ಜೂ. 21ರಂದು ಮಾಯಾವಿ ಸರೋವರ ನಾಟಕ
ಬೆಂಗಳೂರು, ಜೂ. 19 : ರಂಗಭೂಮಿಯ ಮೇಲೆ ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತಿರುವ ಬೆಂಗಳೂರಿನ ‘ಹೆಜ್ಜೆ' ತಂಡ, "ಮಾಯಾವಿ ಸರೋವರ" ನಾಟಕವನ್ನು ಇದೇ ಶನಿವಾರ, ಜೂ. 21ರಂದು, ನಗರದ ಕೆ.ಎಚ್. ಕಲಾಸೌಧ ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ಪ್ರಸ್ತುತಪಡಿಸುತ್ತಿದೆ.
ಮುಂಬಯಿಯ ಖ್ಯಾತ ಅಭಿನೇತ್ರಿ ಅಹಲ್ಯಾ ಬಲ್ಲಾಳ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಮೂಲ ಹಿಂದಿ ರಚನೆ: ಡಾ. ಶಂಕರ್ ಶೇಷ್ ಅವರದ್ದು. ಕನ್ನಡಕ್ಕೆ ಅಮೆರಿಕನ್ನಡಿಗ ಡಾ. ಮೈ.ಶ್ರೀ. ನಟರಾಜ್ ಅವರು ಅನುವಾದಿಸಿದ್ದಾರೆ.
ಮುಂಗಡ ಬುಕಿಂಗ್, ಟಿಕೆಟ್ಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9900196591. ಟಿಕೆಟ್ ಮಾರಾಟದಿಂದ ಸಂಗ್ರಹವಾದ ಹಣದ ಒಂದು ಭಾಗವನ್ನು ಪ್ರತಿಭಾವಂತ ವಿದ್ಯಾರ್ಥಿನಿಗೆ ದೇಣಿಗೆಯಾಗಿ ನೀಡಲಾಗುತ್ತಿದೆ.

ಮಾಯಾವಿ ಸರೋವರ ನಾಟಕದ ಬಗ್ಗೆ
ಉತ್ತರ ಭಾರತದ 'ನೌಟಂಕಿ' ಶೈಲಿಯಲ್ಲಿ ಬರೆಯಲ್ಪಟ್ಟಿರುವ ಈ ನಾಟಕ ಅನೇಕ ಕಾರಣಗಳಿಂದಾಗಿ ವಿಶಿಷ್ಟವೆನಿಸುತ್ತದೆ. ಗಂಡು ಹೆಣ್ಣುಗಳ ವಿಭಿನ್ನ ವ್ಯಕ್ತಿತ್ವದಲ್ಲಿರುವ ಅನನ್ಯತೆಯನ್ನು ಶೋಧಿಸುವ ನಾಟಕದ ವಸ್ತು ಕಾಲ-ದೇಶಗಳನ್ನು ಮೀರುತ್ತದೆ. ಗಂಡು ಹೆಣ್ಣಿನ ನಡುವೆ ಪರಸ್ಪರ ಸ್ಪರ್ಧಾತ್ಮಕ ವೈರುದ್ಧ್ಯಗಳಿರುವಂತೆ ತೋರಿದರೂ ಅವರೀರ್ವರ ನಡುವೆ ಆಕರ್ಷಣೆ, ಅರ್ಪಣೆ ಮತ್ತು ಅವಲಂಬನೆ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಅಂತೆಯೇ ಪ್ರತಿ ಗಂಡಿನಲ್ಲಿ ಓರ್ವ ಹೆಣ್ಣು ಮತ್ತು ಪ್ರತಿ ಹೆಣ್ಣಿನಲ್ಲೂ ಒಬ್ಬ ಗಂಡು ಇರುವುದು ಅನುಭವವೇದ್ಯವೇ. ಇದು ಮೇಲ್ನೋಟಕ್ಕೆ ಪ್ರಹಸನವೆನಿಸಿದರೂ ಇಲ್ಲಿ ವ್ಯವಸ್ಥೆ, ಆಡಳಿತ, ಗಂಡು -ಹೆಣ್ಣಿನ ಪರಸ್ಪರ ಸಂಬಂಧ ಹಾಗೂ ಲಿಂಗಾಧಾರಿತ ಕಾರ್ಯವಿಭಜನೆ, ಮೌಲ್ಯಗಳಂತಹ ಗಂಭೀರ ವಿಷಯಗಳನ್ನು ವಿಡಂಬನೆಯ ಮೂಲಕ ಚರ್ಚಿಸಲಾಗಿದೆ.

ರಂಗದ ಮೇಲೆ
ಸೂತ್ರಧಾರ : ಸುರೇಂದ್ರಕುಮಾರ್ ಮಾರ್ನಾಡ್
ರಾಜ : ಮೋಹನ್ ಮಾರ್ನಾಡ್
ರಾಣಿ : ಅಹಲ್ಯ ಬಲ್ಲಾಳ್
ಸ್ತ್ರೀ : ಗೀತಾ ಶಂಕರ್
ಮಂತ್ರಿ : ಹರ್ಷಕುಮಾರ್ ಉಡುಪಿ
ಪತ್ರಿಕೆಯ ಎಡಿಟರ್ : ಮನೋಹರ್ ನಾಯಕ್
ವಿಶ್ವವಿದ್ಯಾಲಯದ ಡೈರೆಕ್ಟರ್ : ಪ್ರವೀಣ್ ಸುವರ್ಣ, ಬೈಕಂಪಾಡಿ
ಡೇರಿ ಬೋರ್ಡ್ ಅಧ್ಯಕ್ಷೆ : ಕೃಪಾ ಪೂಜಾರಿ
ನ್ಯಾಯಾಧೀಶ : ರಾಘವೇಂದ್ರ ಐತಾಳ್
ಕುಮಾರ : ಶಂತನು ಬಲ್ಲಾಳ್
ರಾಜಕುಮಾರ : ಭೀಮರಾವ್ ಚಿಲ್ಕಾ
ನರ್ತಕಿ : ರಕ್ಷಿತಾ ನಾಯಕ್
ಋಷಿ : ಅವಿನಾಶ್ ಕಾಮತ್
ರಂಗದ ಹಿಂದೆ
ಬೆಳಕು : ಚಂದ್ರಶೇಖರ್ ಹೆಗ್ಡೆ
ಸಂಗೀತ : ಜ್ಯೋತಿ ಭಟ್ ಹಾಗೂ ಶಂತನು
ಗಾಯನ : ಜ್ಯೋತಿ, ಅವಿನಾಶ್ ಹಾಗೂ ಶಂತನು
ತಬಲಾ ಹಾಗೂ ಢೋಲಕ್ : ಮನೋಜ್ ರಾವ್
ಪರಿಕರ : ಗಣೇಶಕುಮಾರ್
ವಿನ್ಯಾಸ ಹಾಗೂ ನಿರ್ದೇಶನ : ಅಹಲ್ಯಾ ಬಲ್ಲಾಳ್
ಮೂಲ ಹಿಂದಿ : ಡಾ. ಶಂಕರ್ ಶೇಷ್, ಕನ್ನಡಕ್ಕೆ: ಡಾ.ಮೈ.ಶ್ರೀ. ನಟರಾಜ್
ದಿನಾಂಕ : 21.06.2014
ಸಮಯ : ಸಂಜೆ 7.00 ಗಂಟೆ
ಸ್ಥಳ : ಕೆ.ಎಚ್.ಕಲಾಸೌಧ ರಂಗಮಂದಿರ, ಹನುಮಂತನಗರ, ಬೆಂಗಳೂರು.
ಆಯೋಜನೆ ಹಾಗೂ ನಿರ್ವಹಣೆ : ‘ಹೆಜ್ಜೆ' ಬೆಂಗಳೂರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications