ಕರ್ನಾಟಕದ ಈ ವಂದೇ ಭಾರತ್ ರೈಲಿಗೆ 8 ಬೋಗಿ ಸೇರ್ಪಡೆ
ಮಂಗಳೂರು, ಮೇ 12: ಕರ್ನಾಟಕದ ಕರಾವಳಿಗೆ ಆಗಮಿಸುವ ವಂದೇ ಭಾರತ್ ರೈಲಿಗೆ ಇನ್ನೂ 8 ಬೋಗಿಯನ್ನು ಅಳವಡಿಕೆ ಮಾಡಲಾಗುತ್ತದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೇ 22ರಿಂದ 16 ಬೋಗಿಯ ರೈಲಾಗಿ ಸಂಚಾರವನ್ನು ನಡೆಸಲಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಬೇಡಿಕೆ ಇರುವ ವಂದೇ ಭಾರತ್ ರೈಲುಗಳಲ್ಲಿ ಕರ್ನಾಟಕ ಮತ್ತು ಕೇರಳ ಸಂಪರ್ಕಿಸುವ ಈ ರೈಲು ಸಹ ಒಂದಾಗಿದೆ.
ದಕ್ಷಿಣ ರೈಲ್ವೆ ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವೆ 20631/ 632 ಸಂಖ್ಯೆಯ ವಂದೇ ಭಾರತ್ ರೈಲನ್ನು ಓಡಿಸುತ್ತಿದೆ. ಸದ್ಯ ರೈಲು 8 ಬೋಗಿಯನ್ನು ಒಳಗೊಂಡಿದೆ. ಆದರೆ ಈ ರೈಲಿಗೆ ಭಾರೀ ಬೇಡಿಕೆ ಇದೆ. ಆದ್ದರಿಂದ ಪ್ರಯಾಣಿಕರ ಬೇಡಿಕೆಯಂತೆ ರೈಲಿಗೆ ಇನ್ನೂ 8 ಬೋಗಿ ಸೇರಿಸಲಾಗುತ್ತಿದೆ.

ಮೇ 22ರಿಂದ ಈ ರೈಲು 16 ಬೋಗಿಯ ರೈಲಾಗಿ ಸಂಚಾರವನ್ನು ನಡೆಸಲಿದೆ. ಈ ಮೂಲಕ ಕೇರಳ ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 16 ಬೋಗಿಯ ರೈಲು ಆದಂತೆ ಆಗಿದೆ. ಬೋಗಿಯ ಸಂಖ್ಯೆ ಹೆಚ್ಚಳ ಬಿಟ್ಟರೆ ನಿಲ್ದಾಣ, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 6.25ಕ್ಕೆ ಹೊರಡಲಿದೆ ಮತ್ತು ತಿರುವನಂತಪುರಂಗೆ 3.05ಕ್ಕೆ ತಲುಪಲಿದೆ. 620 ಕಿ. ಮೀ. ದೂರವನ್ನು ರೈಲು 8.40 ಗಂಟೆಯಲ್ಲಿ ಕ್ರಮಿಸಲಿದೆ. ಈ ರೈಲಿನ ಸರಾಸರಿ ವೇಗ ಗಂಟೆಗೆ 72 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸಲಿದೆ.
ರೈಲು ತಿರುವನಂತಪುರಂನಿಂದ ರೈಲು ಸಂಖ್ಯೆ 20632 ಸಂಜೆ 4.05ಕ್ಕೆ ಹೊರಡಲಿದೆ. ಮಧ್ಯರಾತ್ರಿ 12.40ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ರೈಲು 8.35 ಗಂಟೆಗಳಲ್ಲಿ ಉಭಯ ನಗರವನ್ನು ಸಂಪರ್ಕಿಸಲಿದೆ. ಈ ರೈಲು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚಾರವನ್ನು ನಡೆಸುತ್ತದೆ.
ಮಂಗಳೂರು ಸೆಂಟ್ರಲ್-ತಿರುವನಂತಪುರಂ ನಡುವೆ ಚೇರ್ ಕಾರ್ ದರ 1,615 ರೂ. ಆಗಿದೆ. ಎಕ್ಸಿಕ್ಯುಟಿವ್ ಕ್ಲಾಸ್ ದರ 2,945 ರೂ. ಆಗಿದೆ. ತಿರುವನಂತಪುರಂ-ಮಂಗಳೂರು ನಡುವಿನ ದರ ಚೇರ್ ಕಾರ್ 1,575 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರ 2,910 ರೂ. ಆಗಿದೆ.
ಮಂಗಳೂರು-ತಿರುವನಂತಪುರಂ ನಡುವೆ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲು 13 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 9 ಗಂಟೆಯಲ್ಲಿ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ಈ ರೈಲಿಗೆ ಬೇಡಿಕೆ ಹೆಚ್ಚಾಗಿದೆ.
ಮೊದಲು ಈ ರೈಲು ಕೇರಳದಲ್ಲಿ ಮಾತ್ರ ಸಂಚಾರವನ್ನು ನಡೆಸುತ್ತಿತ್ತು. ತಿರುವನಂತಪುರಂ-ಕಾಸರಗೋಡು-ತಿರುವನಂತಪುರಂ ನಡುವೆ ಓಡುತ್ತಿತ್ತು. ಈ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಿ ಎಂದು ಇಲಾಖೆಗೆ ಬೇಡಿಕೆ ಸಲ್ಲಿಕೆ ಮಾಡಲಾಗಿತ್ತು. ಮಾರ್ಚ್ 13, 2024ರಂದು ಈ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗಿತ್ತು.
ಬೋಗಿಗಳ ವಿಚಾರಕ್ಕೆ ಬಂದರೆ ಈ ರೈಲು ಪ್ರಸ್ತುತ 8 ಬೋಗಿಯನ್ನು ಹೊಂದಿದೆ. ಅದರಲ್ಲಿ ಒಂದು ಎಕ್ಸಿಕ್ಯುಟಿವ್ ಕ್ಲಾಸ್, 7 ಚೇರ್ ಕಾರ್‌ಗಳನ್ನು ಹೊಂದಿದೆ. 16 ಬೋಗಿಯಾಗಿ ರೈಲು ಬದಲಾದ ಬಳಿಕ 14 ಚೇರ್ ಕಾರ್ ಮತ್ತು 2 ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಯನ್ನು ರೈಲು ಹೊಂದಲಿದೆ. ಸದ್ಯ ಚೇರ್ ಕಾರ್‌ಗಳಲ್ಲಿ 530 ಪ್ರಯಾಣಿಕರು ಸಂಚಾರ ನಡೆಸಬಹುದು. ಬೋಗಿ ಸಂಖ್ಯೆ ಅಧಿಕವಾದ ಬಳಿಕ 1,128 ಪ್ರಯಾಣಿಕರ ಸಂಚರಿಸಬಹುದು.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications