ಶೀಘ್ರವೇ ಆನ್ ಲೈನ್ ಸೇವೆಗೆ ತೆರೆದುಕೊಳ್ಳಲಿರುವ ಮಿಲಿಟರಿ ಕ್ಯಾಂಟೀನ್!
ಸೇನಾ ಕ್ಯಾಂಟೀನ್ ಗಳು ಇನ್ನು ಆನ್ ಲೈನ್ ಗೆ. ಶೀಘ್ರದಲ್ಲೇ ಅಂತರ್ಜಾಲದಲ್ಲಿ ಸೇವೆ ಆರಂಭಿಸಲು ಕ್ಯಾಂಟೀನ್ ಸ್ಟೋರ್ಸ್ ಇಲಾಖೆ ನಿರ್ಧಾರ.
ನವದೆಹಲಿ, ಆಗಸ್ಟ್ 16: ರಿಯಾಯಿತಿ ದರಗಳಲ್ಲಿ ಗೃಹೋಪಯೋಗಿ ವಸ್ತುಗಳು, ದಿನಿಸುಗಳನ್ನು ಮಾರಾಟ ಮಾಡುವ ಮೂಲಕ ಮಿಲಿಟರಿ ಕ್ಯಾಂಟೀನ್ ಗಳು ಇನ್ನು ಆನ್ ಲೈನ್ ನಲ್ಲಿ ತನ್ನ ಸೇವೆಯನ್ನು ಆರಂಭಿಸಲಿದೆ. ಮಿಲಿಟರಿ ಕ್ಯಾಂಟೀನ್ ಗಳಿಗೆ ಸಾಮಾನು, ಸರಬರಾಜು ಮಾಡುವ ಕ್ಯಾಂಟೀನ್ ಸ್ಟೋರ್ಸ್ ಇಲಾಖೆಯು (ಸಿಎಸ್ ಡಿ) ಈ ವಿಚಾರವನ್ನು ಪ್ರಕಟಿಸಿದೆ.
ಭೂಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ಸುಮಾರು 1.2 ಕೋಟಿ ಗ್ರಾಹಕರಿಗೆ ಈವರೆಗೆ ತನ್ನ ಸಂಸ್ಥಾಪಿತ ಮಿಲಿಟರಿ ಕ್ಯಾಂಟೀನ್ ಗಳ ಮೂಲಕ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಈ ಇಲಾಖೆಯು, ಬದಲಾದ ಮಾರುಕಟ್ಟೆಗೆ ತಕ್ಕಂತೆ ಹೊಂದಿಕೊಳ್ಳಲು ನಿರ್ಧರಿಸಲಾಗಿದೆ.

ಭಾರತದ ಅತಿ ಹೆಚ್ಚಾದ ರಿಟೇಲ್ ನೆಟ್ ವರ್ಕ್ ಎಂದೇ ಪರಿಗಣಿಸಲ್ಪಟ್ಟಿರುವ ಸಿಎಸ್ ಡಿ ಸಂಸ್ಥೆಯು ದೇಶಾದ್ಯಂತ ಸುಮಾರು 17 ಸಾವಿರ ಕೋಟಿ ರು.ಗಳ ವ್ಯವಹಾರ ನಡೆಸುತ್ತದೆ. ಇದೀಗ, ಈ ವ್ಯವಸ್ಥೆಯನ್ನು ವಿಸ್ತರಿಸುವ ಮೂಲಕ ಆನ್ ಲೈನ್ ನಲ್ಲೂ ಸಾಮಗ್ರಿಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವುದಾಗಿ ಅದು ಹೇಳಿದೆ.
ಈ ಕುರಿತಂತೆ, ಭಾರತದ ಜನಪ್ರಿಯ ಬ್ರಾಂಡ್ ಗಳಾದ ಹಿಂದೂಸ್ತಾನ್ ಯೂನಿಲಿವರ್, ಪ್ರಾಕ್ಟರ್ ಆ್ಯಂಡ್ ಗ್ಯಾಂಬೆಲ್ ಮುಂತಾದ ಸಂಸ್ಥೆಗಳೊಂದಿಗೆ ಮಾತುಕತೆ ಸಾಗಿದ್ದು, ಶೀಘ್ರವೇ ಆನ್ ಲೈನ್ ಸೇವೆಗೆ ಸಜ್ಜಾಗಲಿದೆ ಎಂದು ಸಿಎಸ್ ಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications