ಕಾಂಗ್ರೆಸ್ ಚುಕ್ಕಾಣಿ ಮತ್ತು ಸಿಎಂ ಕುರ್ಚಿ ಪೈಕಿ ಅಶೋಕ್ ಗೆಹ್ಲೋಟ್ ಆಯ್ಕೆ ಯಾವುದು?
ನವದೆಹಲಿ, ಸೆಪ್ಟೆಂಬರ್ 21: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಪ್ರಶ್ನೆಗೆ ಅಶೋಕ್ ಗೆಹ್ಲೋಟ್ ಉತ್ತರ ಎನ್ನುವ ಸುದ್ದಿ ಹೈಕಮಾಂಡ್ ವಲಯದಲ್ಲಿ ಹರಿದಾಡುತ್ತಿದೆ. ಇದರ ಮದ್ಯೆ ರಾಜಸ್ಥಾನ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಆಗುತ್ತಿದೆ.
ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಪ್ರತಿಸ್ಪರ್ಧಿಯ ರೀತಿ ಗುರುತಿಸಿಕೊಂಡಿರುವ ಸಚಿನ್ ಪೈಲಟ್ ಇಲ್ಲದ ಸಮಯವನ್ನು ನೋಡಿಕೊಂಡು ತಮ್ಮ ಆಪ್ತರೊಂದಿಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಗೆಹ್ಲೋಟ್ ಸಭೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಆಗಿ ಗೆಹ್ಲೋಟ್ ಮುಂದುವರಿಯಲಿದ್ದಾರೆ ಎಂದು ಆಪ್ತರ ವಲಯದ ಶಾಸಕರೊಬ್ಬರು ಬಿಡಿಸಿ ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಕಮಿಟಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ನಾಯಕರು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಹುಲ್ ಗಾಂಧಿಯು ಕಾಂಗ್ರೆಸ್ ಸರ್ವೋಚ್ಛ ನಾಯಕರಾಗಲು ನಿರಾಕರಿಸಿದರೆ, ಆ ಕುರ್ಚಿಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ಈಗಾಗಲೇ ಶುರುವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ, ಸಮಸ್ಯೆಗಳಿಗೆ ಒಂದು ಹಂತದಲ್ಲಿ ಪರಿಹಾರ ಸಿಗಲಿದೆ. ಇದರ ಮಧ್ಯೆ ರಾಜಸ್ಥಾನ ಕಾಂಗ್ರೆಸ್ ಅಂಗಳದಲ್ಲಿ ಏನೆಲ್ಲಾ ಬೆಳವಣಿಗೆಳು ನಡೆಯುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ.

ರಾಜಸ್ಥಾನ ರಾಜಕಾರಣದಲ್ಲಿ ಹಿಂದೆ ಆಗಿದ್ದೇನು; ಈಗ ಆಗುತ್ತಿರುವುದೇನು?:
* ಅಶೋಕ್ ಗೆಹ್ಲೋಟ್ ರಾಜಸ್ಥಾನವನ್ನು ತೊರೆಯುವುದಿಲ್ಲ. ಮುಖ್ಯಮಂತ್ರಿ ಮತ್ತು ಇತರ ನಾಯಕರು ಅವರ ಉಮೇದುವಾರಿಕೆಯನ್ನು ನಿರ್ಧರಿಸುತ್ತಾರೆ ಎಂದು ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಎಂದು ಸ್ಪಷ್ಟವಾಗಿ ಹೇಳಿದರು.
* 71 ವರ್ಷದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್‌ನ ನಾಯಕತ್ವಕ್ಕಾಗಿ ಗಾಂಧಿ ಕುಟುಂಬದ ಆಯ್ಕೆಯಾಗಿ ಗುರುತಿಸಿಕೊಂಡಿದ್ದಾರೆ. ಇದು ಬಹಳ ಹಿಂದಿನ ವಿಷಯವೇ ಆಗಿದ್ದರೂ, ಅವರು ರಾಜಸ್ಥಾನದಲ್ಲಿ ತಮ್ಮ ಪಾತ್ರವನ್ನು ತ್ಯಜಿಸಲು ಇಷ್ಟವಿರಲಿಲ್ಲ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ರಾಷ್ಟ್ರ ರಾಜಕಾರಣಕ್ಕೆ ಲಗ್ಗೆಯಿದ್ದರೆ, ಅದರಿಂದ ತಮ್ಮ ಕಟು ಪ್ರತಿಸ್ಪರ್ಧಿ ಮತ್ತು ಮಾಜಿ ಉಪನಾಯಕ ಸಚಿನ್ ಪೈಲಟ್ ಮುನ್ನಲೆಗೆ ಬರುವ ಸಾಧ್ಯತೆ ಎದ್ದು ತೋರುತ್ತಿದೆ.
* ಅಶೋಕ್ ಗೆಹ್ಲೋಟ್ ಯಾವುದೇ ಮಂಡಳಿಯಲ್ಲಿಲ್ಲ ಎಂದು ಮೂಲಗಳು ಹೇಳುತ್ತವೆ. ಅವರನ್ನು ಬೆಂಬಲಿಸುವ ಶಾಸಕರೂ ಇಲ್ಲ. ತನ್ನ ಶಾಸಕರನ್ನು ಒಟ್ಟುಗೂಡಿಸುವ ಮತ್ತು ದೊಡ್ಡ ಬದಲಾವಣೆಗಳು ಮುಂದೆ ಬರಬಹುದಾದ ಸಮಯದಲ್ಲಿ ತನ್ನ ಹಿಂಡುಗಳನ್ನು ಒಟ್ಟಿಗೆ ಇಟ್ಟುಕೊಳ್ಳುವ ಅಶೋಕ್ ಗೆಹ್ಲೋಟ್ ಅವರ ವಿಧಾನವೇ ಶಕ್ತಿಯ ಪ್ರದರ್ಶನವಾಗಿದೆ.
* ಗೆಹ್ಲೋಟ್ ನಾಮಪತ್ರ ಸಲ್ಲಿಸಲು ಸೋಮವಾರವೇ ಒಪ್ಪಿಗೆ ಸೂಚಿಸಿದ್ದರೂ, ಕಾಂಗ್ರೆಸ್ ತನ್ನ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ, ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ರಾಹುಲ್ ಗಾಂಧಿಯನ್ನು ಮನವೊಲಿಸಲು ಆಶಿಸುತ್ತಿದ್ದಾರೆ ಎಂದು ವರದಿಯಾಗಿದೆ.
* ಕಾಂಗ್ರೆಸ್ ಅಧ್ಯಕ್ಷರಾದ ನಂತರವೂ ಸ್ವಲ್ಪ ಸಮಯದವರೆಗೆ ಮುಖ್ಯಮಂತ್ರಿಯಾಗಿ ಉಳಿಯಲು ಬಯಸುವುದಾಗಿ ಅಶೋಕ್ ಗೆಹ್ಲೋಟ್, ತಮ್ಮ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
* ರಾಷ್ಟ್ರೀಯ ರಾಜಕೀಯಕ್ಕೆ ಹೋಗಬೇಕಾದರೆ, ರಾಜಸ್ಥಾನದಲ್ಲಿ ನಿಷ್ಠಾವಂತರು ತಮ್ಮ ಪ್ರಾಕ್ಸಿಯಾಗಿ ಆಡಳಿತ ನಡೆಸಬೇಕೆಂದು ಅಶೋಕ್ ಗೆಹ್ಲೋಟ್ ಬಯಸುತ್ತಾರೆ. ಇಲ್ಲದಿದ್ದರೆ, ಸೋನಿಯಾ ಗಾಂಧಿ ಅವರನ್ನು ಪೂರ್ಣ ಸಮಯದ ಮುಖ್ಯಸ್ಥರಾಗಿ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅವರು ಎರಡೂ ಪಾತ್ರಗಳನ್ನು ಉಳಿಸಿಕೊಳ್ಳಲು ಬಯಸುವ ಬಗ್ಗೆ ಉಲ್ಲೇಖಿಸಿದ್ದಾರೆ.
* ಕಾಂಗ್ರೆಸ್ ಸೆಪ್ಟೆಂಬರ್ 30 ರವರೆಗೆ ನಾಮಪತ್ರಗಳನ್ನು ಸ್ವೀಕರಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಅಕ್ಟೋಬರ್ 17 ರಂದು ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶಗಳು ಹೊರ ಬೀಳಲಿದೆ.
* ಕಳೆದ 2020ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಬಿಜೆಪಿಯು ಸಚಿನ್ ಪೈಲಟ್ ದಂಗೆಯ ರೀತಿ ಬಿಕ್ಕಟ್ಟುಗಳನ್ನು ಸೃಷ್ಟಿಸಿತ್ತು. ಅದಾಗ್ಯೂ, ಅಶೋಕ್ ಗೆಹ್ಲೋಟ್ ಇಲ್ಲಿಯವರೆಗೆ ತಮ್ಮ ಹುದ್ದೆಯನ್ನು ಕಾಯ್ದುಕೊಂಡಿದ್ದು, ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.
* ಕಳೆದ 2020ರಲ್ಲಿ, ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದು, 18 ಶಾಸಕರೊಂದಿಗೆ ದೆಹಲಿಗೆ ಸ್ಥಳಾಂತರಗೊಂಡರು. ಗಾಂಧಿಯವರ ಮಧ್ಯಪ್ರವೇಶದ ನಂತರ ಒಂದು ತಿಂಗಳ ಕಾಲದಲ್ಲಿ ಪರಿಸ್ಥಿತಿ ತಿಳಿಗೊಂಡಿತು.
* 2018 ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಮುಖ್ಯಮಂತ್ರಿಯಾಗಲು ತೀವ್ರ ಪೈಪೋಟಿಯಲ್ಲಿದ್ದರು. ಕಾಂಗ್ರೆಸ್ ಮೂರನೇ ಬಾರಿಗೆ ಅಶೋಕ್ ಗೆಹ್ಲೋಟ್ ಅನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತು. ಸಚಿನ್ ಪೈಲಟ್ ಅನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.












Click it and Unblock the Notifications