ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಸರ್ಚ್: ನರೇಂದ್ರ ಮೋದಿ ನಂ.1

By Mahesh
|
Google Oneindia Kannada News

ನವದೆಹಲಿ, ಅ.8: ಗುಜರಾತಿನ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಅವರು ಕಳೆದ ಆರು ತಿಂಗಳಲ್ಲಿ ಅಂತರ್ಜಾಲದಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ರಾಜಕೀಯ ಮುಖಂಡ ಎಂದು ಗೂಗಲ್ ಇಂಡಿಯಾ ವರದಿ ಮಾಡಿದೆ. ಇದರ ಜತೆಗೆ ಶೇ 40ರಷ್ಟು ನಗರವಾಸಿ ಮತದಾರರು ಇನ್ನೂ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಹೇಳಲಾಗದೆ ಗೊಂದಲದಲ್ಲಿದ್ದಾರೆ ಎಂದು ಗೂಗಲ್ ಹೇಳಿದೆ.

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರ ನಂತರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಹುಡುಕಾಟ ಜೋರಾಗಿ ನಡೆದಿದೆ. ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಭ್ರಷ್ಟಾಚಾರ ವಿರೋಧಿ ಆಂದೋಲನದ ರುವಾರಿ ಅರವಿಂದ್ ಕೇಜ್ರಿವಾಲ ಅವರ ಹೆಸರುಗಳು ಕಾಣಿಸಿಕೊಂಡಿದೆ.

ಮುಂಬರುವ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ ಹಾಗೂ ಅವರ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

Google Search : Modi tops, Urban Voters undecided

ಉತ್ತರಪ್ರದೇಶದ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಗೂಗಲ್ ಸರ್ಚ್ ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಮೋದಿ ಅವರ ಬಿಜೆಪಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಪಕ್ಷವಾಗಿ ಹೊರ ಹೊಮ್ಮಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು ನಂತರದ ಸ್ಥಾನದಲ್ಲಿ ಕೇಜ್ರಿವಾಲ ಅವರ ಆಮ್ ಆದ್ಮಿ ಪಕ್ಷ, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಹಾಗೂ ಶಿವಸೇನೆ ಇದೆ.

ಗೂಗಲ್ ಸರ್ಚ್ ಇಂಜಿನ್ ಮಾಹಿತಿಯಂತೆ ಟಾಪ್ 10 ಅತಿ ಹೆಚ್ಚು ಹುಡುಕಲ್ಪಟ್ಟ ರಾಜಕಾರಣಿಗಳ ಪೈಕಿ ನಾಲ್ವರು ಕಾಂಗ್ರೆಸ್ಸಿಗರು ಹಾಗೂ ಇಬ್ಬರು ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದಾರೆ.

ಮತದಾರರ ಚಿತ್ತ: ಶೇ 42ಕ್ಕೂ ಅಧಿಕ ನಗರವಾಸಿ ಮತದಾರರು ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅನೇಕರಲ್ಲಿ ಇನ್ನೂ ಗೊಂದಲ ಮುಂದುವರೆದಿದೆ. ಸಮೀಕ್ಷೆ ಪ್ರಕಾರ ಇನ್ನೊಂದು ಕುತೂಹಲದ ಅಂಶ ಬೆಳಕಿಗೆ ಬಂದಿದ್ದು ಪಕ್ಷಕ್ಕಿಂತ ಸ್ಥಳೀಯ ಮುಖಂಡರಿಗೆ ಮತ ಹಾಕುವುದು ಒಳ್ಳೆಯದು ಎಂಬ ಭಾವನೆ ಹೊರ ಬಿದ್ದಿದೆ.

ಪ್ರಧಾನಿ ಅಭ್ಯರ್ಥಿ ಘೋಷಣೆಯಿಂದ ಪಕ್ಷಕ್ಕೆ ಆಗುವ ಲಾಭ ನಷ್ಟದ ಬಗ್ಗೆ ಉತ್ತರಿಸಿರುವ ನೆಟ್ಟಿಗರು ಶೇ 11ರಷ್ಟು ಮಂದಿ ಮಾತ್ರ ಈ ರೀತಿ ಘೋಷಣೆ ಉಪಯುಕ್ತವಾಗಿದೆ ಎಂದಿದ್ದಾರೆ.

ಮುಂಬರುವ ಚುನಾವಣೆ ಬಗ್ಗೆ ವಿವಿಧ ಸ್ತರಗಳಲ್ಲಿ, ವಿವಿಧ ರೀತಿಯಲ್ಲಿ ಗೂಗಲ್ ಇಂಡಿಯಾ ಸಮೀಕ್ಷೆ ನಡೆಸುತ್ತಿದೆ. ಸುಮಾರು 7000 ಗ್ರಾಹಕರು 108 ಕ್ಷೇತ್ರಗಳ ಮತದಾರರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. 543 ಲೋಕಸಭೆಯ ಶೇ 20ರಷ್ಟು ಕ್ಷೇತ್ರಗಳ ಸಮೀಕ್ಷೆ ಇದಾಗಿದ್ದು, ಕಳೆದ ಆರು ತಿಂಗಳ ಎಣಿಕೆ, ಗ್ರಹಿಕೆಗೆ ನಿಲುಕಿದ ಫಲಿತಾಂಶ.

ಸ್ಥಳೀಯ ಮುಖಂಡರ ಬಗ್ಗೆ ಮಾಹಿತಿ ಕೊರತೆ ಎದುರಾಗಿರುವುದು ನಗರವಾಸಿಗಳ ಗೊಂದಲಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅಂತರ್ಜಾಲದಲ್ಲಿ ಅಭ್ಯರ್ಥಿಗಳು, ಪಕ್ಷಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲ ಎಂಬ ಕೊರತೆ ಎದ್ದು ಕಾಣುತ್ತಿದೆ. ಮಾಹಿತಿ ಮಹಾಪೂರ ಹರಿದರೆ ಅರ್ಧದಷ್ಟು ಮತದಾರರು ಹೆಚ್ಚೆಚ್ಚು ತಮ್ಮ ಮುಖಂಡರ ಬಗ್ಗೆ ತಿಳಿದು ಮತದಾನ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

English summary
The Google India survey reveals that Gujrat CM Narendra Modi has emerged as the politician most searched on the Internet in the past six months. The survey also reveals that over 40 per cent urban Indian voters are undecided on the political party of their choice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X