳನ್ನು ; ಖ್ಯಾತ ಕಲಾವಿದರಾದ ವಿದ್ವಾನ್ ಅನೂರು ಅನಂತಕೃಷ್ಣಶರ್ಮ, ಮತ್ತು ಪಂ.ಪ್ರವೀಣ್ ಗೋಡ್ಕಿಂಡಿ ಅವರಿಂದ ಸ್ವರಲಯ ಸಮ್ಮೇಳನ.

ಡಾ. ಸುಮಾ ಸುಧೀಂದ್ರ ಅವರಿಂದ ವಾದ್ಯಮೇಳ ; ಶಿವಲಿಂಗಪ್ಪ ರಾಜಾಪೂರ ಹಾಗೂ ಇತರರಿಂದ ಬಾನ್ಸುರಿ ವಾದನ ; ಮಂಗಳೂರು ಲಾವಣ್ಯ ಮತ್ತು ಸುಬ್ಬಲಕ್ಷ್ಮಿ ಅವರಿಂದ ಸ್ಯಾಕ್ಸೋಫೋನ್ ; ಡಾ. ಸುಪರ್ಣ ರವಿಶಂಕರ್‌ತಂಡದಿಂದ ಪಂಚವಾದ್ಯಗಳ ನಾದಮೇಳ ; ಪ್ರಕಾಶ್ ಸೊಂಟಕ್ಕಿ ಗಿಟಾರ್‌ ವಾದನ ; ಡಿ.ಎಸ್.ಚಾಳೇಕರ್ ಅವರಿಂದ ಪಂಚಸಿತಾರ್ ವಾದನ ; ರಾಜಗೋಪಾಲ ಕಲ್ಲೂರಕರ ಮತ್ತು ಅವರ ತಂಡದಿಂದ ತಬಲ ತರಂಗ ; ರಾಷ್ಟ್ರಮಟ್ಟದಿಂದ ಡಾ. ಬಾಲಮುರಳಿಕೃಷ್ಣ ಅವರಿಂದ ಕರ್ನಾಟಕ ಸಂಗೀತ ; ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಗೀತಸೌರಭ ; ಶಿವಮಣಿ ತಂಡದವರಿಂದ ವಾದ್ಯಲಹರಿ ; ವಿಜಯಪ್ರಕಾಶ್ ತಂಡದವರಿಂದ ಸಂಗೀತ ಸಂಜೆ ; ಒರಿಸ್ಸಾ ತಂಡದಿಂದ ಗೋಟಿ ಪೂವಾ, ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಭಾಗವಹಿಸುತ್ತಿರುವ ಇತರ ಕಲಾವಿದರು : ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ಧನ, ಪಿಚ್ಚಳ್ಳಿ ಶ್ರೀನಿವಾಸ್, ಜೋಗಿಲ ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ಬಸವಲಿಂಗಯ್ಯ ಹಿರೇಮಠ್, ವೇಮಗಲ್ ನಾರಾಯಣಸ್ವಾಮಿ, ರಾಮು ಮೂಲಗಿ, ತಂಬೂರಿ ರಾಜಮ್ಮ, ಮರಿಸಿದ್ದಮ್ಮ, ರಾಧಾಬಾಯಿ ಮಾದರ್, ಜಯಂತಿ ಶ್ರೀನಿವಾಸ್, ಮೈಸೂರು ಮಹಾದೇವಪ್ಪ, ವಿನುತಾ ಬೂದಾಳ್, ಕೆ.ಯುವರಾಜ್, ವೀರೇಶ್ ಬಳ್ಳಾರಿ, ಶ್ರೀ ಸೋಬಾನೆ ಕೃಷ್ಣೇಗೌಡ ಮಳವಳ್ಳಿ, ಮಹದೇವ್ ಯುಗಧರ್ಮ ರಾಮಣ್ಣ, ಗಣಪಗೌಡ, ಮುಂತಾದ ಹಿರಿಯ/ಕಿರಿಯ ಕಲಾವಿದರಿಂದ ಜಾನಪದ ಗೀತೆಗಳ ಗಾಯನ ಹಾಗೂ ಜಾನಪದ ನೃತ್ಯ ವೈಭವ.

ಸುಗಮ ಸಂಗೀತ ಕ್ಷೇತ್ರ : ಡಾ.ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರ, ಈಶ್ವರಪ್ಪ ಮಿಣಜಿ, ವೈ.ಕೆ.ಮುದ್ದುಕೃಷ್ಣ, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ರಮೇಶ್ಚಂದ್ರ, ಮಾಲಾಶ್ರೀ ಕಣವಿ, ಪಿ.ಎ. ಮಂಗಳ, ದಿವ್ಯಾ ರಾಘವನ್, ಯಶವಂತ ಹಳಬಂಡಿ, ಫಲ್ಗುಣ, ಸಂಗೀತ ಕಾಖಂಡಕಿ, ಲತಾ ಜಹಾಗೀರ್‌ದಾರ್, ಉದಯ ಅಂಕೋಲ, ಹಿಂದೂ ವಿಶ್ವನಾಥ್, ಎಚ್.ಆರ್.ಲೀಲಾವತಿ, ಶಶಿಧರ್ ಕೋಟೆ, ರವಿಶಂಕರ್, ಚಂದ್ರಿಕಾ ಗುರುರಾಜ್, ಅರ್ಚನಾ ಉಡುಪ, ಜ್ಯೋತಿ ರವಿಪ್ರಕಾಶ್, ಕಸ್ತೂರಿ ಶಂಕರ್, ಉಪಾಸನ ಮೋಹನ್, ಕಿಕ್ಕೇರಿ ಕೃಷ್ಣಮೂರ್ತಿ, ಸ್ನೇಹ ಹಂಪಿಹೊಳಿ, ನಾಗಚಂದ್ರಿಕಾ ಭಟ್, ಪ್ರೇಮಲತಾ ದಿವಾಕರ, ಮೃತ್ಯುಂಜಯ ದೊಡ್ಡವಾಡಿ, ವಿ.ರಾಜು, ರಮಾ ಅರವಿಂದ್, ನಾರಾಯಣರಾವ್ ಮಾನೆ, ಅಲ್ಲದೆ ಯುವ ಪ್ರತಿಭೆಗಳಾದ ಸಿಂಚನಾ, ಆಕಾಂಕ್ಷ, ಎಂ.ಎಸ್.ಮೀನಾಕ್ಷಿ, ಸೂಗೂರೇಶ್ ಅಸ್ಕಿಹಾಳ, ಮುಂತಾದ ಯುವಪ್ರತಿಭೆಗಳನ್ನೊಳಗೊಂಡ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ಕಲಾವಿದರು ಹಾಗೂ ಕಿರುತೆರೆಯ ಕಲಾವಿದರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ ; ಇದಲ್ಲದೆ ಕರ್ನಾಟಕ ಪ್ರಗತಿಯನ್ನು ಕುರಿತಂತೆ ವಿಶೇಷವಾಗಿ ಲೇಸರ್ ಶೋ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ; ಮೂರು ವೇದಿಕೆಗಳಲ್ಲಿ ರಾಜ್ಯದ ಎಲ್ಲಾ ಕಡೆಯಿಂದ 50 ನಾಟಕಗಳನ್ನು (ಹವ್ಯಾಸಿ, ವೃತ್ತಿ, ಯಕ್ಷಗಾನ, ಬಯಲಾಟ, ಪ್ರಸಂಗಗಳು ಸೇರಿ) ಏರ್ಪಡಿಸಲಾಗಿದೆ ; ಬೀದಿರಂಗ, ಯುವರಂಗ, ವೃತ್ತಿನಾಟಕದ ತುಣುಕುಗಳ 150 ಪ್ರದರ್ಶನಗಳಿವೆ.

ವಾಷಿಂಗ್ಟನ್ ಡಿ.ಸಿ.ಯ ಕಾವೇರಿ ಕನ್ನಡ ಸಂಘದವರು 'ಯಯಾತಿ' ನಾಟಕವನ್ನು ; ದುಬೈ ರಂಗಸಿರಿ ಅವರು 'ಒಡಕಲು ಬಿಂಬ' ನಾಟಕವನ್ನು ; ದೆಹಲಿ ಕನ್ನಡ ಸಂಘದವರು 'ನಾ ಸತ್ತಿಲ್ಲ' ; ಮುಂಬೈಯ ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಷನ್‌ರವರು ಸಾದರಪಡಿಸುವ ನಾಟಕಗಳನ್ನು ; ಮುಂಬೈನಿಂದ ಒಂದು ಯಕ್ಷಗಾನ ತಂಡವು ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡುತ್ತಿವೆ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+