Vande Bharat Express: ಈ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ-ಇಲ್ಲಿದೆ ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ, 30: ದೇಶಾದ್ಯಂತ ಇರುವ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೊಸ ಮಾರ್ಗದಲ್ಲಿ ಓಡಲಿದೆ. ಹಾಗಾದರೆ ಯಾವ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ, ಸಮಯಗಳು ಹಾಗೂ ಮಾರ್ಗಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ವಿಶ್ವದ ಅತಿದೊಡ್ಡ ರೈಲ್ವೇ ಪ್ಯಾಸೆಂಜರ್ ಕೋಚ್ ತಯಾರಿಕಾ ಘಟಕವಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಐಸಿಎಫ್ ಶೀಘ್ರದಲ್ಲೇ ವಂದೇ ಭಾರತ್ ರೈಲು ರೇಕ್ ಅನ್ನು ಪ್ರಾರಂಭಿಸಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

75ನೇ ಗಣರಾಜ್ಯೋತ್ಸವ ನಿಮಿತ್ತ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಮಲ್ಯ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ಅವರು, 'ಐಸಿಎಫ್ ಪ್ರಸ್ತುತ ಎರಡು ದೊಡ್ಡ ಯೋಜನೆಗಳನ್ನು ಹೊಂದಿದೆ. ಮೊದಲನೆಯದು ವಂದೇ ಭಾರತ್ ಮೆಟ್ರೋ ಯೋಜನೆಯಾಗಿದ್ದು, ಇದು ಸಂಪೂರ್ಣ ಹವಾನಿಯಂತ್ರಿತ ಇಂಟರ್-ಸಿಟಿ ರೈಲು ಆಗಿದೆ. ಈ ವರ್ಷದ ಮಾರ್ಚ್ ವೇಳೆಗೆ ವಂದೇ ಮೆಟ್ರೋದ ಮೊದಲ ಮಾದರಿಯನ್ನು ಸಿದ್ಧಪಡಿಸಲು ಐಸಿಎಫ್ ನಿರ್ಧರಿಸಿದೆ.
ಈ ವಂದೇ ಭಾರತ್ ಯೋಜನೆಯ ಕುರಿತು ಮಲ್ಯ ಹೆಚ್ಚಿನ ಮಾಹಿತಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೇಕ್‌ಗಳನ್ನು ಒದಗಿಸುವುದು ಮುಂದಿನ ಉದ್ದೇಶವಾಗಿದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಇದು ಸರಿಹೊಂದಿಸಬಹುದಾದ ಯೋಜನೆಯಾಗಿದೆ.
ಪೂರೈಕೆ ವಿಷಯದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸಿದ್ದು ನಿಜ. ಇದರ ಹೊರತಾಗಿಯೂ, ಕಳೆದ ವರ್ಷ ಐಸಿಎಫ್ 50ನೇ ವಂದೇ ಭಾರತ್ ರೇಕ್ ಅನ್ನು ಸಿದ್ಧಪಡಿಸಿದ್ದು, ದೊಡ್ಡ ಸಾಧನೆಯಾಗಿದೆ. ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಎಲ್‌ಡಬ್ಲ್ಯೂ (ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್) ಸಹಯೋಗದೊಂದಿಗೆ ಅಮೃತ್ ಭಾರತ್ ಪುಶ್-ಪುಲ್ ರೈಲನ್ನು ಪ್ರಾರಂಭಿಸಲಾಗಿದೆ ಎಂದು ಮಲ್ಯ ಹೇಳಿದರು.
ಪ್ರಯಾಣದ ವಿಷಯದಲ್ಲಿ ಸಾಮಾನ್ಯ ಜನರಿಗೆ ಇದು ಉತ್ತಮ ಸೇವೇಯನ್ನು ಒದಗಿಸುತ್ತದೆ. ಈ ರೈಲು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು 2 ಅಮೃತ್ ಭಾರತ್ ರೈಲುಗಳಿಗೆ ಚಾಲನೇ ನೀಡಿದ್ದಾರೆ.
ರೈಲು ಸಂಖ್ಯೆ 15557 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಜನವರಿ 1ರಿಂದ ಆರಂಭವಾಗಿದ್ದು, ಇದು ಪ್ರತಿ ಸೋಮವಾರ ಮತ್ತು ಗುರುವಾರ ಮಧ್ಯಾಹ್ನ 3 ಗಂಟೆಗೆ ದರ್ಭಾಂಗದಿಂದ ಹೊರಡುತ್ತದೆ. ಅಯೋಧ್ಯೆಯನ್ನು ಮಧ್ಯಾಹ್ನ 2:30ಕ್ಕೆ, ಲಕ್ನೋವನ್ನು ಮಂಗಳವಾರ ಬೆಳಗ್ಗೆ 5:05ಕ್ಕೆ, ಕಾನ್ಪುರ ಮೂಲಕ ಬೆಳಗ್ಗೆ ಮಧ್ಯಾಹ್ನ 12:35ಕ್ಕೆ ವಿಹಾರ ತಲುಪುತ್ತದೆ.
ಅದೇ ರೀತಿ ರೈಲು ಸಂಖ್ಯೆ 15558 ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 2ರಿಂದ ಆರಂಭವಾಗಿದ್ದು, ಇದು ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಆನಂದ್ ವಿಹಾರದಿಂದ ಮಧ್ಯಾಹ್ನ 3:10ಕ್ಕೆ, ಕಾನ್ಪುರವನ್ನು ರಾತ್ರಿ 8:20ಕ್ಕೆ, ಲಕ್ನೋವನ್ನು ರಾತ್ರಿ 10:10ಕ್ಕೆ, ಅಯೋಧ್ಯೆಗೆ ಮಧ್ಯಾಹ್ನ 1:10ಕ್ಕೆ, ನಂತರ ರಾತ್ರು 11:50ಕ್ಕೆ ದರ್ಭಾಂಗ ತಲುಪಲಿದೆ.












Click it and Unblock the Notifications