ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯರ ನೂರು ಕೋಟಿ ಮೌಲ್ಯದ ಫಾರ್ಮ್ ಹೌಸ್ ಇಡಿ ಸುಪರ್ದಿಗೆ

|
Google Oneindia Kannada News

ನವದೆಹಲಿ, ಮೇ 19: ಮದ್ಯದ ದೊರೆ-ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯಗೆ ಸೇರಿದ ನೂರು ಕೋಟಿ ಮೌಲ್ಯದ, ಮಹಾರಾಷ್ಟ್ರದ ಆಲಿಭಾಗ್ ನಲ್ಲಿ ಸಮುದ್ರದ ಬಳಿಯಿರುವ ಫಾರ್ಮ್ ಹೌಸ್ ಅನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿಕೊಂಡಿದೆ. ಇದು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಾರಿ ನಿರ್ದೇಶನಾಲಯ ತೆಗೆದುಕೊಂಡಿರುವ ಕ್ರಮ.

ಈ ಆಸ್ತಿಯು ಹದಿನೇಳು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಿವೆನ್ಷನ್ ಮನಿ ಲಾಂಡ್ರಿಂಗ್ ಕಾಯ್ದೆ ಅನ್ವಯ ಈ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಜಾಗ ಬಿಟ್ಟು ಕಳಚಿಕೊಳ್ಳಿ ಎಂದು ಕಳೆದ ಏಪ್ರಿಲ್ ನಲ್ಲಿ ಇಲ್ಲಿ ವಾಸ್ತವ್ಯ ಹೂಡಿದ್ದವರಿಗೆ ಆದೇಶ ನೀಡಲಾಗಿತ್ತು.

Vijay Mallya

"ಈ ಆಸ್ತಿ ಮಡ್ವ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ್ದು, ಇದರ ನಿಯಂತ್ರಣ ಮಲ್ಯ ಮಾಡುತ್ತಿದ್ದಾರೆ" ಎಂದು ಜಾರಿ ನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಸೊಗಸಾದ ಫಾರ್ಮ್ ಹೌಸ್ ಅನ್ನು ಮುಂಬೈ ವಲಯ ಕಚೇರಿಯಿಂದ ಜಾರಿ ನಿರ್ದೇಶನಾಲಯವು ಸುಪರ್ದಿಗೆ ಪಡೆದಿದೆ. ಇನ್ನೊಂದು ಮಾತು ಈ ಆಸ್ತಿಯ ನೋಂದಣಿ ಮೌಲ್ಯ ಇಪ್ಪತ್ತೈದು ಕೋಟಿಯಂತೆ. ಆದರೆ ಮಾರುಕಟ್ಟೆ ಮೌಲ್ಯ ನೂರು ಕೋಟಿ ರುಪಾಯಿ.

ವಿಜಯ್ ಮಲ್ಯ ಹಾಗೂ ಇತರರ ವಿರುದ್ಧ ಒಂಬೈನೂರು ಕೋಟಿ ರುಪಾಯಿ ಐಡಿಬಿಐ ಬ್ಯಾಂಕ್ ಗೆ ಸಾಲ ನೀಡದ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ಕ್ರಿಮಿನಲ್ ಆರೋಪ ಪಟ್ಟಿ ಸಲ್ಲಿಸಿದೆ.

English summary
The Enforcement Directorate Thursday confiscated a Rs. 100-crore worth beachside farmhouse in Maharashtra's Alibaug "controlled" by beleaguered liquor baron Vijay Mallya in connection with its money laundering probe against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X