Karnataka KSRTC: ಬೆಂಗಳೂರಿನಿಂದ ಕೇರಳಕ್ಕೆ 31 ವಿಶೇಷ ಬಸ್‌ಗಳ ಸೇವೆ, ಏಕೆ?: ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್‌, 10: ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC)ವು ವಿಷು ರಜೆಯ ಮುನ್ನವೇ ಬೆಂಗಳೂರಿನಿಂದ ಕೇರಳಕ್ಕೆ 31 ವಿಶೇಷ ಬಸ್‌ಗಳನ್ನು ಬಿಡುವುದಾಗಿ ಘೋಷಣೆ ಮಾಡಿದೆ. ಏಪ್ರಿಲ್‌ 12ರಿಂದ 14ರವರೆಗೆ ರಾಜ್ಯದ ವಿವಿಧ ಭಾಗಗಳಿಗೆ ಬಸ್‌ ಸೇವೆಗಳು ಲಭ್ಯವಿರುತ್ತದೆ. ಇನ್ನು ಏಪ್ರಿಲ್‌ 13ರಿಂದ ಕರ್ನಾಟಕ ಆರ್‌ಟಿಸಿ ಬೆಂಗಳೂರಿನಿಂದ 23 ಬಸ್‌ಗಳನ್ನು ಓಡಿಲಸು ನಿರ್ಧಾರ ಮಾಡಿದೆ. ಹಾಗಾದರೆ ವಿಷು ರಜೆ ಎಂದರೆ ಏನು? ಈ ರಜೆಯನ್ನು ಯಾಕೆ ಕೊಡುತ್ತಾರೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆ

ಸಾಮಾನ್ಯವಾಗಿ ಕೇರಳದ ಕಡೆಗೆ ಏಪ್ರಿಲ್‌ 14, 15ರಂದು ಸಾರ್ವಜನಿಕವಾಗಿ ವಿಷು ರಜೆಯನ್ನು ಘೋಷಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿನ ಜನರು ರಜೆಯನ್ನು ಕಳೆಯಲು ಪ್ರವಾಸ ಕೈಗೊಳ್ಳುವ ಪ್ಲಾನ್‌ ಮಾಡಿಕೊಂಡಿರುತ್ತಾರೆ. ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗುವುದರಿಂದ ಕರ್ನಾಟದ ಬೆಂಗಳೂರಿನಿಂದಲೇ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕೇರಳಕ್ಕೆ ವಿಶೇಷ ಬಸ್‌ಗಳನ್ನು ಬಿಡಲಾಗಿದೆ.

Vishu holidays: Karnataka KSRTC announces 31 special bus services to Kerala, know dates details

ಮತ್ತೊಂದೆಡೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕಣ್ಣೂರು, ಕೋಝಿಕ್ಕೋಡ್, ಎರ್ನಾಕುಲಂ ಮತ್ತು ತಿರುವನಂತಪುರಂನಿಂದ ವಿಶೇಷ ಬಸ್‌ಗಳನ್ನು ಬಿಡಲು ನಿರ್ಧಾರ ಮಾಡಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಗೆಯೇ ಮಲಯಾಳಿ ಸಂಘಗಳು ಪದೇ ಪದೇ ಮನವಿ ಮಾಡಿದರೂ, ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲುಗಳನ್ನು ನಿಯೋಜಿಸಲು ದಕ್ಷಿಣ ರೈಲ್ವೆ ವಿಫಲವಾಗಿದೆ. ಆದ್ದರಿಂದ ಕೆಎಸ್ಆರ್‌ಟಿಸಿಯಿಂದಲೇ ಬೆಂಗಳೂರಿನಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೇರಳಕ್ಕೆ ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Vishu holidays: Karnataka KSRTC announces 31 special bus services to Kerala, know dates details

1,500 ವಿಶೇಷ ಬಸ್‌ಗಳ ವ್ಯವಸ್ಥೆ

ಅದೇ ರೀತಿ ಕಳೆದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಒಟ್ಟು ಸುಮಾರು 1,500 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿತ್ತು. ಪ್ರಯಾಣಿಕರು ಬೆಂಗಳೂರಿನಿಂದ ದೂರದ ಊರುಗಳಿಗೆ ಹೋಗಲು ಮತ್ತೆ ಹಬ್ಬದ ಬಳಿಕ ಪುನಃ ರಾಜಧಾನಿಗೆ ಬರಲು ಅನುಕೂಲವಾಗುವಂತೆ ಈ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಇಷ್ಟು ಬಸ್‌ಗಳು ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಿದ್ದವು. ದೀಪವಾಳಿಗೂ ಮುನ್ನ ಅಕ್ಟೋಬರ್ 21ರಿಂದ ಅಕ್ಟೋಬರ್ 23ರವರೆಗೆ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ ಸಾಗಿದ್ದವು. ನಂತರ ಹಬ್ಬದ ಮುಗಿದ ನಂತರ ಅಕ್ಟೋಬರ್ 26ರಿಂದ ಅಕ್ಟೋಬರ್ 30ರವರೆಗೆ ರಾಜ್ಯ ಹಾಗೂ ಹೊರಾಜ್ಯಗಳಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸಿದ್ದವು.

ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಡಿಕೇರಿ, ಶೃಂಗೇರಿ, ಹೊರನಾಡು, ಮಂಗಳೂರು, ಕೊಲ್ಲೂರು, ದಾವಣಗೆರೆ, ಗೋಕರ್ಣ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಹೀಗೆ ರಾಜ್ಯ ಅನೇಕ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಪರ್ಕ ಕಲ್ಪಿಸಲಿವೆ. ಜೊತೆಗೆ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ ಹಾಗೂ ಇನ್ನಿತರ ನೆರೆರಾಜ್ಯಗಳ ಸ್ಥಳಗಳಿಗೂ ಈ ವಿಶೇಷ ಬಸ್‌ಗಳು ಸಂಚರಿಸಿದ್ದವು.

ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದ ಜೊತೆಗೆ ನಗರದ ಮೈಸೂರು ರಸ್ತೆ, ಸ್ಯಾಟ್‌ಲೈಟ್, ವಿಜಯನಗರ (ಟಟಿಎಂಸಿ), ಜಯನಗರ 4ನೇ ಬ್ಲಾಕ್‌ (ಟಟಿಎಂಸಿ), ನವರಂಗ್‌ (ರಾಜಾಜಿನಗರ), ಕೆಂಗೇರಿ ಉಪನಗರ ಸೇರಿದಂತೆ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ವಿಶೇಷ ಬಸ್‌ಗಳು ಸಂಚರಿಸಿದ್ದವು. ಹೆಚ್ಚುವರಿ ಬಸ್‌ಗಳಿಗೆ ಸಾಮಾನ್ಯ ಬಸ್‌ಗಳಂತೆ ಮುಂಗಡವಾಗಿಯೂ ಆಸನ ಕಾಯ್ದಿರಿಸಲು ಅವಕಾಶವನ್ನು ನೀಡಲಾಗಿತ್ತು. ಕಾಯ್ದಿರಿಸಿದ ನಂತರ ಸಾರ್ವಜನಿಕರು ಪಿಕ್‌ಅಪ್ ಮತ್ತು ಡ್ರಾಪ್‌ ಪಾಯಿಂಟ್‌ಗಳನ್ನು ಗಮನಿಸಬೇಕು ಎಂದು ನಿಗಮ ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+