Vande Bharat Express: ಚೈನ್ನೈ-ಮೈಸೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಅದ್ಭುತ ವಿಡಿಯೋ ವೈರಲ್‌

ಕರ್ನಾಟಕ, ಮಾರ್ಚ್‌, 26: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿನದಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಲೇ ಇದೆ. ಇದು ಹೈಸ್ಪೀಡ್‌ ರೈಲಾಗಿದ್ದು, ಭಾರಿ ಜನಮನ್ನಣೆಯನ್ನೂ ಪಡೆದಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲು ವೇಗವಾಗಿ ಚಲಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಂದೇ ಭಾರತ್‌ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಇದು ಭಾರತೀಯ ರೈಲ್ವೇಯಿಂದ ಇದು ಪ್ರಾರಂಭವಾಗಿದೆ. ಆಗಿನಿಂದ ಈ ರೈಲು ಭಾರತದಲ್ಲಿ ಪ್ರಸಿದ್ಧಿ ಎನ್ನುವ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ. ಅದೇ ರೀತಿ ಭಾರತೀಯ ಭೂದೃಶ್ಯದ ಉದ್ದ ಮತ್ತು ಅಗಲದಲ್ಲಿ ಹಾದುಹೋಗುವ ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನೋಡಲು ಸಾಮಾನ್ಯ ಜನರು ಸಾಕಷ್ಟು ಕಾತರದಿಂದ ಕಾಯುತ್ತಿರುತ್ತಾರೆ.

Vande Bharat Express train run between Chennai-Mysuru Video viral

ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ವಿಡಿಯೋ ವೈರಲ್‌

ಆದ್ದರಿಂದ ಭಾರತೀಯ ರೈಲ್ವೆಯ ವಿಭಾಗವಾದ ದಕ್ಷಿಣ ರೈಲ್ವೆಯು ಚೆನ್ನೈ-ಮೈಸೂರು ಮಾರ್ಗದ ನಡುವೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದು, ಜನರು ಇದಕ್ಕೆ ಭಾರಿ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

ಚೆನ್ನೈ-ಮೈಸೂರು ಮಾರ್ಗದಲ್ಲಿ ಸಂಚಾರ

ಚೆನ್ನೈ-ಮೈಸೂರು ಮಾರ್ಗದ ಮಧ್ಯೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಡಿಯೋವನ್ನು ದಕ್ಷಿಣ ರೈಲ್ವೆಯು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇದು 130 kmph ವೇಗದಲ್ಲಿ ಕಾರ್ಯಾಚರಣೆ ಮಾಡುತ್ತದೆ. ಈ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುವ ದೃಶ್ಯವನ್ನು ನೋಡಲು ಹಲವಾರು ಜನರು ಕಾಯುತ್ತಿದ್ದರು. ಇದೀಗ ರೈಲ್ವೆ ಇಲಾಖೆ ಹಂಚಿಕೊಂಡ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯಿಂದ ಆರಂಭವಾದ ಎಲೆಕ್ಟ್ರಿಕ್ ಮಲ್ಟಿಪಲ್-ಯೂನಿಟ್, ಅರೆ-ಹೈ-ಸ್ಪೀಡ್ ಇಂಟರ್‌ಸಿಟಿ ರೈಲಾಗಿದೆ. ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು 220 kmph ವೇಗದಲ್ಲಿ ಭಾರತೀಯ ರೈಲ್ವೆ ಅಭಿವೃದ್ಧಿಪಡಿಸುತ್ತಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ Wi-Fi ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಹಿಂದಿನ ಆವೃತ್ತಿಯಲ್ಲಿದ್ದ 24 ಇಂಚಿನ ಸ್ಕ್ರೀನ್‌ಗಳಿಗೆ ಹೋಲಿಸಿದರೆ, ಈಗಿನ ಪ್ರತಿ ಕೋಚ್‌ನಲ್ಲಿ 32-ಇಂಚಿನ ಸ್ಕ್ರೀನ್‌ಗಳು ಪ್ರಯಾಣಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತದೆ. ಈ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ಪರಿಸರ ಸ್ನೇಹಿಯಾಗಿದೆ.

Vande Bharat Express train run between Chennai-Mysuru Video viral

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರದ ಮಾರ್ಗಗಳು

1: ನವದೆಹಲಿ - ವಾರಣಾಸಿ

2. ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜೆ&ಕೆ)

3. ಗಾಂಧಿನಗರ ಮತ್ತು ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್

4. ನವದೆಹಲಿ- ಹಿಮಾಚಲ ಪ್ರದೇಶ (ಅಂಬ್ ಅಂಡೌರಾ)

5. ಚೆನ್ನೈ-ಮೈಸೂರು

6. ನಾಗ್ಪುರ-ಬಿಲಾಸ್ಪುರ್

7. ಹೌರಾ - ಹೊಸ ಜಲ್ಪೈಗುರಿ

8: ಸಿಕಂದರಾಬಾದ್-ವಿಶಾಖಪಟ್ಟಣಂ

9. ಮುಂಬೈ-ಸಾಯಿನಗರ ಶಿರಡಿ

10: ಮುಂಬೈ-ಸೋಲಾಪುರ

ಮುಂಬೈ-ಗೋವಾ ಮಾರ್ಗದಲ್ಲಿ ಶೀಘ್ರದಲ್ಲೇ ಸಂಚಾರ

ಇನ್ನು ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಮಹಾರಾಷ್ಟ್ರದ ಶಾಸಕರ ನಿಯೋಗಕ್ಕೆ ಇತ್ತೀಚೆಗಷ್ಟೇ ತಿಳಿಸಿದ್ದರು.

ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದನ್ವೆ ಅವರನ್ನು ಇತ್ತೀಚೆಗಷ್ಟೇ ಶಾಸಕರ ನಿಯೋಗ ಭೇಟಿ ಮಾಡಿದ್ದು, ಬಳಿಕ ನಡೆದ ಸಭೆಯಲ್ಲಿ ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬಿಡಲಾಗುವುದು ಎಂದು ಕೇಂದ್ರ ಸಚಿವರು ಗುಂಪಿಗೆ ತಿಳಿಸಿದರು ಎಂದು ದಾವ್ಖರೆ ಪ್ರಕಟಣೆಯಲ್ಲಿ ತಿಳಿಸಿದ್ದರು.

ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲನ್ನು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ ಮಾರ್ಗಗಳಲ್ಲಿ ಇತ್ತೀಚೆಗೆ ಪರಿಚಯಿಸಲಾಗಿದೆ. ಈಗ ಮುಂಬೈ ಮತ್ತು ಗೋವಾ ನಡುವೆ ಚಾಲನೆ ಮಾಡಲಾಗುವುದು ಎಂದು ದಾನ್ವೆ ಹೇಳಿದ್ದರು. ಮುಂಬೈ-ಗೋವಾ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪರಿಶೀಲನೆಯ ನಂತರ ಹೊಸ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+