ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ

2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ.

By Mahesh
|
Google Oneindia Kannada News

ನವದೆಹಲಿ, ಜನವರಿ 04: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ.

ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ನಸೀಮ್ ಜೈದಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಐದು ರಾಜ್ಯಗಳ ಚುನಾವಣೆ ಮತದಾನ ದಿನ ಹಾಗೂ ಫಲಿತಾಂಶದ ದಿನಾಂಕ ವಿವರ ಮುಂದಿದೆ: [LIVE: 5 ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ]

* ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
* ಐದು ರಾಜ್ಯಗಳಲ್ಲೂ ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
* 5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿವೆ.
* ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು.

* 5 ರಾಜ್ಯಗಳಲ್ಲಿ ಸುಮಾರು 1.85 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ. (ಒನ್ಇಂಡಿಯಾ ಸುದ್ದಿ)

ಗೋವಾ

ಗೋವಾ

* ಫೆಬ್ರವರಿ 4 (ಶನಿವಾರ) ರಂದು ಒಂದೇ ಹಂತದಲ್ಲಿ ಮತದಾನ.
* ಒಟ್ಟು 40 ಅಸೆಂಬ್ಲಿ ಕ್ಷೇತ್ರ
* ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಪಂಜಾಬ್

ಪಂಜಾಬ್

* ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
* ಒಟ್ಟು 117 ಅಸೆಂಬ್ಲಿ ಕ್ಷೇತ್ರ
* ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಉತ್ತರಾಖಂಡ್

ಉತ್ತರಾಖಂಡ್

* ಫೆಬ್ರವರಿ 15(ಬುಧವಾರ)ರಂದು ಮತದಾನ.
* ಒಟ್ಟು 70 ಅಸೆಂಬ್ಲಿ ಕ್ಷೇತ್ರ.
* ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಮಣಿಪುರ

ಮಣಿಪುರ

* ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8.
* ಮೊದಲ ಹಂತದಲ್ಲಿ 38 ಕ್ಷೇತ್ರ, ಎರಡನೇ ಹಂತದಲ್ಲಿ 22 ಕ್ಷೇತ್ರ
* ಒಟ್ಟು 60 ಅಸೆಂಬ್ಲಿ ಕ್ಷೇತ್ರ
* ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಉತ್ತರಪ್ರದೇಶ

ಉತ್ತರಪ್ರದೇಶ

* ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ.
* ಒಟ್ಟು 403 ಅಸೆಂಬ್ಲಿ ಕ್ಷೇತ್ರ
* ಮೊದಲ ಹಂತ: ಫೆಬ್ರವರಿ 11
* ಎರಡನೇ ಹಂತ : ಫೆಬ್ರವರಿ 15
* ಮೂರನೇ ಹಂತ : ಫೆಬ್ರವರಿ 19
* ನಾಲ್ಕನೇ ಹಂತ: ಫೆಬ್ರವರಿ 23
* ಐದನೇ ಹಂತ: ಫೆಬ್ರವರಿ 27
* ಆರನೇ ಹಂತ : ಮಾರ್ಚ್ 04
* ಏಳನೇ ಹಂತ: ಮಾರ್ಚ್ 08
* ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
* ಮಾರ್ಚ್ 11 ರಂದು ಫಲಿತಾಂಶ.

English summary
5-state polls: UP to begin on Feb 11; results for all states on March 11. The Election Commission announced guidelines for the upcoming assembly polls in five states. Here is what we know till now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X