ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!
ಹುಬ್ಬಳ್ಳಿ, ಜುಲೈ 20: ಮುಂಗಾರು ಮಳೆ ಧರೆಗಿಳಿಯುತ್ತಿದ್ದಂತೆ ಟೊಮೆಟೋ ಬೆಳೆ ಕೊಚ್ಚಿ ಹೋಗಿದೆ. ಪರಿಣಾಮ ಟೊಮೆಟೋ ಬೆಲೆ ಸೆಂಚುರಿ ಬಾರಿಸುವ ಸನ್ನಾಹದಲ್ಲಿದೆ.
ಟೊಮೆಟೋ ದರ ಏರಿಕೆ ಗೃಹಿಣಿಯರೂ ಸೇರಿದಂತೆ ಹೋಟೆಲ್ ಮಾಲಿಕರಿಗೆ ಕಣ್ಣೀರು ತರಿಸುತ್ತಿದೆ. ಆದರೆ ಈ ಕಹಿಯ ಮಧ್ಯೆಯೂ ನಗೆ ಉಕ್ಕಿಸುತ್ತಿವೆ ಉತ್ತರ ಕರ್ನಾಟಕದ ಜೋಕುಗಳು.
ಟೊಮೇಟೋ ದರ ಏರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಜೋಕ್ಸ್‌ಗಳು ಹರಿದಾಡುತ್ತಿದ್ದು ಜನರ ಗಮನ ಸೆಳೆಯುತ್ತಿವೆ. ಫೇಸ್‌ಬುಕ್, ವಾಟ್ಸ್‌ಅಪ್ ಹಾಗೂ ಟಿಟ್ವರ್‌ನಲ್ಲಿ ಆಕರ್ಷಕವಾಗಿ ಮೂಡಿ ಬರುತ್ತಿರುವ ಈ ಜೋಕುಗಳು ಟೊಮೆಟೋ ದರ ಏರಿಕೆಯ ನೋವಿನ ಮಧ್ಯೆಯೂ ಗ್ರಾಹಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿವೆ.
ಟೊಮೆಟೊ ದರ ಏರಿಕೆ ನಿತ್ಯ ಜೀವನದ ಮೇಲೆ ಬೀರಿದ ಪರಿಣಾಮವನ್ನು ಹಾಸ್ಯದ ರೀತಿಯಲ್ಲಿ ಬಿಂಬಿಸಲಾಗಿದ್ದು, ಇಂಥ ಕೆಲವು ಜೋಕ್ಸ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ, ನೀವು ನೋಡಿ ನಕ್ಕು ಬಿಡಿ.

ಉತ್ತರ ಕರ್ನಾಟಕ ಜೋಕ್ಸ್
ಅದರಲ್ಲೂ ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ ಜನಪ್ರಿಯವಾಗಿರುವ ಹಾಗೂ ಲಕ್ಷಾಂತರ ಜನರು ಮೆಚ್ಚಿಕೊಂಡಿರುವ 'ಉತ್ತರ ಕರ್ನಾಟಕ ಜೋಕ್ಸ್' ಪೇಜಿನಲ್ಲಿ ತರಹೇವಾರಿ ಹಾಸ್ಯಗಳು ಮೂಡಿ ಬರುತ್ತಿವೆ.
'ಮನ್ಯಾಗ ಎಷ್ಟ ಬಂಗಾರ, ಹಣ ಇದ್ರ ಏನು ಉಪಯೋಗ, ನೆಟ್ಟಗೆ 1ಕೆಜಿ ಟೊಮೆಟೊ ಇಲ್ಲ ಅಂದ್ರ' ಅಂತ ಮೆಮ್ಸ್ ಗಳಲ್ಲಿ ಹಾಸ್ಯ ಮಾಡಲಾಗುತ್ತಿದೆ. ಈ ಮೂಲಕ ಟೊಮೆಟೋ ಸದ್ಯ ಚಿನ್ನಕ್ಕಿಂತಲೂ ದುಬಾರಿಯಾಗಿದೆ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.

ಪೆಟ್ರೋಲ್ ಬೆಲೆ 20 ರೂ. ಕಡಿಮೆ
ನಿನ್ನೆಯ ತನಕ ಪೆಟ್ರೋಲ್ ದರದ್ದೇ ಜನ ಸಾಮಾನ್ಯರ ಚಿಂತೆಯಾಗಿತ್ತು. ಇದೀಗ ಪೆಟ್ರೋಲನ್ನು ಟೊಮೆಟೋ ಮೀರಿಸಿದ್ದರಿಂದ 'ಪೆಟ್ರೋಲ್ ಬೆಲೆ 20 ರೂಪಾಯಿ ಕಡಿಮೆ, ಟೊಮೆಟೊಗಿಂತ', ಅಂತ ಜನ ಮಾತಾಡಿಕೊಳ್ತಿದ್ದಾರೆ.

ಟೊಮೆಟೋ ಖರೀದಿಸಿದವನೇ ಶ್ರೀಮಂತ!
ಈಗ ಶ್ರೀಮಂತ ಎಂದು ತೋರಿಸಿಕೊಳ್ಳಲು ಕಾರು, ಚಿನ್ನ ತೋರಿಸಬೇಕಾಗಿಲ್ಲ. ಟೊಮೆಟೋ ಕೈಯಲ್ಲಿದ್ದರೆ ಸಾಕು. ನೀವೇ ಶ್ರೀಮಂತರು. ಅದಕ್ಕೆ ಉದಾಹರಣೆಯಾಗಿದೆ ಈ ಜೋಕ್.

ಪ್ರಾಮಾಣಿಕತೆಗೂ ಟೊಮೆಟೋ ಸಾಕ್ಷಿ!
ಆಟೋದಲ್ಲಿ ಬಿಟ್ಟು ಹೋದ ಪರ್ಸ್ ಕೊಟ್ಟವನೇ ಮಹಾ ಪ್ರಮಾಣಿಕ ಅಂತಿತ್ತು. ಕಾಲ ಬದಲಾಗಿದೆ; ಟೊಮೆಟೋ ವಾಪಸ್ ಕೊಟ್ಟೂ ನಿಮ್ಮ ಪ್ರಾಮಾಣಿಕತೆ ಮೆರೆಯಬಹುದು. ಇದೇ ಟೊಮೆಟೋ ಮಹಿಮೆ.
',ಹುಬ್ಬಳ್ಳಿಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಟೊಮೆಟೋಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ' ಎನ್ನುವುದು ಸುದ್ದಿಯೂ ಆಗಬಹುದು. ಪೇಪರಿನಲ್ಲಿ ಬಂದರೂ ಆಶ್ಚರ್ಯವಿಲ್ಲ.

ಟೊಮೆಟೋ ಸ್ಮಾರಕ
ಪ್ರೀಯೆ ನಿನ್ನ ಸಲುವಾಗಿ ಗೋಳಗುಮ್ಮಟ ಕಟ್ಟಸ್ಲೋ ಬಾರಕಮಾನ ಕಟ್ಟಿಸ್ಲೋ ಅಂತ ಕೇಳಿದ್ರೆ ಹುಡುಗಿ ಸೈಲೆಂಟಾಗಿ ಹೇಳಿದ್ದಿಷ್ಟೆ, 'ಲೇ ಹುಚ್ಚಾ ಹಟ್ಯಾ ಮೆನೆಯಾಗ ಟೊಮೆಟೋ ಖಾಲಿ ಆಗ್ಯಾವಾ ಮೊದಲು ಅದನ್ನ ತೊಗೊಂಡ ಬಾ'! ಪಾಪ ಗೋಳಗುಮ್ಮಟವನ್ನು ಟೊಮೆಟೋ ಮೀರಿಸುತ್ತೆ ಅಂತ ಪಾಪ ಅದಕ್ಕೆ ಕಲ್ಪನೆನೂ ಇರಲಿಕ್ಕಿಲ್ಲ.
ಹೀಗೆ 'ಉತ್ತರ ಕರ್ನಾಟಕ ಸ್ಪೇಷಲ್' ಹೆಸರಿನ ಪೇಜ್ ನಲ್ಲೂ ಟೊಮೆಟೋ ಜೋಕ್ಸ್‌ಗಳು ಭರ್ಜರಿಯಾಗಿ ಮೂಡಿ ಬರುತ್ತಿವೆ.

ಬರ್ತ್ ಡೇ ಗೂ ಟೊಮೆಟೋ ಗಿಫ್ಟ್
ಜೋಕ್ಸ್‌ಗಳಿಗೆ ಅನುಗುಣವಾಗಿ ಬಳಕೆ ಮಾಡುವ ಪೋಟೊಗಳೂ ಜನರನ್ನು ಆಕರ್ಷಿಸುತ್ತಿವೆ. ಇವುಗಳಿಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿನ್ನ ಬರ್ತಡೇಗೆ ಏನು ಬೇಕು ಅಂತ ಕೇಳಿದರೆ ಟೊಮೆಟೋ ಕೊಡು ಎನ್ನುವಲ್ಲಿವರೆಗೆ ಕಾಲ ಬದಲಾಗಿದೆ. ಟೊಮೆಟೋದ ಡಿಮ್ಯಾಂಡೇ ಹಾಗಿದೆ.

ಸಾಯಲಿಕ್ಕ ಹೊರಟಾಗಲೂ ಟೊಮೆಟೋದ್ದೇ ಚಿಂತೆ
ಗಂಡ ಸಾಯಲಿಕ್ಕೆ ಹೊರಟಾಗಲೂ ಹೆಂಡತಿ ಜತೆಗೆ ಬ್ಯಾಗ್ ತೆಗೊಂದು ಹೋಗಿ ಅನ್ನುತ್ತಿದ್ದಾಳೆ. ಸತ್ತಿಲ್ಲದಿದ್ದರೆ ಬರುವಾಗ ಟೊಮೆಟೋ ತರಬೇಕಂತೆ. ಗಂಡನಿಗಿಂತಲೂ ಪಾಪ ಹೆಂಡತಿಗೆ ಅಡುಗೆಗೆ ಬಳಸುವ ಟೊಮೆಟೋದ್ದೇ ಚಿಂತೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications