ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳ್ಳೇಗಾಲದ ಮರಡಿಗುಡ್ಡದಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಾಮರಾಜನಗರವು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ನಿಸರ್ಗ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟಗುಡ್ಡ, ಅರಣ್ಯ ಪ್ರದೇಶಗಳು ಕೈಬೀಸಿ ಕರೆಯುತ್ತಿವೆ.

ಮೈಸೂರಿನಲ್ಲಿ ಗಮನ ಸೆಳೆದ ವಿಶ್ವ ಪ್ರವಾಸೋದ್ಯಮ ಜಾಥಾ ಮೈಸೂರಿನಲ್ಲಿ ಗಮನ ಸೆಳೆದ ವಿಶ್ವ ಪ್ರವಾಸೋದ್ಯಮ ಜಾಥಾ

ವಾರಪೂರ್ತಿ ಕೆಲಸದ ಒತ್ತಡದಲ್ಲಿರುವವರು ನಗರ ಜೀವನದ ಜಂಜಾಟದಲ್ಲಿ ಬೇಸತ್ತು ನೆಮ್ಮದಿ ಅರಸುವವರಿಗೆ ಚಾಮರಾಜನಗರದಲ್ಲಿ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ ಹೀಗೆ ನಿಸರ್ಗ ಸುಂದರ ತಾಣಗಳಿದ್ದು, ಇವುಗಳ ಸಾಲಿಗೆ ಜಿಲ್ಲೆಯ ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷ ವನವೂ ಸೇರಿದ್ದು ನಿಸರ್ಗವನ್ನು ಎಂಜಾಯ್ ಮಾಡುವವರಿಗೆ ಈ ತಾಣ ಹೇಳಿ ಮಾಡಿಸಿದಂತಿದೆ.

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಗೆ ಶೀಘ್ರದಲ್ಲೆ ರಾಜ್ಯ ಸೇರ್ಪಡೆ: ಸಿಎಂ ಬೊಮ್ಮಾಯಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಗೆ ಶೀಘ್ರದಲ್ಲೆ ರಾಜ್ಯ ಸೇರ್ಪಡೆ: ಸಿಎಂ ಬೊಮ್ಮಾಯಿ

ಇಷ್ಟಕ್ಕೂ ಮರಡಿಗುಡ್ಡದಲ್ಲಿ ಏನಿದೆ?. ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಸಾಹಸ ಪ್ರಿಯರಿಗೆ ಇಲ್ಲಿರುವ ಪ್ರಕೃತಿ ಮತ್ತು ಅದರ ನಡುವಿನ ಎರಡು ಬೆಟ್ಟದ ನಡುವಿನ ತಂತಿಯಲ್ಲಿ ಸಾಗುವ ಸಾಹಸಮಯ ಕ್ರೀಡೆ ಜಿಪ್ ಲೈನ್ ಆಕರ್ಷಿಸುತ್ತದೆ.

IRCTC ವೈದ್ಯಕೀಯ ಪ್ರವಾಸೋದ್ಯಮ ಪ್ಯಾಕೇಜ್: ಪಡೆಯುವುದು ಹೇಗೆ? ದರಗಳ ವಿವರ ಇಲ್ಲಿದೆ IRCTC ವೈದ್ಯಕೀಯ ಪ್ರವಾಸೋದ್ಯಮ ಪ್ಯಾಕೇಜ್: ಪಡೆಯುವುದು ಹೇಗೆ? ದರಗಳ ವಿವರ ಇಲ್ಲಿದೆ

ಜಿಪ್ ಲೈನ್ ಸಾಹಸ ಕ್ರೀಡೆ

ಜಿಪ್ ಲೈನ್ ಸಾಹಸ ಕ್ರೀಡೆ

ಚಾಮರಾಜನಗರಕ್ಕೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಹತ್ತಿರವಿರುವುದರಿಂದ ಮತ್ತು ಜಿಲ್ಲೆಯಲ್ಲಿ ಬಂಡೀಪುರ, ಮಲೆಮಹದೇಶ್ವರಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳು ಸೇರಿದಂತೆ ಹಲವು ಪ್ರೇಕ್ಷಣೀಯ ತಾಣಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಇಂತಹ ಪ್ರವಾಸಿಗರಿಗೆ ಅನುಕೂಲವಾಗುವಂತೆ ಜಿಪ್ ಲೈನ್ ಸಾಹಸ ಕ್ರೀಡೆಯನ್ನು ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷ ವನದಲ್ಲಿ ಆರಂಭಿಸಲಾಗಿದೆ.

