ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ.ಆರ್‌.ನಾರಾಯಣನ್‌ : ಹಂತಹಂತ ಮೇಲೇರಿದ ಕೇರಳದ ದಲಿತ

By Staff
|
Google Oneindia Kannada News


K.Narayanan ಕೆ. ಆರ್‌. ನಾರಾಯಣನ್‌ 1920ರ ಅಕ್ಟೋಬರ್‌ 27ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಉಳವನೂರು ಗ್ರಾಮದಲ್ಲಿ ನಾಟಿ ಔಷಧ ವೈದ್ಯ ರಾಮನ್‌ ವೈದ್ಯನ್‌ ಪುತ್ರರಾಗಿ ಜನಿಸಿದರು. ದಿನಂಪ್ರತಿ 10 ಮೈಲು ನಡೆದು ಶಾಲೆಗೆ ಹೋಗುತ್ತಿದ್ದ ಅವರು ತಿರುವಾಂಕೂರು ವಿಶ್ವವಿದ್ಯಾಲಯ ಇಂಗ್ಲಿಷ್‌ ಸ್ನಾತಕೋತ್ತರ ಪದವಿಯಲ್ಲಿ ಇಡೀ ವಿವಿಗೆ ಮೊದಲಿಗರಾಗಿ ಉತ್ತೀರ್ಣರಾದ ನಂತರ ಅಲ್ಲೇ ಉಪನ್ಯಾಸಕರಾದರು. ನಂತರ ‘ಹಿಂದೂ’ ಹಾಗೂ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದರು. ‘ಸೋಷಿಯಲ್‌ ವೆಲ್‌ಫೇರ್‌’ ಪತ್ರಿಕೆಗೆ ಲಂಡನ್‌ ಬಾತ್ಮೀದಾರರಾಗಿ ಕೆಲಸ ನಿರ್ವಹಿಸಿದರು.

ಪತ್ರಕರ್ತರಾಗಿ ನಾರಾಯಣನ್‌ ಮಹಾತ್ಮ ಗಾಂಧಿಯವರ ಸಂದರ್ಶನ ಮಾಡಬಯಸಿ ಅದರಲ್ಲಿ ಯಶಸ್ವಿಯೂ ಆದರು. ತಿರುವಾಂಕೂರು ವಿವಿಯಲ್ಲಿ ಪ್ರಥಮ ರ್ಯಾಂಕ್‌ನಲ್ಲಿ ಉತ್ತೀರ್ಣರಾದರೂ ಅವರು ಹಿಂದುಳಿದವರು ಎಂಬ ಕಾರಣಕ್ಕೆ ಉಪನ್ಯಾಸಕ ಹುದ್ದೆ ನಿರಾಕರಿಸಲಾಯಿತು. ಬದಲಿಗೆ ಗುಮಾಸ್ತೆ ಹುದ್ದೆ ನೀಡಲಾಯಿತು. ವ್ಯಗ್ರರಾದ ನಾರಾಯಣನ್‌ ಪದವಿ ಸ್ವೀಕರಿಸಲು ನಿರಾಕರಿಸಿದರು. 50 ವರ್ಷಗಳ ನಂತರ ಅವರು ಉಪರಾಷ್ಟ್ರಪತಿಯಾದಾಗ ಇದೇ ವಿವಿ ಅವರಿಗೆ ಪದವಿ ಸ್ವೀಕರಿಸುವಂತೆ ಮತ್ತೆ ಕೋರಿತು. ನಾರಾಯಣನ್‌ ಸಂತೋಷದಿಂದ ಆ ಕೋರಿಕೆ ಮನ್ನಿಸಿದರು.

1949ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆ. ರಂಗೂನ್‌, ಟೋಕಿಯಾ, ಲಂಡನ್‌, ಆಸ್ಟ್ರೇಲಿಯಾ ಮತ್ತು ಹನೋಯಿಗಳಲ್ಲಿ ಸೇವೆ ಸಲ್ಲಿಕೆ. ಬರ್ಮಾದಲ್ಲಿ ಮಾರ್ಕ್‌ ಟ್ವಿಂಟ್‌ ಅವರ ಭೇಟಿ. ವಿವಾಹದ ನಂತರ ಟ್ವಿಂಟ್‌ ತಮ್ಮ ಹೆಸರನ್ನು ಉಷಾ ಎಂದು ಬದಲಾಯಿಸಿಕೊಂಡರು. ನಂತರ ನಾರಾಯಣನ್‌ ಕೆಲಕಾಲ ಬೋಧನಾವೃತ್ತಿ ನಿರ್ವಹಿಸಿದರು. 1967ರಲ್ಲಿ ಥಾಯ್ಲೆಂಡ್‌ನಲ್ಲಿ ಭಾರತ ರಾಯಭಾರಿಯಾಗಿ ನೇಮಕ. ನಂತರ ಇದೇ ಹುದ್ದೆಯಲ್ಲಿ ಚೀನಾದಲ್ಲಿ ನಂತರ ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ನೇಮಕ. ಬಳಿಕ ಜವಾಹರಲಾಲ್‌ ನೆಹರು ವಿವಿ ಕುಲಪತಿ ಅಮೆರಿಕದಲ್ಲಿ ಭಾರತ ರಾಯಭಾರಿಯಾಗಿ ನೇಮಕ.

ಇಂದಿರಾಗಾಂಧಿಯವರ ಮನವಿ ಮೇರೆಗೆ ರಾಜಕೀಯ ಪ್ರವೇಶ. 1984, 1989 ಮತ್ತು 1991ರಲ್ಲಿ ಸತತ ಮೂರು ಬಾರಿ ಕೇರಳದ ಒಟ್ಟಪಾಲಂನಿಂದ ಲೋಕಸಭೆ ಪ್ರವೇಶ. ರಾಜೀವ್‌ ಗಾಂಧಿ ಸಂಪುಟದಲ್ಲಿ ಯೋಜನಾ ರಾಜ್ಯ ಸಚಿವ, ವಿದೇಶಾಂಗ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಕಾರ್ಯನಿರ್ವಹಣೆ.

1992ರ ಆಗಸ್ಟ್‌ 21ರಂದು ಉಪರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆ. 1992ರಿಂದ 1997ರವರೆಗೆ ರಾಜ್ಯಸ ಸಭಾಪತಿಯಾಗಿ ಕಾರ್ಯನಿರ್ವಹಣೆ.

1997ರಲ್ಲಿ ದೇಶದ 10ನೇ ರಾಷ್ಟ್ರಪತಿಯಾಗಿ ಆಯ್ಕೆ. ಸಂಸ್ಕೃತಿಯ ಪರಿಚಯ ಇಲ್ಲ ಎಂಬ ಕಾರಣಕ್ಕೆ ಆರ್‌ಎಸ್‌ಎಸ್‌ ಇವರನ್ನು ವಿರೋಧಿಸಿತ್ತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಎದುರಾಳಿಯಾಗಿದ್ದರು. ಆದರೆ ನಾರಾಯಣನ್‌ ಶೆ.95ಕ್ಕೂ ಹೆಚ್ಚು ಮತಗಳಿಸಿ ಆಯ್ಕೆಯಾಗಿದ್ದರು. ಬಡಕುಟುಂಬದಲ್ಲಿ ಜನಿಸಿದರೂ ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಮೇಲೇರಿದ ನಾರಾಯಣನ್‌ ಶಿಕ್ಷಣ ತಜ್ಞ, ಆಡಳಿತಗಾರ, ಪತ್ರಕರ್ತ, ರಾಜತಂತ್ರಜ್ಞ ಹಾಗೂ ರಾಜ ನಾಯಕರಾಗಿ ಹೊರಹೊಮ್ಮಿದ್ದರು.

ದೇಶ ವಿದೇಶಗಳ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸದಸ್ಯತ್ವ, ಗೌರವ, ಫೆಲೋಷಿಪ್‌ ಪಡೆದಿದ್ದರು. ಬೆಂಗಳೂರಿನ ಜವಾಹರಲಾಲ್‌ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರದ ಗೌರವ ಫೆಲೋಷಿಪ್‌ ಸಹ ಪಡೆದಿದ್ದರು. ಅಮೆರಿಕ ಹಾಗೂ ಆಸ್ಟ್ರೇಲಿಯಾ ವಿವಿಗಳ ಗೌರವ ಡಾಕ್ಟರೇಟ್‌, ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿವಿಯ ವಾಚಸ್ಪತಿ(ಡಿ.ಲಿಟ್‌) ಪದವಿ ಪಡೆದಿದ್ದರು.

(ಸ್ನೇಹ ಸೇತು : ವಿಜಯಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X