Independence Day 2023: ರಾಜಸ್ಥಾನದ ಈ ಅದ್ಬುತ ಸ್ಥಳಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಿ...

ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಹಲವು ಬದಲಾವಣೆಗಳಾಗಿವೆ. ದೇಶವು ಈಗಾಗಲೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶ್ರೀಮಂತವಾಗಿದೆ. ಕಾಲಕಳೆದಂತೆ ಪ್ರವಾಸಿ ತಾಣಗಳನ್ನು ಹೆಚ್ಚು ಆಕರ್ಷಕ ಮತ್ತು ಪರಿಣಾಮಕಾರಿಗೊಳಿಸಲಾಗಿದೆ. ಇದರಿಂದಾಗಿ ದೇಶ ಮತ್ತು ವಿದೇಶಗಳ ಪ್ರಯಾಣಿಕರು ಭಾರತೀಯ ಪ್ರವಾಸಿ ಪ್ರದೇಶಗಳಿಗೆ ಆಕರ್ಷಿತರಾದರು.

ದೇಶದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಅನೇಕ ಪ್ರವಾಸಿ ಸ್ಥಳಗಳಿವೆ. ಅದರ ಸೌಂದರ್ಯವು ವಿದೇಶಿ ದೃಶ್ಯಗಳಿಗಿಂತ ಕಡಿಮೆ ಏನೂ ಇಲ್ಲ. ಪರ್ವತಗಳಿಂದ ಕಡಲತೀರಗಳು ಮತ್ತು ಹಸಿರಿನಿಂದ ಮರುಭೂಮಿಗಳವರೆಗೆ ಎಲ್ಲಾ ರೀತಿಯ ನೋಡಲೇಬೇಕಾದಂತ ಸ್ಥಳಗಳು ಇವೆ. ಧಾರ್ಮಿಕ ಸ್ಥಳಗಳೊಂದಿಗೆ ಐತಿಹಾಸಿಕ ಸ್ಥಳಗಳಲ್ಲಿ ಸಮೃದ್ಧವಾಗಿರುವ ಭಾರತಕ್ಕೆ ಭೇಟಿ ನೀಡಲು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಜೆ ಇದೆ.

Visit this place in Rajasthan during Independence Day

ಆಗಸ್ಟ್ 15ರ ಹಿಂದಿನ ದಿನಗಳು ವಾರಾಂತ್ಯವಾಗಿರುವುದರಿಂದ ಮೂರು ನಾಲ್ಕು ದಿನಗಳ ರಜಾ ದಿನಗಳ ಅವಧಿ ಇದಾಗಿದೆ. ಹೀಗಿರುವಾಗ ನೀವು ಸ್ವಾತಂತ್ರ್ಯವನ್ನು ಆಚರಿಸಲು ಅನೇಕ ಸ್ಥಳಗಳಿಗೆ ಹೋಗಬಹುದು. ರಾಜಸ್ಥಾನ ತನ್ನ ಐತಿಹಾಸಿಕತೆ, ನೈಸರ್ಗಿಕ ನೋಟಗಳಿಗೆ ಹಾಗೂ ರಾಜ ವೈಭವಕ್ಕೆ ಹೆಸರುವಾಸಿಯಾಗಿದೆ. ಆಗಸ್ಟ್ 15ರ ಸಂದರ್ಭದಲ್ಲಿ ಇಲ್ಲಿ ಕೆಲವು ನಗರಗಳಿಗೆ ವಿಶೇಷವಾಗಿ ಭೇಟಿ ನೀಡಬಹುದು. ಮಾತ್ರವಲ್ಲದೆ ರಾಜಸ್ಥಾನದ ಈ ಸ್ಥಳಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಚ್ಚು ಉತ್ಸಾಹದಿಂದ ಆಚರಿಸಬಹುದು.

ದಯಪುರ

ಸ್ವಾತಂತ್ರ್ಯ ದಿನದಂದು ಭೇಟಿ ನೀಡಲು ಉದಯಪುರ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಅನೇಕ ಕೋಟೆಗಳು, ಅರಮನೆಗಳು ಮತ್ತು ಹೆರಿಟೇಜ್ ಹೋಟೆಲ್‌ಗಳನ್ನು ಆಗಸ್ಟ್ 15ರಂದು ತ್ರಿವರ್ಣ ಧ್ವಜದ ಬಣ್ಣದಿಂದ ಅಲಂಕರಿಸಲಾಗಿರುತ್ತದೆ. ಈ ನಗರದಲ್ಲಿ ಸಿಟಿ ಪ್ಯಾಲೇಸ್, ಪಿಚೋಲಾ ಲೇಕ್, ಫತೇಹಸಾಗರ್ ಲೇಕ್, ಸಜ್ಜನ್‌ಗಢ್ ಅರಮನೆ, ವಿಂಟೇಜ್ ಕಾರ್ ಮ್ಯೂಸಿಯಂ ಮತ್ತು ದೂದ್ ತಲೈ ಮ್ಯೂಸಿಕಲ್ ಗಾರ್ಡನ್ ಗೆ ಭೇಟಿ ನೀಡಬಹುದು.

Visit this place in Rajasthan during Independence Day

ಜೋಧಪುರ

ರಾಜಸ್ಥಾನದ ನೀಲಿ ನಗರ ಅಂದರೆ ಜೋಧಪುರ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಸ್ವಾತಂತ್ರ್ಯ ದಿನದಂದು ನೀವು ಸ್ವಾತಂತ್ರ್ಯವನ್ನು ಆಚರಿಸಲು ಜೋಧ್‌ಪುರಕ್ಕೆ ಹೋಗಬಹುದು. ಈ ನಗರದಲ್ಲಿ ಅನೇಕ ಸ್ಥಳಗಳಲ್ಲಿ ದೇಶಭಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೋಧ್‌ಪುರದಲ್ಲಿರುವ ಮೆಹ್ರಾನ್‌ಗಡ್ ಕೋಟೆಯನ್ನು ತ್ರಿವರ್ಣಗಳಿಂದ ಅಲಂಕರಿಸಲಾಗಿದೆ. ಜೋಧ್‌ಪುರವು ತೂರ್ಜಿ ಕಿ ಬವ್ಡಿ, ಉಮೈದ್ ಭವನ್ ಅರಮನೆ ಮತ್ತು ಜಸ್ವಂತ್ ಥಾಡಾದಂತಹ ಭೇಟಿ ನೀಡಲೇಬೇಕಾದಂತಹ ಕೆಲವು ಅತ್ಯುತ್ತಮ ಸ್ಥಳಗಳನ್ನು ಹೊಂದಿದೆ.

Visit this place in Rajasthan during Independence Day

ಮೌಂಟ್ ಅಬು

ರಾಜಸ್ಥಾನದ ಏಕೈಕ ಗಿರಿಧಾಮವಾಗಿರುವ ಮೌಂಟ್ ಅಬು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆಗಸ್ಟ್ 15 ರ ಸಂದರ್ಭದಲ್ಲಿ ಮೌಂಟ್ ಅಬುಗೆ ಭೇಟಿ ನೀಡಬಹುದು. ಸ್ವಾತಂತ್ರ್ಯ ದಿನಾಚರಣೆಯಂದು ಸೂರ್ಯ ಮುಳುಗಿದ ಕೂಡಲೇ ಮೌಂಟ್ ಅಬು ಬೆಳಗುವುದನ್ನು ನೋಡುವುದೇ ಒಂದು ಅದ್ಬುತ ಅನುಭವವಾಗಿದೆ.

Visit this place in Rajasthan during Independence Day

ಜೈಸಲ್ಮೇರ್

ಇನ್ನೂ ರಾಜಸ್ಥಾನದ ಅತ್ಯಂತ ಸುಂದರವಾದ ಮತ್ತು ಪ್ರವಾಸಿಗರ ನೆಚ್ಚಿನ ನಗರಗಳಲ್ಲಿ ಒಂದಾದ ಜೈಸಲ್ಮೇರ್‌ಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭೇಟಿ ನೀಡಬಹುದು. ಜೈಸಲ್ಮೇರ್ ರಾಜಸ್ಥಾನದ ಐತಿಹಾಸಿಕ ನಗರವಾಗಿದ್ದು, ಇಲ್ಲಿ ನೀವು ಸುಂದರವಾದ ಸರೋವರಗಳು, ಪ್ರಸಿದ್ಧ ದೇವಾಲಯಗಳು, ಹವೇಲಿಗಳು, ಅರಮನೆಗಳು ಮತ್ತು ಭಾರತ-ಪಾಕಿಸ್ತಾನ ಗಡಿಯನ್ನು ಭೇಟಿ ಮಾಡಬಹುದು. ಇಲ್ಲಿ ಇಂಡೋ-ಪಾಕ್ ಗಡಿಯು ಟ್ಯಾನೋಟ್ ಗಡಿಯಾಗಿದೆ. ಇದಕ್ಕೆ ಆಗಸ್ಟ್ 15 ರಂದು ಭೇಟಿ ಮಾಡಬಹುದು. ಈ ದಿನ ಇಲ್ಲಿ ಮೆರವಣಿಗೆ ಇರುತ್ತದೆ ಅದರಲ್ಲಿ ನೀವು ಭಾಗವಹಿಸಬಹುದು. ಇದಲ್ಲದೆ, ಜೈಸಲ್ಮೇರ್ ವಾರ್ ಮ್ಯೂಸಿಯಂ ಅನ್ನು ಸಹ ಭೇಟಿ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+