ಇಂದಿನಿಂದ ಬೀದರ್-ಯಶವಂತಪುರ ರೈಲು ಸಂಚಾರ; ವೇಳಾಪಟ್ಟಿ, ನಿಲ್ದಾಣ
ಬೆಂಗಳೂರು, ಅಕ್ಟೋಬರ್ 29: ನೈಋತ್ಯ ರೈಲ್ವೆ ಯಶವಂತಪುರ-ಬೀದರ್-ಯಶವಂತಪುರ ನಡುವೆ ಹೊಸ ವಾರದ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಅಕ್ಟೋಬರ್ 29ರಂದು ಬೀದರ್‌ನಿಂದ ರೈಲು ಸೇವೆ ಆರಂಭವಾಗಲಿದೆ.
ಬೆಂಗಳೂರು ನಗರದ ಯಶವಂತಪುರ ಮತ್ತು ಬೀದರ್ ನಡುವೆ ರೈಲು ನಂಬರ್ 16577/ 16578 ಸಂಚಾರ ನಡೆಸಲಿದೆ. ಉದ್ಘಾಟನಾ ರೈಲು ಸಂಖ್ಯೆ 07020 ಅಕ್ಟೋಬರ್ 29ರ ಶನಿವಾರ ಸಂಜೆ 4.30ಕ್ಕೆ ಬೀದರ್‌ನಿಂದ ಹೊರಡಲಿದೆ. ಮರುದಿನ ಬೆಳಗ್ಗೆ 7.30ಕ್ಕೆ ಯಶವಂತಪುರ ತಲುಪಲಿದೆ.

ವೇಳಾಪಟ್ಟಿ, ನಿಲ್ದಾಣಗಳು; ಯಶವಂತಪುರದಿಂದ ನವೆಂಬರ್ 4ರಂದು ರೈಲು ನಂಬರ್ 16577 ಯಶವಂತಪುರ-ಬೀದರ್ ರೈಲು ಸಂಚಾರ ನಡೆಸಲಿದೆ. ಅಂದಿನಿಂದ ವಾರಕ್ಕೊಮ್ಮೆ ಸಂಚಾರ ನಡೆಸುವ ರೈಲುಗಳು ಸಾಮಾನ್ಯ ಸೇವೆ ಆರಂಭವಾಗಲಿದೆ.
ಉದ್ಘಾಟನಾ ದಿನದ ರೈಲು ಹುಮ್ನಾಬಾದ್, ಕಮಲಾಪುರ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಗೌರಿಬಿದನೂರು ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಯಶವಂತಪುರವನ್ನು ತಲುಪಲಿದೆ.
ವಿಶೇಷ ಉದ್ಘಾಟನಾ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿದೆ. ಇವುಗಳಲ್ಲಿ 1 ಎಸಿ ಟು ಟೈರ್, 2 ಎಸಿ ತ್ರಿ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಗ್ ಕಮ್ ಬ್ರೇಕ್ ವ್ಯಾನ್, 1 ಲಗೇಜ್ ಕಮ್ ಬ್ರೇಕ್ ವ್ಯಾನ್ ವಿತ್ ಜನರೇಟರ್ ಬೋಗಿಯನ್ನು ಹೊಂದಿದೆ.
ರೈಲುಗಳ ಸಾಮಾನ್ಯ ಸೇವೆ ಆರಂಭವಾದ ಬಳಿಕ ರೈಲು ನಂಬರ್ 16578 ಬೀದರ್-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಈ ರೈಲು 2.40ಕ್ಕೆ ಬೀದರ್‌ನಿಂದ ಹೊರಡಲಿದ್ದು, ಮುಂಜಾನೆ 4 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.
ಬೀದರ್‌ನಿಂದ ಹೊರಡುವ ರೈಲು ಹುಮ್ನಾಬಾದ್, ಕಮಲಾಪುರ, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಗೌರಿಬಿದನೂರು, ಯಲಹಂಕ ಮೂಲಕ ಯಶವಂತಪುರಕ್ಕೆ ಆಗಮಿಸಲಿದೆ.
ರೈಲು ಸಂಖ್ಯೆ 16577 ರೈಲು ಯಶವಂತಪುರ-ಬೀದರ್ ನಡುವೆ ಸಂಚಾರ ನಡೆಸಲಿದೆ. ಯಶವಂತಪುರದಿಂದ ರಾತ್ರಿ 11.15ಕ್ಕೆ ಹೊರಡುವ ರೈಲು ಬೀದರ್‌ಗೆ ಮಧ್ಯಾಹ್ನ 1.30ಕ್ಕೆ ಆಗಮಿಸಲಿದೆ.
ಯಶವಂತಪುರದಿಂದ ಹೊರಡುವ ರೈಲು ಯಲಹಂಕ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ, ಹುಮ್ನಾಬಾದ್ ಮೂಲಕ ಬೀದರ್ ತಲುಪಲಿದೆ.
ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸಲಿದೆ. ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈ ರೈಲು ಕಲಬುರಗಿ ಮೂಲಕ ಸಂಚಾರ ನಡೆಸುವುದರಿಂದ ಜಿಲ್ಲೆಯ ಜನರಿಗೆ ಸಹ ಅನುಕೂಲವಾಗಲಿದೆ.
ನೈಋತ್ಯ ರೈಲ್ವೆ ವಾರಕ್ಕೊಮ್ಮೆ ಸಂಚಾರ ನಡೆಸುವಂತೆ ಈ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಈ ರೈಲನ್ನು ಕಾಯಂಗೊಳಿಸಲು ಮತ್ತು ಪ್ರತಿದಿನ ಸಂಚಾರ ನಡೆಸುವಂತೆ ಮಾಡಲು ಶೀಘ್ರವೇ ಮನವಿ ಸಲ್ಲಿಸಲಾಗುತ್ತದೆ ಎಂದು ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka: ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ: ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications