ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಕೆಚ್ಚೆದೆಯ ನೆಲದಲ್ಲಿ ಕಾಂಗ್ರೆಸ್ ಉಡ್ತಾ 'ಪಂಜಾಬ್'

|
Google Oneindia Kannada News

ಅಮೃತಸರ, ಮಾರ್ಚ್ 11: ಪಂಜಾಬ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಮುಗಿಯುತ್ತಾ ಬಂದಿದೆ. ಆದರೆ, ಎಲ್ಲಾ ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಆದರೆ, ಈವರೆಗಿನ ಪ್ರಗತಿಯಲ್ಲಿ 79 ಸ್ಥಾನಗಳಲ್ಲಿ ಮುಂದಿರುವ ಕಾಂಗ್ರೆಸ್ ಪಕ್ಷ, ಪಂಜಾಬ್ ನಲ್ಲಿ ಅಧಿಕಾರ ಗದ್ದುಗೆಯನ್ನೇರುವುದು ಬಹುತೇಕ ಖಚಿತವಾಗಿದೆ.

ಇನ್ನು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಸಿನಂತೆ, ಸರ್ಕಾರ ಸ್ಥಾಪಿಸುವ ಅವಕಾಶಗಳನ್ನು ಹೊಂದಿದ್ದ ಆಮ್ ಆದ್ಮಿ ಪಾರ್ಟಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ.

ಇದೇ ಮೊದಲ ಬಾರಿಗೆ ಪಂಜಾಬ್ ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದರೂ, ಈ ಮೊದಲ ಯತ್ನದಲ್ಲೇ ಪ್ರತಿಪಕ್ಷವಾಗಿ ಹೊರಹೊಮ್ಮಿರುವುದನ್ನು ನೋಡಿದರೆ, ಆಮ್ ಆದ್ಮಿ ಪಾರ್ಟಿಯ ಸಾಧನೆ ಮೆಚ್ಚತಕ್ಕಂಥದ್ದೇ. [ಮಣಿಪುರ | ಗೋವಾ | ಉತ್ತರಪ್ರದೇಶ | ಉತ್ತರಾಖಂಡ್]

ಈವರೆಗಿನ ಮತ ಎಣಿಕೆಯಲ್ಲಿ ಪಕ್ಷಗಳ ಸಾಧನೆ (ಪಂಜಾಬ್: ಒಟ್ಟು ಸ್ಥಾನಗಳು 117, ಬಹುಮತಕ್ಕೆ ಬೇಕಾಗಿರುವುದು 59)

* 12:09 - ಕಾಂಗ್ರೆಸ್ 75, ಆಪ್ 21, ಅಕಾಲಿದಳ- ಬಿಜೆಪಿ 15, ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆ

* 12:09 - ಕಾಂಗ್ರೆಸ್ 72, ಅಕಾಲಿದಳ-ಬಿಜೆಪಿ 18, ಆಪ್ 25, ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆ

* 11:31 - ಕಾಂಗ್ರೆಸ್ 70, ಅಕಾಲಿದಳ-ಬಿಜೆಪಿ 19, ಆಪ್ 25, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ

* 10:36 - ಕಾಂಗ್ರೆಸ್ 65, ಅಕಾಲಿದಳ-ಬಿಜೆಪಿ 28, ಆಪ್ 24 ಕ್ಷೇತ್ರಗಳಲ್ಲಿ ಮುನ್ನಡೆ

* 9:48 - ಕಾಂಗ್ರೆಸ್ 65, ಅಕಾಲಿದಳ-ಬಿಜೆಪಿ 29, ಆಪ್ 23 ಕ್ಷೇತ್ರಗಳಲ್ಲಿ ಮುನ್ನಡೆ

* 9:48 - ಕಾಂಗ್ರೆಸ್ 58, ಅಕಾಲಿದಳ-ಬಿಜೆಪಿ 23, ಆಪ್ 23 ಕ್ಷೇತ್ರಗಳಲ್ಲಿ ಮುನ್ನಡೆ

* 9:39 - ಕಾಂಗ್ರೆಸ್ 55, ಅಕಾಲಿದಳ-ಬಿಜೆಪಿ 26, ಆಪ್ 22 ಕ್ಷೇತ್ರಗಳಲ್ಲಿ ಮುನ್ನಡೆ

* 9:27 - ಕಾಂಗ್ರೆಸ್ 47, ಅಕಾಲಿದಳ-ಬಿಜೆಪಿ 11, ಆಪ್ 18 ಕ್ಷೇತ್ರಗಳಲ್ಲಿ ಮುನ್ನಡೆ

* 9:18 - ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಮುನ್ನಡೆ

* 9:02 - ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಮುನ್ನಡೆ

* 9:02 - ಅಮೃತಸರ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ ನವಜೋತ್ ಸಿಂಗ್ ಸಿಧು ಮುನ್ನಡೆ

