Valentine's day 2024: ಪ್ರೇಮ ನಿವೇದನೆಗೆ ಬೆಂಗಳೂರಿನಲ್ಲಿವೆ ರೊಮ್ಯಾಂಟಿಕ್ ತಾಣಗಳು
ಪ್ರೇಮಿಗಳ ದಿನಾಚರಣೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈ ವೇಳೆ ಉತ್ತಮ ಸ್ಥಳಗಳಿಗೆ ಭೇಟಿ ನೀಡಲು ಆಯೋಜನೆ ಮಾಡಿಕೊಂಡಿರುತ್ತಾರೆ. ಅದರಲ್ಲೂ ಬೆಂಗಳೂರಿನಲ್ಲಿ ಇರುವವರಿಗೆ ಇಲ್ಲಿಯೇ ರೋಮ್ಯಾಂಟಿಗ್ ಕ್ಷಣಗಳನ್ನು ಕಳೆಯಲು ಸೂಕ್ತ ತಾಣಗಳಿವೆ. ಹಾಗಾದರೆ ಬೆಂಗಳೂರಿನ ಆ ರೊಮ್ಯಾಂಟಿಕ್ ತಾಣಗಳು ಯಾವುವು, ಅಲ್ಲಿಗೆ ತಲುಪುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
* ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್
* ಕಬ್ಬನ್ ಪಾರ್ಕ್
* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
* ಲುಂಬಿನಿ ಗಾರ್ಡನ್ಸ್
* ಬೆಂಗಳೂರು ಅರಮನೆ
* ನಂದಿ ಬೆಟ್ಟ
* ಹಲಸೂರು ಕೆರೆ
* ತಟ್ಟೆಕೆರೆ ಕೆರೆ
* ಹೆಬ್ಬಾಳ ಕೆರೆ
* ಸ್ಯಾಂಕಿ ಟ್ಯಾಂಕ್ ಕೆರೆ
1. ಲಾಲ್‌ಬಾಗ್: ಬೆಂಗಳೂರಿನ ನಾಲ್ಕು ಮೂಲೆಗಳಲ್ಲಿ ಗೋಪುರ ಕಟ್ಟಿ ಅಲ್ಲಿ ಉದ್ಯಾನವನ ನಿರ್ಮಿಸುವ ಕನಸು ಕಂಡಿದ್ದರು. ಅದರಂತೆಯೇ ಒಂದು ಗೋಪುರ ಲಾಲ್‌ಬಾಗ್‌ನಲ್ಲಿದ್ದು, ಇದು ಈಗ ಭಾರತದ ಐತಿಹಾಸಿಕ ಗಾರ್ಡನ್ ಆಗಿದೆ. 1537ರಲ್ಲಿ ಇಲ್ಲೊಂದು ಹೂವಿನ ತೋಟ ನಿರ್ಮಾಣ ಮಾಡಿ ಅದಕ್ಕೆ ಕೆಂಪುತೋಟ ಎಂಬ ಹೆಸರು ಇಡಲಾಯಿತು.

34 ಹೆಕ್ಟೇರ್‌ನಲ್ಲಿರುವ ಈ ತೋಟದಲ್ಲಿ 1569ರಲ್ಲಿ ನಾಡಪ್ರಭು ಕೆಂಪೇಗೌಡರ ಮಗ ಮಾಗಡಿ ಕೆಂಪೇಗೌಡರು ತೋಟವನ್ನು ಪೋಷಿಸುತ್ತ ಬೆಳೆಸಿದರು.
ಇನ್ನು ಲಾಲ್‌ಬಾಗ್ ಗ್ಲಾಸ್ ಹೌಸ್ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿರುವ ಕ್ರಿಸ್ಟಲ್ ಪ್ಯಾಲೇಸ್‌ನ ಹೋಲಿಕೆ ಹೊಂದಿದೆ. ಇದು ಗಾಜು ಮತ್ತು ಕಬ್ಬಿಣದಿಂದ ರಚನೆಯಾದ ದೊಡ್ಡ ಅರಮನೆಯಾಗಿದೆ. ಲಾಲ್‌ಬಾಗ್ ಗ್ಲಾಸ್ ಹೌಸ್ ಅನ್ನು 1989ರಲ್ಲಿ ನಿರ್ಮಿಸಲಾಯಿತು ಮತ್ತು 2004ರಲ್ಲಿ ಚಾಲನೆ ನೀಡಲಾಯಿತು. ಇನ್ನು ಇದು ಲಾಲ್‌ಬಾಗ್‌ಗೆ ಭೇಟಿ ನೀಡುವವರ ಪ್ರಮುಖ ಆಕರ್ಷಣೆಯಾಗಿದೆ.
* ಲಾಲ್‌ಬಾಗ್ ಸರೋವರ: ಲಾಲ್‌ಬಾಗ್ ತನ್ನ ದಕ್ಷಿಣ ಭಾಗದಲ್ಲಿ ದೊಡ್ಡ ಸರೋವರವನ್ನು ಹೊಂದಿದೆ, ಇದು ವಾಕಿಂಗ್ ಪಾತ್, ಸೇತುವೆ ಮತ್ತು ಮಿನಿ ಜಲಪಾತವನ್ನು ಹೊಂದಿದೆ.
* ಲಾಲ್‌ಬಾಗ್‌ನಲ್ಲಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಗಣರಾಜ್ಯೋತ್ಸವ (ಜನವರಿ 26) ಮತ್ತು ಸ್ವಾತಂತ್ರ್ಯ ದಿನಾಚರಣೆ (15 ಆಗಸ್ಟ್) ಸಮಯದಲ್ಲಿ ಲಾಲ್‌ಬಾಗ್ ಪುಷ್ಪ ಪ್ರದರ್ಶನ, ಬೇಸಿಗೆಯಲ್ಲಿ ಮಾವು /ಹಲಸಿನ ಹಬ್ಬಗಳು, ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು ಜನಪ್ರಿಯ ಕಾರ್ಯಕ್ರಮಗಳಾಗಿವೆ. ಇನ್ನು ಪ್ರೇಮಿಗಳ ದಿನದಂದು ಭೇಟಿ ನೀಡಲು ಇದು ಉತ್ತಮ ತಾಣವಾಗಿದೆ.
ಬೋನ್ಸಾಯ್ ಗಾರ್ಡನ್, ದೊಡ್ಡ ಬಂಡೆ ಮತ್ತು ಕೆಂಪೇಗೌಡ ಕಾವಲು ಗೋಪುರ, ಹೂವಿನ ಗಡಿಯಾರ, ದಾಸವಾಳ ಉದ್ಯಾನ ಲಾಲ್‌ಬಾಗ್ ಸಸ್ಯೋದ್ಯಾನದೊಳಗೆ ಅನ್ವೇಷಿಸಲು ಇತರ ಕೆಲವು ಆಸಕ್ತಿದಾಯಕ ಸ್ಥಳಗಳಾಗಿವೆ. ಇನ್ನು ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಬೆಳಗ್ಗೆ 6ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಪ್ರವೇಶ ಉಚಿತವಾಗಿದೆ. (6 ರಿಂದ 9 AM ಮತ್ತು 6 ರಿಂದ 7 PM).
2. ಕಬ್ಬನ್ ಪಾರ್ಕ್: 300 ಹೆಕ್ಟೇರ್ ಪ್ರದೇಶದಲ್ಲಿರುವ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಹಸಿರಿನಿಂದ ಸಮೃದ್ಧವಾಗಿರುವ ಪ್ರಮುಖ ದೃಶ್ಯವೀಕ್ಷಣೆಯ ಆಕರ್ಷಣೆಯಾಗಿದೆ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಶಾಂತ ವಾತಾವರಣವನ್ನು ಬಯಸುವವರಿಗೆ ಸೂಕ್ತವಾದ ಸ್ಥಳವಾಗಿದೆ. ಹಾಗೆಯೇ ಈ ಅದ್ಭುತ ತಾಣದಲ್ಲಿ ನಿಮ್ಮ ಇಷ್ಟದ ಹುಡುಗಿದೆ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳಲು ಸೂಕ್ತ ತಾಣವಾಗಿದೆ.
ಲಾರ್ಡ್ ಕಬ್ಬನ್‌ನಿಂದ ಸ್ಥಾಪಿಸಲ್ಪಟ್ಟ ಈ ಉದ್ಯಾನವನಕ್ಕೆ ಅವರ ಗೌರವಾರ್ಥವಾಗಿ ಈ ಹೆಸರನ್ನು ಇಡಲಾಗಿದೆ. ಇದು ರೋಮಾಂಚನಕಾರಿ ಅನುಭವ ನೀಡುವಂತಹ 6,000ಕ್ಕಿಂತ ಹೆಚ್ಚು ಮರಗಳಿಗೆ ನೆಲೆಯಾಗಿದೆ. ನೈಸರ್ಗಿಕ ದೃಶ್ಯವೀಕ್ಷಣೆಯ ತಾಣವಾಗಿರುವುದರ ಜೊತೆಗೆ, ನಗರದ ಕೆಲವು ಪ್ರಮುಖ ರಚನೆಗಳಾದ ಅಟ್ಟಾರ ಕಚೇರಿ, ಕಬ್ಬನ್ ಪಾರ್ಕ್ ಮ್ಯೂಸಿಯಂ ಮತ್ತು ಶೇಷಾದ್ರಿ ಅಯ್ಯರ್ ಸ್ಮಾರಕ ಉದ್ಯಾನವನಗಳನ್ನು ಇಲ್ಲಿ ಕಾಣಬಹುದಾಗಿದೆ. ಕಬ್ಬನ್ ಪಾರ್ಕ್‌ನಲ್ಲಿರುವ ಮತ್ತೊಂದು ಪ್ರಸಿದ್ಧ ಆಕರ್ಷಣೆಯೆಂದರೆ ಬೆಂಗಳೂರು ಅಕ್ವೇರಿಯಂ ಆಗಿದ್ದು, ಇದು ಭಾರತದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿದೆ.
3. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಬೆಂಗಳೂರಿನ ನಗರ ಕೇಂದ್ರದ ದಕ್ಷಿಣಕ್ಕೆ ಸುಮಾರು 20 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು 260.51 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿದೆ ಮತ್ತು ಇದು ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದೆ. ಇದನ್ನು 1970ರಲ್ಲಿ ಸ್ಥಾಪಿಸಲಾಯಿತು ಮತ್ತು 1974ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಗುರುತಿಸಲಾಯಿತು.
ಉದ್ಯಾನವನವು ಎತ್ತರದ ಪ್ರದೇಶಗಳಲ್ಲಿ ಎಲೆಯುದುರುವ ಅರಣ್ಯದಂತಹ ಭೂಪ್ರದೇಶವನ್ನು ಹೊಂದಿದೆ. ಉದ್ಯಾನದ ಒಂದು ಸಣ್ಣ ಭಾಗವು 2002ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವಾಗಿ ಮೃಗಾಲಯವಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸುತ್ತುವರಿದ ಅರಣ್ಯ ಆನೆಧಾಮವನ್ನು ಹೊಂದಿರುವ ದೇಶದ ಮೊದಲ ಜೈವಿಕ ಉದ್ಯಾನವನವಾಗಿದೆ. 122 ಹೆಕ್ಟೇರ್ ವಿಸ್ತೀರ್ಣದ ಈ ಅಭಯಾರಣ್ಯವನ್ನು ಪೆಟಾ ಇಂಡಿಯಾ ಪ್ರಾಯೋಜಿಸಿದೆ. ಉದ್ಯಾನವನವು ಗಾಯಗೊಂಡ ಪ್ರಾಣಿಗಳ ಪುನರ್ವಸತಿಗಾಗಿ ರಕ್ಷಣಾ ಕೇಂದ್ರವನ್ನು ಸಹ ಹೊಂದಿದೆ.