ಹಸಿರು ಹಚ್ಚಡದ ನಿಸರ್ಗ ಸ್ವರ್ಗ

ಹಸಿರು ಹಚ್ಚಡದ ನಿಸರ್ಗ ಸ್ವರ್ಗ

ಮರಡಿಗುಡ್ಡಕ್ಕೆ ತೆರಳಿದರೆ ಪ್ರವಾಸಿಗರು ಅದರಲ್ಲೂ ನಿಸರ್ಗ ಪ್ರೇಮಿಗಳಾಗಿದ್ದರಂತು ತುಂಬಾ ಖುಷಿಪಡುತ್ತಾರೆ. ಏಕೆಂದರೆ ಈ ವೃಕ್ಷ ವನವು ಬೆಟ್ಟಗುಡ್ಡಗಳನ್ನೊಳಗೊಂಡ ಹಸಿರು ಹಚ್ಚಡದಿಂದ ಕೂಡಿದ್ದು ನಿಸರ್ಗ ಪ್ರಿಯರಿಗೆ ಮುದನೀಡುತ್ತದೆ. ಇಂತಹ ಸುಂದರ ಪರಿಸರದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತಂತಿಯಲ್ಲಿ ಸಾಗುವ ಮೈನವಿರೇಳಿಸುವ, ಸಾಹಸಮಯ ಕ್ರೀಡೆಯಾದ ಜಿಪ್ ಲೈನ್ ಖುಷಿಯನ್ನು ಇಮ್ಮಡಿಗೊಳಿಸುವುದರೊಂದಿಗೆ ಸುಂದರ ಕ್ಷಣಗಳನ್ನು ಕಟ್ಟಿಕೊಡುತ್ತದೆ.

ಹೊಸ ಅನುಭವ ನೀಡುವ ತಾಣ

ಹೊಸ ಅನುಭವ ನೀಡುವ ತಾಣ

ಮರಡಿಗುಡ್ಡ ವೃಕ್ಷ ವನದ ಬೆಟ್ಟ-ಗುಡ್ಡದ ನಡುವೆ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಂತಿಯನ್ನು ಅಳವಡಿಸಲಾಗಿದ್ದು, ಈ ತಂತಿ ಮೇಲೆ ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ಕೊಂಡು ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಮುಂದೆ ಸಾಗುವುದು ಹೊಸ ಅನುಭವ ಎಂದರೆ ತಪ್ಪಾಗಲಾರದು. ಇನ್ನು ಇಲ್ಲಿ ನುರಿತ ತರಬೇತಿದಾರರಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿರುವುದರಿಂದ ಸಾಹಸಪ್ರಿಯರು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಮುನ್ನಡೆಯಬಹುದು.

ಇಲ್ಲಿಗೆ ಬಂದು ಜಿಪ್ ಲೈನ್ ಸಾಹಸಕ್ಕಿಳಿಯುವ ಸಾಹಸಿಗರಿಗೆ ಅತ್ಯಾಧುನಿಕ 4ಜಿ ಗೋಪ್ರೋ ಕ್ಯಾಮರಾ ಸೆಲ್ಫಿ ಸ್ಟಿಕ್ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಪ್ರವಾಸಿಗರು ತಂತಿ ಮೂಲಕ ತೇಲುತ್ತಾ ಸಾಗುವ ಕ್ಷಣವನ್ನು ಸಾಕ್ಷಿಯಾಗಿಸಿ ಕೊಳ್ಳಬಹುದಾಗಿದೆ. ಈಗಾಗಲೇ ಹಲವು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಿಪ್ ಲೈನ್ ಸಾಹಸದ ಅನುಭವ ಪಡೆದಿದ್ದಾರೆ.

ಜಿಪ್ ಲೈನ್ ಕ್ರೀಡೆಯತ್ತ ಒಲವು

ಜಿಪ್ ಲೈನ್ ಕ್ರೀಡೆಯತ್ತ ಒಲವು

ಈ ಜಿಪ್ ಲೈನ್ ಸಾಹಸಕ್ರೀಡೆಯನ್ನು ಅರಣ್ಯ ಇಲಾಖೆಯು ಸುಮಾರು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಆರಂಭಿಸಿದೆ ಎನ್ನುವುದೇ ವಿಶೇಷವಾಗಿದೆ. ಸದ್ಯ ಜಿಪ್ ಲೈನ್ ಕ್ರೀಡೆಯತ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದು, ಇದರ ಮಜಾ ಸವಿಯಲೆಂದೇ ಬರುತ್ತಿದ್ದಾರೆ. ಒಂದಷ್ಟು ಮಂದಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮತ್ತೊಂದಷ್ಟು ಮಂದಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ದೂರದ ದೊಡ್ಡ ಮನೆ ಮಹಡಿಗಳ ಮೇಲೆ ನಿಂತು ನೋಡಿ ಖುಷಿಪಡುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಪ್ರಥಮ ಪ್ರಯೋಗವಾಗಿರುವ ಜಿಪ್ ಲೈನ್ ಸಾಹಸ ಕ್ರೀಡೆ ಪ್ರಕೃತಿ ನಡುವೆ ನಿರ್ಮಿತವಾಗಿರುವುದರಿಂದ ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿ ಮಜಾ ಉಡಾಯಿಸಲು ಯುವಕರು ಮತ್ತು ಯುವತಿಯರು ಇತ್ತ ಧಾವಿಸುತ್ತಾರೆ. ಇಲ್ಲಿ ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ಮಾತ್ರ ಅವಕಾಶವಿದೆ.

English summary
Zipline sports in Maradi Gudda of Kollegal taluk of Chamarajanagar district. It is the best place to spend weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X