* 9:00 - ಜಲಾಲಾಬಾದ್ ಕ್ಷೇತ್ರದಲ್ಲಿ ಅಕಾಲಿದಳದ ಸುಖ್ಬಿಂದರ್ ಸಿಂಗ್ ಗೆ ಹಿನ್ನಡೆ

* 8:50 - ಕಾಂಗ್ರೆಸ್ 20ರಲ್ಲಿ, ಆಪ್ 14ರಲ್ಲಿ, ಶಿರೋಮಣಿ ಪ್ಲಸ್ 4 ಕ್ಷೇತ್ರಗಳಲ್ಲಿ ಮುನ್ನಡೆ

* 8:40 - ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಮುನ್ನಡೆ, ಶಿರೋಮಣಿ ಪ್ಲಸ್ (ಶಿರೋಮಣಿ ಹಾಗೂ ಮಿತ್ರ ಪಕ್ಷಗಳು) 2ರಲ್ಲಿ ಹಾಗೂ ಆಪ್ 7ರಲ್ಲಿ ಮುನ್ನಡೆ

* 8:35 - ಲಂಬಿ ಕ್ಷೇತ್ರದಿಂದ ಹಾಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ (ಶಿರೋಮಣಿ ಅಕಾಲಿದಳ) ಮುನ್ನಡೆ, ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2ನೇ ಸ್ಥಾನದಲ್ಲಿ (ಅಮೃತಸರ ವಿಧಾನಸಭೆ) ಹಾಗೂ ಜರ್ನೈಲ್ ಸಿಂಗ್ (ಆಪ್ ಪಕ್ಷ - ಲಂಬಿ ಕ್ಷೇತ್ರ) ಮೂರನೇ ಸ್ಥಾನದಲ್ಲಿ

* 8:30 - ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ, ಶಿರೋಮಣಿ ಹಾಗೂ ಮಿತ್ರ ಪಕ್ಷಗಳು 3ರಲ್ಲಿ ಹಾಗೂ ಆಮ್ ಆದ್ಮಿ ಪಕ್ಷ 4ರಲ್ಲಿ ಮುನ್ನಡೆ

* 8:20 - ಮೊದಲಿಗೆ ಐದು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭ, ಶಿರೋಮಣಿ ಅಕಾಲಿ ದಳ 1ರಲ್ಲಿ, ಕಾಂಗ್ರೆಸ್ 2ರಲ್ಲಿ, ಆಪ್ ಪಕ್ಷ 2ರಲ್ಲಿ ಮುನ್ನಡೆ

* 8:05 - ಮತ ಎಣಿಕೆ ಆರಂಭ; ಮೊದಲಿಗೆ ಅಂಚೆ ಮತಗಳ ಎಣಿಕೆ

Punjab Assembly Election Result 2017 Live

ಆದರೆ, ಈ ಅವಕಾಶ ಹಾಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಜುಗಲ್ ಬಂದಿಗೆ ಇಲ್ಲ. ಅಷ್ಟೇ ಅಲ್ಲ ಈ ಜುಗಲ್ ಬಂದಿಗೆ ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಆಗಲಿದೆ ಎಂದೂ ಹೇಳಲಾಗಿದೆ.

ಅಂದಹಾಗೆ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಥವಾ ಕಾಂಗ್ರೆಸ್, ಈ ಎರಡೂ ಪಕ್ಷಗಳ ಕಡೆಗೆ ಜನಬೆಂಬಲ ಹೆಚ್ಚಿವೆ ಎನ್ನಲಾಗಿದೆಯಾದರೂ, ಇದು ಅತಂತ್ರ ವಿಧಾನಸಭೆಗೆ ಕಾರಣವಾಗದು ಎಂದೂ ಸಮೀಕ್ಷೆಗಳು ಹೇಳಿವೆ.

English summary
In Punjab equal opportunities for both Congress and AAP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X