ಜೈವಿಕ ಉದ್ಯಾನವನವು ಸಿಂಹ ಮತ್ತು ಹುಲಿ ಸಫಾರಿಯನ್ನು ಹೊಂದಿದೆ. ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಮರುಸೃಷ್ಟಿಸುವ ಆವರಣಗಳನ್ನು ಹೊಂದಿದೆ. ಇವುಗಳ ಜೊತೆಗೆ, ಸ್ನೇಕ್ ಪಾರ್ಕ್, ಚಿಟ್ಟೆ ಪಾರ್ಕ್, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ಉದ್ಯಾನವನವು ಪಾದಯಾತ್ರೆ ಮತ್ತು ಟ್ರೆಕ್ಕಿಂಗ್‌ಗೆ ಪ್ರಸಿದ್ಧವಾದ ತಾಣವಾಗಿದೆ. ಏಕೆಂದರೆ ಅದರೊಳಗೆ ಹಲವಾರು ಪ್ರಾಚೀನ ದೇವಾಲಯಗಳಿವೆ . ಅಷ್ಟೇ ಅಲ್ಲದೆ, ಮತ್ತು ವಿಶ್ರಾಂತಿ ಪಡೆಯಲು ಬಯಸುವ ಜನರಿಗೆ ಇದು ಆಶ್ರಯವಾಗಿದೆ.
4. ಲುಂಬಿನಿ ಗಾರ್ಡನ್ಸ್: ಲುಂಬಿನಿ ಉದ್ಯಾನವನವು ನೇಪಾಳದ ಲುಂಬಿನಿಯ ಹೆಸರನ್ನು ಕರ್ನಾಟಕದ ಬೆಂಗಳೂರಿನ ನಾಗವಾರ ಸರೋವರದ ದಡದಲ್ಲಿರುವ ಸಾರ್ವಜನಿಕ ಉದ್ಯಾನವನವಾಗಿದೆ. ಇದು ಭಗವಾನ್ ಬುದ್ದನಿಗೆ ಸಮರ್ಪಿತವಾಗಿದೆ. ಇದು ರಾಷ್ಟ್ರೀಯ ಉದ್ಯಾನವನವಾಗಿದ್ದರೂ, ಅದರ ಪ್ರಶಾಂತವಾದ ಭೂದೃಶ್ಯಗಳು ಮತ್ತು ಸಾಕಷ್ಟು ಹಸಿರಿನಿಂದ ಕಣ್ಣುಗಳಿಗೆ ರಸದೌತಣವನ್ನು ನೀಡುತ್ತದೆ.
ನಾಗವಾರ ಸರೋವರದ ಸಮೀಪದಲ್ಲಿರುವ ಲುಂಬಿನಿ ಉದ್ಯಾನವು ಬೆಂಗಳೂರಿನ ಉದ್ಯಾನವನದ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಉದ್ಯಾನಕ್ಕೆ ವಾರದ ಪ್ರತಿ ದಿನವೂ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಸರೋವರದ ಸುಂದರ, ಪ್ರಶಾಂತ ಪರಿಸರವು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುವ ನೋಟ ಮತ್ತು ಚಟುವಟಿಕೆಗಳೊಂದಿಗೆ ಆತಿಥ್ಯ ವಹಿಸುತ್ತದೆ.
ತಮ್ಮ ಪ್ರೀತಿಪಾತ್ರರ ಜೊತೆ ಆನಂದಿಸಲು ಇದು ಪ್ರಮುಖ ಸ್ಥಳವಾಗಿದೆ. ಲುಂಬಿನಿ ಉದ್ಯಾನವನವು ಅತ್ಯಂತ ಸುಂದರವಾದ ಮಕ್ಕಳ ಉದ್ಯಾನವನವಾಗಿದೆ ಮತ್ತು ಪ್ರವಾಸಿಗರು ತುಂಬಾ ಆನಂದಿಸುವ ಬೋಟಿಂಗ್ ಕ್ಲಬ್ ಅನ್ನು ಹೊಂದಿದೆ. ಇವೆಲ್ಲವುಗಳ ಹೊರತಾಗಿ ಉದ್ಯಾನವು ಸುಂದರವಾದ ಕಾರಂಜಿಗಳನ್ನು ಹೊಂದಿದೆ. ಮತ್ತು ಸರೋವರದ ನೋಟ ಮತ್ತು ಇನ್ನೊಂದು ಬದಿಯಲ್ಲಿ 1.5 ಕಿಲೋ ಮೀಟರ್‌ನಷ್ಟು ಅಚ್ಚಹಸಿರಿನ ಸುಂದರ ಅದ್ಭುತ ತಾಣಗಳನ್ನು ಒಳಗೊಂಡಿದೆ.
ಉದ್ಯಾನವು ಕೆಲವು ಸುಂದರವಾದ ಪ್ರತಿಮೆಗಳನ್ನು ಮತ್ತು ಅಪರೂಪದ ಸಸ್ಯಗಳನ್ನು ಹೊಂದಿದೆ. ರಾತ್ರಿಯ ವೇಳೆ ಉದ್ಯಾನವು ವಿವಿಧ ದೀಪಗಳಿಂದ ಪ್ರಕಾಶಿಸಲ್ಪಟ್ಟಿದೆ. ಇದು ನೋಡಲು ಆನಂದದಾಯಕವಾಗಿದೆ. ಲುಂಬಿನಿ ಉದ್ಯಾನವು ಹತ್ತಿರದ ಆಹಾರ ಮಳಿಗೆಗಳು ಮತ್ತು ಪ್ರಸಿದ್ಧ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಇನ್ನು ವಾರಾಂತ್ಯಕ್ಕೆ ಭೇಟಿ ನೀಡಲು ಉತ್ತಮ ತಾಣವಾಗಿದೆ.
5. ಬೆಂಗಳೂರು ಅರಮನೆ: ಬೆಂಗಳೂರು ಅರಮನೆಯು ಶ್ರೇಷ್ಠ ವಾಸ್ತುಶೈಲಿ ಮತ್ತು ಸೌಂದರ್ಯದ ಪ್ರತೀಕವಾಗಿದ್ದು, ಇದು ಹಿಂದಿನ ಕಾಲದ ರಾಜಮನೆತನದ ವೈಭವವನ್ನು ಸಾರುವಂತಿದೆ. ಇದು ಪ್ರಸ್ತುತ ಬೆಂಗಳೂರಿನ ಕೇಂದ್ರ ಆಕರ್ಷಣೆಯಾಗಿದ್ದು, ಅರಮನೆಯನ್ನು 1878ರಲ್ಲಿ ನಿರ್ಮಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಬ್ರಿಟಿಷ್ ಗಾರ್ಡಿಯನ್ಸ್ 1873ರಲ್ಲಿ ಮೂಲ ಆಸ್ತಿಯನ್ನು ಬೆಂಗಳೂರು ಸೆಂಟ್ರಲ್ ಹೈಸ್ಕೂಲ್ ಪ್ರಾಂಶುಪಾಲರಾದ ರೆವ್, ಜೆ ಗ್ಯಾರೆಟ್ ಅವರ ನಿಧಿಯಿಂದ ಖರೀದಿಸಿದರು.
ಅರಮನೆಯು ವಿಶಾಲವಾದ ಪ್ರದೇಶವನ್ನು ಹೊಂದಿದೆ ಮತ್ತು 45,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ವಾಸ್ತುಶಿಲ್ಪದ ಭವ್ಯವಾದ ಅರಮನೆ ಇದಾಗಿದೆ. ಅರಮನೆಯ ಮರದ ರಚನೆ ಮತ್ತು ಒಳಗೆ ಮತ್ತು ಹೊರಗೆ ಸುಂದರವಾದ ಕೆತ್ತನೆಗಳು ವಿವಿಧ ರೀತಿಯಲ್ಲಿ ರಾಜ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ.
ಪ್ರಮುಖ ಪ್ರವಾಸಿ ತಾಣವಲ್ಲದೆ, ಅರಮನೆಯು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಕ್ ಶೋಗಳು ಮತ್ತು ಮದುವೆಗಳಿಗೆ ಆತಿಥ್ಯ ವಹಿಸುತ್ತದೆ. ನಂಬಿಕೆಗಳ ಪ್ರಕಾರ, ರಾಜ ಚಾಮರಾಜೇಂದ್ರ ಒಡೆಯರ್ ಅವರು ಲಂಡನ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಅರಮನೆಯನ್ನು ನಿರ್ಮಿಸಲು ಸ್ಫೂರ್ತಿ ಪಡೆದರು.
ನೆಲ ಮಹಡಿಯಲ್ಲಿ ನೀಲಿ ಸೆರಾಮಿಕ್ ಟೈಲ್ಸ್‌ನಿಂದ ಅಲಂಕರಿಸಲ್ಪಟ್ಟ ಗ್ರಾನೈಟ್ ಆಸನಗಳು, ಕಾಲ್ಪನಿಕ ಕಥೆಯ ಬಾಲ್ ರೂಂ, ಪ್ರಸಿದ್ಧ ವರ್ಣಚಿತ್ರಕಾರ ರಾಜಾ ರವಿವರ್ಮರ ವರ್ಣಚಿತ್ರಗಳು, ಬಳ್ಳಿಯಿಂದ ಆವೃತವಾದ ಗೋಡೆಗಳು ಮತ್ತು ಮೊದಲ ಮಹಡಿಯಲ್ಲಿರುವ ದರ್ಬಾರ್ ಹಾಲ್‌ಗಳು ಒಟ್ಟಾಗಿ ಬೆಂಗಳೂರು ಅರಮನೆಯನ್ನು ರೂಪಿಸುತ್ತವೆ.
ಅರಮನೆಗೆ ಭೇಟಿ ನೀಡುವುದರಿಂದ ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ ರಾಜವಂಶಗಳ ಸೊಗಸಾದ ಮತ್ತು ಅದ್ದೂರಿ ವೈಭವವನ್ನು ವೀಕ್ಷಿಸಲು ನಿಮಗೆ ಅವಕಾಶ ನೀಡುತ್ತದೆ. ಭಾಷಾ ಸಮಸ್ಯೆಗಳಿರುವ ಜನರಿಗೆ, ಅದರ ಇತಿಹಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಆಡಿಯೊ ಟೇಪ್ ಅರಮನೆಯೊಳಗೆ ಲಭ್ಯವಿದೆ.
ಬೆಂಗಳೂರು ಅರಮನೆ ಎನ್ನುವುದಕ್ಕಿಂತ ಬೆಂಗಳೂರು ಪ್ಯಾಲೇಸ್ ಎಂದರೆ ಹೆಚ್ಚು ಜನರಿಗೆ ತಿಳಿದೀತು. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ನೆಚ್ಚಿನ ಬೇಸಿಗೆ ಮನೆಯಾಗಿದ್ದ ಬೆಂಗಳೂರು ಅರಮನೆ ಇಂದು ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾಗುತ್ತಾ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ. ಈಗ ಕೂಡಾ ಮೈಸೂರು ರಾಜ ಮನೆತನದ ಆಸ್ತಿಯಾಗಿಯೇ ಉಳಿದಿದೆ.
6 ನಂದಿ ಬೆಟ್ಟ: ಇನ್ನು ಬೆಂಗಳೂರಿನ ಸಮೀಪದಲ್ಲಿರುವ ನಂದಿ ಬೆಟ್ಟವು ಆಸಕ್ತಿದಾಯಕವಾದ ಇತಿಹಾಸವನ್ನು ಹೊಂದಿದೆ. ಇದರ ಹಿಂದಿನ ರಹಸ್ಯವು ಅದರ ಮೂಲವನ್ನು ಸುತ್ತುವರೆದಿದೆ. ಬೆಟ್ಟಗಳು ಮಲಗಿರುವ ನಂದಿಯ ಆಕಾರವನ್ನು ಹೊಂದಿರುವುದರಿಂದ ಈ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ.
ಈ ಬೆಟ್ಟಗಳಲ್ಲಿ ನೆಲೆಗೊಂಡಿರುವ ಟಿಪ್ಪು ತಂಗುತ್ತಿದ್ದ ಬೇಸಿಗೆ ಅರಮನೆಯು ಗತ ಕಾಲದ ಇತಿಹಾಸವನ್ನು ಸಾರುತ್ತದೆ. ಗವಿ ವೀರಭದ್ರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ಸುಂದರ ದೇವಾಲಯಗಳನ್ನೂ ಇಲ್ಲಿ ಕಾಣಬಹುದಾಗಿದೆ. ಅಮೃತ ಸರೋವರ ನೀರಿನ ಟ್ಯಾಂಕ್ ಮತ್ತು ಉದ್ಯಾನಗಳು ಜನಪ್ರಿಯ ತಾಣಗಳಾಗಿವೆ. ಪ್ಯಾರಾಗ್ಲೈಡಿಂಗ್ ಮತ್ತು ಸೈಕ್ಲಿಂಗ್‌ನಲ್ಲಿಯೂ ಇಲ್ಲಿ ನೀವು ತೊಡಗಿಸಿಕೊಳ್ಳಬಹುದು.
7. ಹಲಸೂರು ಸರೋವರ: ನಗರದ ಅತ್ಯಂತ ದೊಡ್ಡ ಮತ್ತು ಹಳೆಯದಾದ ಹಲಸೂರು ಸರೋವರವು ಬೆಂಗಳೂರಿನ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ. ಹಲವಾರು ದ್ವೀಪಗಳು ಮತ್ತು 3 ಕಿಲೋಮೀಟರ್ ದಡವನ್ನು ಹೊಂದಿರುವ 120 ಹೆಕ್ಟೇರ್‌ಗಳಲ್ಲಿ ಜಾಗದಲ್ಲಿರುವ ಈ ಅದ್ಭುತವಾದ ಜಲಮೂಲವು ಕೆಂಪೇಗೌಡರ ಕಾಲದ ಹಿಂದಿನದು. ಎಂಜಿ ರಸ್ತೆಗೆ ಹತ್ತಿರವಾಗಿರುವುದರಿಂದ ಇಲ್ಲಿಗೆ ಪ್ರವೇಶ ಸುಲಭ.
ನೀವು ವಿಶಾಲವಾದ ಉದ್ಯಾನ ಪ್ರದೇಶಗಳ ಸುತ್ತಲೂ ಚಾರಣ ಮಾಡಬಹುದು, ದೋಣಿ ವಿಹಾರಕ್ಕೆ ಹೋಗಬಹುದು ಅಥವಾ ವಿಶ್ರಾಂತಿ ಪಡೆಯಬಹುದು ಮತ್ತು ಹಲಸೂರಿನ ಸೌಂದರ್ಯವನ್ನು ಆನಂದಿಸಬಹುದಾಗಿದೆ. ಇಲ್ಲಿಗೆ ಪ್ರವೇಶಕ್ಕೆ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಮಾತ್ರ ಅವಕಶ ಇರುತ್ತದೆ.
8. ತಟ್ಟೆಕೆರೆ ಕೆರೆ: ಕನಕಪುರ ಜಿಲ್ಲೆಯ ತಟ್ಟೆಕೆರೆ ಎಂಬ ಪುಟ್ಟ ಗ್ರಾಮವು ಬೆಂಗಳೂರಿನಿಂದ ಕೇವಲ 40 ಕಿಲೋ ಮೀಟರ್ ದೂರದಲ್ಲಿದ್ದರೂ, ಕೇವಲ ಸಾವಿರ ನಿವಾಸಿಗಳಿಗೆ ನೆಲೆಯಾಗಿದೆ. ಸರೋವರ ಅಥವಾ "ಕೆರೆ" ಒಂದು ಪ್ರಸಿದ್ಧ ಪಿಕ್ನಿಕ್ ತಾಣವಾಗಿದೆ ಮತ್ತು ಮುಖ್ಯವಾಗಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಅದರಲ್ಲಿಯೂ ಪ್ರೇಮ ಪಕ್ಷಿಗಳ ಪ್ರೇಮ ನಿವೇದನೆ ವ್ಯಕ್ತಪಡಿಸಲು ಸೂಕ್ತ ತಾಣ ಇದಾಗಿದೆ.
9 ಹೆಬ್ಬಾಳ ಕೆರೆ: ಹದಿನಾರನೇ ಶತಮಾನದಲ್ಲಿ ಕೆಂಪೇಗೌಡರ ಕಾಲದಲ್ಲಿ ನಿರ್ಮಿಸಲಾದ ಮೂರು ಕೆರೆಗಳಲ್ಲಿ ಹೆಬ್ಬಾಳ ಕೆರೆಯೂ ಒಂದು. ಮುಖ್ಯ ನಗರದಿಂದ ಕೇವಲ ಒಂದು ಗಂಟೆಯ ಪ್ರಯಾಣ ಮಾಡುವ ಮೂಲಕ ಇಲ್ಲಿಗೆ ಸಾಗಬೇಕಾಗುತ್ತದೆ. ಈ ಕೆರೆ ಮುಂಜಾನೆ ತೆರಳಲು ಮತ್ತು ಸೂರ್ಯೋದಯ, ವಾಕ್ ಅಥವಾ ಕೆಲವು ಯೋಗವನ್ನು ಮಾಡಲು ಸೂಕ್ತವಾದ ಸ್ಥಳವಾಗಿದೆ. ಹಾಗೆಯೇ ಪ್ರೇಮಿಗಳ ದಿನಾಚರಣೆ ಮಾಡಲು ಇದು ಉತ್ತಮವಾದ ಸ್ಥಳವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 7 ಮತ್ತು ಹೊರ ವರ್ತುಲ ರಸ್ತೆ, ಬೆಂಗಳೂರು ಜಂಕ್ಷನ್‌ನಲ್ಲಿದೆ.
10 ಸ್ಯಾಂಕಿ ಟ್ಯಾಂಕ್ ಕೆರೆ: ಇನ್ನು ಬರಗಾಲದ ವೇಳೆ 1882ರಲ್ಲಿ ನಿರ್ಮಿಸಲಾದ ಸ್ಯಾಂಕಿ ಟ್ಯಾಂಕ್ ಧರ್ಮಾಂಬುಧಿ ಮತ್ತು ಮಿಲ್ಲರ್ ಟ್ಯಾಂಕ್‌ಗಳಿಗೆ ಸಂಪರ್ಕ ಹೊಂದಿದ್ದು, ಇದು 35 ಹೆಕ್ಟೇರ್‌ನಲ್ಲಿ. ಪಕ್ಷಿ ವೀಕ್ಷಕರಿಗೆ ಸೂಕ್ತವಾದ ಸ್ಥಳವಾಗಿದೆ, ಸುತ್ತಮುತ್ತಲಿನ ವಿವಿಧ ಪ್ರಭೇದಗಳಿಗೆ ನೆಲೆಯಾಗಿದೆ.
ಮಯೂರ ಸ್ಯಾಂಕಿ ಬೋಟ್ ಕ್ಲಬ್ ಈ ಕೃತಕ ಸರೋವರದ ಮಧ್ಯದಲ್ಲಿರುವ ದ್ವೀಪದಲ್ಲಿ ಬೋಟಿಂಗ್‌ನಿಂದ ಪಿಕ್ನಿಕ್‌ಗೆ ಸಾಕಷ್ಟು ಮೋಜು ತುಂಬಿದ ಚಟುವಟಿಕೆಗಳು ಇರುತ್ತವೆ. ಅರಣ್ಯ ಇಲಾಖೆ ನಡೆಸುವ ಉದ್ಯಾನವನವು ಸಸ್ಯ ನರ್ಸರಿಯನ್ನು ಹೊಂದಿದೆ ಮತ್ತು ಈಜಲು ಒಂದು ಕೊಳವಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications