Get Updates
Get notified of breaking news, exclusive insights, and must-see stories!

Weekend Getaways: ಬೆಂಗಳೂರಿನ ಸಮೀಪದಲ್ಲೇ ಇವೆ ಮನಸಿಗೆ ಮುದ ನೀಡುವ ಟ್ರೆಕ್ಕಿಂಗ್‌ ತಾಣಗಳು

Travel Guide: ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರ ತುಂಬಾ ತುಪ್ಪ ಹುಡುಕುತ್ತಿದ್ದರಂತೆ ಎನ್ನುವ ಗಾದೆ ಮಾತಿದೆ. ಇದರಂತೆಯೇ ಒಂದು ದಿನದ ಟ್ರಕ್ಕಿಂಗ್‌ ಪ್ರವಾಸಕ್ಕೆ ಬೆಂಗಳೂರಿನ ಸುತ್ತಮುತ್ತಲಿನಲ್ಲಿಯೇ ಅತ್ಯಧ್ಬುತ ತಾಣಗಳನ್ನು ಇಟ್ಟುಕೊಂಡು ಬೇರೆ, ಬೇರೆ ಜಿಲ್ಲೆಗಳ ತಾಣಗಳನ್ನು ಹುಡುಕುವ ಯೋಜನೆಯಲ್ಲಿಯೇ ಇಲ್ಲಿನವರು ಕಾಲ ಕಳೆದುಬಿಡುತ್ತಾರೆ. ಹಾಗಾದರೆ ಚಿಂತೆ ಯಾಕ್‌ ಮಾಡ್ತೀರಾ. ಸಮೀಪದ ಟ್ರೆಕ್ಕಿಂಗ್ ತಾಣಗಳ ಪರಿಚಯವನ್ನು ಇಲ್ಲಿ ನೀಡಿದ್ದೇವೆ ಕಣ್ಣಾಡಿಸಿ.

ಬಹುತೇಕ ಮಂದಿ ಬಿಡುವು ಸಿಕ್ಕರೆ ಸಾಕು ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿರುತ್ತಾರೆ. ನೀವು ಒಂದು ವೇಳೆ ವಾರಾಂತ್ಯದಲ್ಲಿ ಟ್ರಕ್ಕಿಂಗ್‌ಗಾಗಿಯೇ ಪ್ರವಾಸ ಹೋಗಬೇಕೆಂದರೆ ಬೆಂಗಳೂರಿನ ಸುತ್ತಮುತ್ತನಲ್ಲೇ ಇವೆ ಅತ್ಯದ್ಭುತ ತಾಣಗಳು. ಹಾಗಾದರೆ ತಲುಪುವ ಮಾರ್ಗ, ಸ್ಥಳಗಳಿ, ದೂರದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Top Trekking Spots Near Bengaluru for Weekend Getaways Know details

1. ಸಾವನದುರ್ಗ: ಬೆಂಗಳೂರಿನಿಂದ 67.5 ಕಿಲೋ ಮೀಟರ್ ದೂರದಲ್ಲಿ ಸಮವಣದುರ್ಗ ಗಿರಿಧಾಮವುವಿದೆ. ಟ್ರಕ್ಕಿಂಗ್‌, ರಾಕ್ ಕ್ಲೈಂಬಿಂಗ್, ಕ್ಯಾಂಪಿಂಗ್‌ ಕೂಡ ಇಲ್ಲಿ ಮಾಡಬಹುದಾಗಿದೆ. ಅದರಲ್ಲೀ ಟ್ರಕ್ಕಿಂಗ್‌ ಮಾಡುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸಮುದ್ರ ಮಟ್ಟದಿಂದ 4,460 ಅಡಿ ಎತ್ತರದ ಬೆಟ್ಟ ಇದಾಗಿದೆ.

ಇದು ಏಷ್ಯಾದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುವುದನ್ನು ಕೂಡ ನೋಡಬಹುದಾಗಿದೆ. ಅಷ್ಟೇ ಅಲ್ಲದೆ, ಇಲ್ಲಿ ಹಲವಾರು ಪ್ರಾಣಿಗಳು ಹಾಗೂ ಸಸ್ಯ ಸಂಪತ್ತನ್ನು ಕಾಣಬಹುದಾಗಿದೆ.

ತಲುಪುವುದೇಗೆ?: ಪ್ರವಾಸಿಗರು ಇಲ್ಲಿನ ಪುರಾತನ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಬುದಾಗಿದೆ. ಇಲ್ಲಿನ ಪ್ರಶಾಂತ ವಾತಾವರಣವನ್ನು ಸವಿಯಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಬಸ್‌ನಲ್ಲಿ ಇಲ್ಲಿಗೆ ತೆರಳಬೇಕೆಂದರೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್‌ ಹತ್ತಬೇಕಾಗುತ್ತದೆ.

ಬಳಿಕ ನೀವು ಮಾಗಡಿ ರಸ್ತೆ ಜಂಕ್ಷನ್‌ಗೆ ಮತ್ತೊಂದು ಬಸ್ ಹತ್ತಬೇಕಾಗುತ್ತದೆ. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಇಲ್ಲಿಗೆ ಹೋಗಬಹುದಾಗಿದೆ. ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಅವಧಿ ಸುಮಾರು 2 ಗಂಟೆ 15 ನಿಮಿಷಗಳು.

2. ಶಿವಗಂಗೆ: ಶಿವಗಂಗೆ ಗಿರಿಧಾಮವು ಬೆಂಗಳೂರಿನಿಂದ 51.8 ಕಿಲೋ ಮೀಟರ್ ದೂರದಲ್ಲಿದೆ. ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದ ಅತ್ಯದ್ಭುತ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 1,380 ಮೀಟರ್ ಎತ್ತರದಲ್ಲಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದಾಬಸ್ ಪೇಟೆಯಿಂದ ಸುಮಾರು 6 ಕಿ.ಮೀ ಹಾಗೂ ತುಮಕೂರಿನಿಂದ ನಿಂದ 20 ಕಿಲೋ ಮಿಟರ್ ದೂರದಲ್ಲಿದೆ.

ಬೆಟ್ಟದ ಆರಂಭದಲ್ಲಿಯೇ ಶಿವನ ದೇವಾಲಯ, ಬಳಿಕ ಗಂಗಾಧರೇಶ್ವರ ದೇವಾಲಯವನ್ನು ಕಾಣಬಹುದಾಗಿದೆ. ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎನ್ನುವ ಪ್ರತೀತಿ ಇದೆ. ಹಾಗೆಯೇ ಒಂದು ಸಣ್ಣ ಸುರಂಗವಿದ್ದು, ಇದರ ಮೂಲದ ಶ್ರೀರಂಗಪಟ್ಟಣವನ್ನು ತಲುಪಬಹುದು ಎಂಬ ನಂಬಿಕೆಯಿದೆ. ಇನ್ನೂ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ಸಿಗುತ್ತದೆಯಂತೆ.

ಹಾಗೆಯೇ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಶಿವಪಾರ್ವತಿಯ ದೇವಸ್ಥಾನ, ನಂದಿ ವಿಗ್ರಹವಿದೆ. ಇದನ್ನು ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸವಾಗಿದೆ. ನಂತರ ಬೆಟ್ಟದ ತುತ್ತ ತುದಿಯಲ್ಲಿ ಗಂಗಾಧರೇಶ್ವರ ದೇವಾಲಯವನ್ನು ಕಾಣಬಹುದು. ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಪುರಾತನ ಕಾಲದ ಬೆಳ್ಳಿ ಗಂಟೆಗಳು.

3. ಮಾಕಳಿದುರ್ಗ: ಬೆಂಗಳೂರಿನಿಂದ ಸುಮಾರು 61.9 ಕಿಲೋ ಮೀಟರ್ ದೂರದಲ್ಲಿರುವ ಮಾಕಳಿದುರ್ಗ ಅತ್ಯಂತ ಸುಂದರವಾದ ತಾಣವಾಗಿದೆ. ಇದು ಟ್ರೆಕ್ಕಿಂಗ್‌ ಮಾಡುವ ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮಾರ್ಕಂಡೇಯ ಮಹಾ ಮುನಿಗಳು ಈ ಬೆಟ್ಟದ ಮೇಲೆ ತಪ್ಪಸ್ಸು ಮಾಡಿದರು ಎನ್ನಲಾಗುತ್ತದೆ. ಆದ್ದರಿಂದ ಈ ಬೆಟ್ಟವನ್ನು ಪವಿತ್ರವಾದುದು ಎಂದು ಪರಿಗಣಿಸಲಾಗಿದೆ.

ಮಾಕಳಿದುರ್ಗ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 4,460 ಅಡಿ ಎತ್ತರದಲಿದೆ. 1,117 ಅಡಿ ಎತ್ತರದಲ್ಲಿ ಎರಡು ಹಂತದ ಐತಿಹಾಸಿದ ಕೋಟೆಯೊಂದನ್ನು ನಿರ್ಮಾಣ ಮಾಡಲಾಗಿದೆ. ನೀವು ಸ್ನೇಹಿತರು, ಕುಟುಂಬದ ಸದಸ್ಯರ ಜೊತೆಗೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

4. ಸ್ಕಂದಗಿರಿ: ಬೆಂಗಳೂರಿನಿಂದ 60.9 ಕಿಲೋ ಮೀಟರ್ ದೂರದಲ್ಲಿ ಸ್ಕಂದಗಿರಿ ಬೆಟ್ಟವಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕೃತಿ ಮಡಿಲಿನಲ್ಲಿರುವ ಒಂದು ಐತಿಹಾಸಿಕ ಸ್ಥಳವಾಗಿದ್ದು, ಈ ಬೆಟ್ಟ ಸಮುದ್ರ ಮಟ್ಟದಿಂದ 4,429 ಮೀಟರ್ ಎತ್ತರದಲ್ಲಿದೆ. ಇಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಮಿಸಿದ ಕೋಟೆ ಸಹ ಇದ್ದು, ಪ್ರಕೃತಿ ಪ್ರಿಯರು ಹಾಗೂ ಸ್ಮಾರಕಗಳ ಬಗ್ಗೆ ವಿಶೇಷ ಆಸಕ್ತಿ ಇರುವವರಿಗೆ ಈ ಜಾಗ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಳವರದುರ್ಗ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಸ್ಕಂದಗಿರಿಯು ಕೋಟೆಯಿಂದ ಆವೃತ್ತವಾದ ಬೆಟ್ಟವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ಬಳಿ ಇದು ಬರುತ್ತದೆ.

5. ಮಂದಾರಗಿರಿ ಬೆಟ್ಟ: ತುಮಕೂರು ಜಿಲ್ಲೆಯಲ್ಲಿರುವ ಮಂದಾರಗಿರಿ ಬೆಟ್ಟವು ಬೆಂಗಳೂರಿನಿಂದ 62 ಕಿಲೋ ಮೀಟರ್ ಆಗುತ್ತದೆ. ಇಲ್ಲಿ ನವಿಲಿನ ಆಕಾರದಲ್ಲಿನ ಮಂದಿರವೂ ಇದೆ, ಸುತ್ತಲು ಹಸಿರು, ನೀರು ಎಲ್ಲವನ್ನೂ ಕಾಣಬಹುದಾಗಿದೆ.

6. ಅಂತರಗಂಗೆ: ಕೋಲಾರ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಅಂತರಗಂಗೆ ಬೆಟ್ಟವು ಬೆಂಗಳೂರಿನಿಂದ 68.4 ಕಿಲೋ ಮೀಟರ್‌ ದೂರದಲ್ಲಿದೆ. ಇನ್ನೂ ಜಿಲ್ಲೆಯಲ್ಲಿ ಅಂತರಗಂಗೆ ಸೇರಿದಂತೆ ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಾರ್ಕಂಡೇಯ ದೇವಸ್ಥಾನ, ತೇರಹಳ್ಳಿ. ಕೋಟಿಲಿಂಗೇಶ್ವರ ಸೇರಿದಂತೆ ಇತ್ಯಾದಿ ಆಧ್ಯಾತ್ಮಿಕ ತಾಣಗಳನ್ನು ಕಾಣಬಹುದಾಗಿದೆ.
ಅಂತರಗಂಗೆ ಬೆಟ್ಟವು ಈ ಬೆಟ್ಟವು ಕೋಲಾರಿನಿಂದ 3 ಕಿ.ಮೀ. ದೂರದಲ್ಲಿದ್ದು, ಇದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

7. ದೇವರಾಯನದುರ್ಗ: ದೇವರಾಯನದುರ್ಗ ಬೆಂಗಳೂರಿನಿಂದ 73.4 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 16 ಕಿ.ಮೀ. ಇದ್ದು, ಪ್ರತಿನಿತ್ಯ ಪ್ರವಾಸಿಗರ ದಂಡೇ ಈ ಬೆಟ್ಟವನ್ನು ಏರಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯನ್ನು ಆಗಮಿಸುತ್ತದೆ. ಇಲ್ಲಿಗೆ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳಬಹುದಾಗಿದೆ.

ಇಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಹಾಗೂ ಲಕ್ಷ್ಮೀ ನರಸಿಂಹ ಎನ್ನುವ ಮೂರು ದೇವಾಲಯ ಇದೆ. ಭೋಗ ನರಸಿಂಹ ಬೆಟ್ಟದ ಕೆಳಗಿದ್ದರೆ, ಯೋಗ ನರಸಿಂಹ ಬೆಟ್ಟದ ತುತ್ತ ತುದಿಯಲ್ಲಿದೆ. ಲಕ್ಷ್ಮೀನರಸಿಂಹ ಬೆಟ್ಟದ ಹತ್ತುತಿದ್ದಂತೆ ಸಿಗಲಿದೆ.

8. ಉತ್ತರಿ ಬೆಟ್ಟ: ಬೆಂಗಳೂರಿನಿಂದ 79.9 ಕಿಲೋ ಮೀಟರ್ ದೂರದಲ್ಲಿ ಉತ್ತರಿ ಬೆಟ್ಟವಿದೆ. ಇಲ್ಲಿ ಹಚ್ಚ ಹಸಿರಿನ ಸುತ್ತಮುತ್ತಲಿನ ಪ್ರಶಾಂತ ಸ್ಥಳಗಳು ಮತ್ತು ಸೂರ್ಯೋದಯದ ಸುಂದರವಾದ ನೋಟಗಳನ್ನು ಕಾಣಬುದಾಗಿದ್ದು, ಫೋಟೋ ಸೆರೆಹಿಡಿಯಬಹುದಾಗಿದೆ. ಇಲ್ಲಿನ ವಾತಾವರಣ ಎಂತಹವರನ್ನು ತನ್ನತ್ತ ಸೆಳೆಯುವಂತಿರುತ್ತದೆ.

9. ಅವನಿ ಬೆಟ್ಟ: ಕೋಲಾರ ಜಿಲ್ಲೆಯಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಅವನಿ ಬೆಟ್ಟ ಕೂಡ ಒಂದಾಗಿದೆ. ಬೆಂಗಳೂರಿನಿಂದ ಇಲ್ಲಿ 96.9 ಕಿ.ಮೀಟರ್ ಆಗಲಿದೆ. ಇಲ್ಲಿ ಅನೇಕ ದೇವಾಲಯಗಳು ಮತ್ತು ಶಿಲಾಶಾಸನಗಳನ್ನು ಕಾಣಬಹುದಾಗಿದೆ.

10. ಮಧುಗಿರಿ: ಮಧುಗಿರಿ ತುಮಕೂರು ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ 105.5 ಕಿಲೋ ಮೀಟರ್‌ ಆಗಲಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ವಾಗಿದೆ. ಇದರ ಸುತ್ತಮುತ್ತ ಗಣಿಗಾರಿಕೆಯ ಪ್ರದೇಶವನ್ನು ಕಾಣಬಹುದಾಗಿದೆ. ಇನ್ನು ಇಲ್ಲಿನ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+