42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ
ಮುಂಬೈ, ಮೇ.18: ಸುಮಾರು 42 ವರ್ಷಗಳಿಂದ ಮರಣಶಯ್ಯೆಯಲ್ಲಿದ್ದ ಕನ್ನಡತಿ ನರ್ಸ್ ಅರುಣಾ ರಾಮಚಂದ್ರ ಶಾನಭಾಗ ಅವರಿಗೆ ಚಿರನಿದ್ರೆ ಪ್ರಾಪ್ತಿಯಾಗಿದೆ. ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಇಹಲೋಕ ವೇದನೆ ಮುಗಿಸಿದ್ದಾರೆ.
1973ರ ನವೆಂಬರ್ 27ರಂದು 27ರ ಹರೆಯದ ಯುವತಿ ಕೆಇಎಂ ಆಸ್ಪತ್ರೆಯ ಸ್ಟಾಫ್ ನರ್ಸ್ ಅರುಣಾ ಅವರ ಮೇಲೆ ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ ಲಾಲ್ ವಾಲ್ಮೀಕಿ ಅತ್ಯಾಚಾರ ಎಸಗಿದ್ದ.
ನಾಯಿಗಳನ್ನು ಕಟ್ಟಿಹಾಕುವಂಥ ಸರಪಳಿಯಿಂದ ಆಕೆಯಕುತ್ತಿಗೆ ಕಟ್ಟಿ ಅತ್ಯಾಚಾರವೆಸಗಿದ್ದ. ಅತ್ಯಾಚಾರದಿಂದ ಘಾಸಿಗೊಂಡ ಅರುಣಾಳ ಮಿದುಳಿನಲ್ಲಿ ರಕ್ತಸ್ರಾವವಾಗಿ ದೃಷ್ಟಿ ಕುಂಠಿತವಾಗಿದ್ದಲ್ಲದೆ, ಮಾತನಾಡುವ ಶಕ್ತಿ ಹಾಗೂ ಪರಿಸರದ ಬಗ್ಗೆ ಸಂವೇದನೆಯನ್ನೂ ಘಾಸಿಗೊಳಿಸಿತು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಸಹಾಯದಿಂದ ಸುಮಾರು 40 ಕ್ಕೂ ಅಧಿಕ ವರ್ಷ ಕೋಮಾ ಅವಸ್ಥೆಯಲ್ಲಿ ಕಾಲ ದೂಡಬೇಕಾಯಿತು.
World's oldest comatose patient Aruna Shanbaug dead
— IANS Tweets (@ians_india) May 18, 2015 ನಾಲ್ಕನೆಯ ನಂಬರಿನ ವಾರ್ಡ್' ನಲ್ಲಿದ್ದ ಅರುಣಾ ಅವರಿಗೆ ಮರಣ ಭಿಕ್ಷೆಯೂ ಸಿಕ್ಕಿರಲಿಲ್ಲ. ಇತ್ತ ಅತ್ಯಾಚಾರಿಗೆ 7 ವರ್ಷ ಶಿಕ್ಷೆಯಾಯಿತು. ಕೊನೆಗೆ 'ಏಡ್ಸ್ ಕಾಯಿಲೆ'ಯಿಂದ ಹತನಾದ. [ದಯಾಮರಣ ಕುರಿತು ಸಣ್ಣಕಥೆ]
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರದ ಅರುಣಾ ಜನಿಸಿದ್ದು ಜೂನ್, 1, 1948ರಲ್ಲಿ, ಹುಟ್ಟೂರಿನ ಶಾಲೆಯಲ್ಲೇ ಕಲಿತ ಅರುಣಾಗೆ ರೋಗಿಗಳಿಗೆ ಶುಶ್ರೂಷೆ ಮಾಡುವ ಉದ್ದೇಶದಿಂದ ಮುಂಬೈಗೆ ಬಂದು 'ಕೆ.ಇ.ಎಮ್ ಆಸ್ಪತ್ರೆ'ಯಲ್ಲಿ ನರ್ಸ್ ಕೆಲಸಕ್ಕೆ ಸೇರಿದ್ದರು. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದ ಅರುಣಾ ಮೇಲೆ ಅತ್ಯಾಚಾರದ ಮಾರಕವಾಗಿ ಪರಿಣಮಿಸಿತು.

ದಯಾ ಮರಣವೂ ಸಿಗಲಿಲ್ಲ
ಅರುಣಾ ಶಾನಭಾಗ್ ಅನುಭವಿಸುತ್ತಿರುವ ಮಾನಸಿಕ ವೇದನೆ ನೋಡಲಾರದೆ ಆಕೆ ಸ್ನೇಹಿತೆ ಪಿಂಕಿ ವಿನಾನಿ ಅವರು ದಯಾಮರಣ ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.. ಆದರೆ, ನ್ಯಾಯಾಲಯದಿಂದ ದಯಾಮರಣಕ್ಕೆ ಅವಕಾಶ ಸಿಗಲಿಲ್ಲ. ಕೊನೆಗೂ ಅರುಣಾ ಶಾನಭಾಗ್ ಕ್ರೂರ ನರಕದ ಬದುಕಿಗೆ ಮುಕ್ತಿ ಸಾವಿನ ಮೂಲಕ ಸಿಕ್ಕಿದೆ.
|
ಕೆಇಎಂ ಆಸ್ಪತ್ರೆ ಸಹದ್ಯೋಗಿಗಳಿಗೆ ಒಂದು ನಮನ
ಅರುಣಾಳನ್ನು ನೋಡಿಕೊಂಡ ಕೆಇಎಂ ಆಸ್ಪತ್ರೆ ಸಹದ್ಯೋಗಿಗಳಿಗೆ ಒಂದು ನಮನ.
|
ಎಲ್ಲೆಡೆಯಿಂದ ಅರುಣಾಗಾಗಿ ಕಂಬನಿ ಧಾರೆ ಹರಿದಿದೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅರುಣಾಗಾಗಿ ಕಂಬನಿ ಧಾರೆ ಹರಿದಿದೆ.
|
ಕೊನೆಗೂ ದೇವರು ದಯಾ ಮರಣ ಕರುಣಿಸಿದ
ಬದುಕಿದ್ದಾಗ ಆಕೆಗೆ ನ್ಯಾಯ ಸಿಗಲಿಲ್ಲ. ಕೊನೆಗೂ ದೇವರು ದಯಾ ಮರಣ ಕರುಣಿಸಿದ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications