ವೀಕೆಂಡ್ ಪ್ರವಾಸ: ಜಿನುಗು ಮಳೆ ನಡುವೆಯೇ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಹರಿದುಬಂತು ಪ್ರವಾಸಿಗರ ದಂಡು
ಚಿಕ್ಕಮಗಳೂರು, ಅಕ್ಟೋಬರ್, 01: ವೀಕೆಂಡ್ ಹಿನ್ನೆಲೆ ಅದರಲ್ಲೂ ಆಗಾಗ ಮಳೆಯಾಗುತ್ತಿರುವುದರಿಂದ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಪರಿಣಾಮ ಇಂದು ಕಾಫಿನಾಡಿನ ನೇತ್ರಾವತಿ, ಕುದುರೆಮುಖ, ಕಾರ್ಕಳ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ತುಂತುರು ಮಳೆಯಾಗುತ್ತಲೇ ಇದ್ದು, ಇದೇ ವೇಳೆ ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇಂದು ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಖರಕ್ಕೆ ಪ್ರವಾಸಿಗರ ದಂಡೇ ಹರಿದುಬಂದ ಹಿನ್ನೆಲೆ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರದಾಡಿದ್ದಾರೆ. ಅಲ್ಲದೆ ಅಲ್ಲಿನ ಸ್ಥಳೀರು ಕೂಡ ಟ್ರಕ್ಕಿಂಗ್‌ಗಾಗಿ ನೂರಾರು ಸಂಖ್ಯೆಯಲ್ಲಿ ಆಗಮಿಸಿರುವ ಪ್ರವಾಸಿಗರ ವಿರುದ್ಧ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸಾಲು ರಜೆ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನ ಮಳ್ಳಯ್ಯನಗಿರಿ, ದತ್ತಪೀಠ ಹಾಗೂ ಚಂದ್ರದ್ರೋಣ ಪರ್ವತ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಪ್ರವಾಸಿಗರು ಕುಟುಂಬ ಸಮೇತ ಎಂಟ್ರಿ ಕೊಡುತ್ತಲೇ ಇದ್ದು, ಪರಿಣಾಮ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ಪೋಸ್ಟ್ ಬಳಿ ಟ್ರಾಫಿಕ್ಜಾಮ್ ಉಂಟಾಗಿದ್ದು, ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ವಾಹನ ಸವಾರರು ಪರದಾಡಿದ್ದಾರೆ.
ಬೆಳಗ್ಗೆಯಿಂದ ಮುಳ್ಳಯ್ಯನಗಿರಿ ದತ್ತಪೀಠಕ್ಕೆ ಬರೊಬ್ಬರಿ 60 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆ. ಈ ಹಿನ್ನಲೆ ಪ್ರವಾಸಿ ತಾಣಗಳಿಗೆ ತೆರಳಲಾಗದೆ ಕೆಲ ಪ್ರವಾಸಿಗರು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ.












Click it and Unblock the Notifications