ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀವು ನೋಡಲೇ ಬೇಕಾದ ಪ್ರವಾಸಿ ತಾಣಗಳಿವು: ಮಾರ್ಗಗಳ ವಿವರ ಇಲ್ಲಿದೆ

ಚಿಕ್ಕಮಗಳೂರು, ನವೆಂಬರ್‌, 19: ಚಿಕ್ಕಮಗಳೂರು ಎಂದಾಕ್ಷಣ ನೆನಪಿಗೆ ಬರುವುದೇ ಪ್ರವಾಸಿ ತಾಣಗಳು. ಅದಲ್ಲೂ ಈ ಸಮಯದಲ್ಲಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಮನಮೋಹಕ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಭಾನುವಾರ, ಶನಿವಾರ ಅಂತೂ ಪೋಷಕರು ಕುಟುಂಬದ ಜೊತೆಗೆ ತಮ್ಮ ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತಲೇ ಇರುತ್ತಾರೆ. ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯಲು ಬರೀ ಜಿಲ್ಲೆ, ಹೊರರಾಜ್ಯದವರು ಅಷ್ಟೇ ಅಲ್ಲ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಹಾಗೆಯೇ ಪ್ರವಾಸಿಗರ ಅನೂಕೂಲಕ್ಕಾಗಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ವಿವರವನ್ನು ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು, ಕರ್ನಾಟಕದ ಅತ್ಯುನ್ನತ ಶಿಖರ ಇದಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 241 ಕಿಲೋ ಮೀಟರ್‌ ದೂರದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು, ಮತ್ತು ದಕ್ಷಿಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ.

ಚಾರಣದ ಅಗತ್ಯವಿಲ್ಲದೆ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ಸುಂದರ ಮನೋಹಕ ದೃಶ್ಯಗಳನ್ನು ನೀಡುತ್ತದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇಲ್ಲಿನ ಪ್ರಮುಖ ಆಕರ್ಷಣೆ ಆಗಿವೆ. ಇನ್ನು ಬೆಟ್ಟದ ತುದಿಯಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ. ಮುಳ್ಳಯ್ಯನಗಿರಿಗೆ ಹೋಗುವ ದಾರಿಯಲ್ಲಿ ಸೀತಾಳಯ್ಯನಗಿರಿ ಬೆಟ್ಟ, ದೇವಸ್ಥಾನಗಳನ್ನು ಕಾಣಬಹುದು. ಇನ್ನು ಬಾಬಾಬುಡನಗಿರಿ ಮತ್ತು ಮಾಣಿಕ್ಯಧಾರ ಜಲಪಾತಗಳು ಮುಳ್ಳಯ್ಯನಗಿರಿಯಿಂದ 26 ಕಿಲೋ ಮೀಟರ್‌ ಇದ್ದು, ಪ್ರವಾಸಿಗರನ್ನು ಈ ತಾಣಗಳು ತನ್ನತ್ತ ಸೆಳೆಯುತ್ತಲೇ ಇರುತ್ತವೆ.

ಗಿರಿಶಿಖರಕ್ಕೆ ತೆರಳುವ ಪ್ರವಾಸಿಗರಿಗೆ ಮಾಹಿತಿ

ಗಿರಿಶಿಖರಕ್ಕೆ ತೆರಳುವ ಪ್ರವಾಸಿಗರಿಗೆ ಮಾಹಿತಿ

ಕಡೂರು ಜಂಕ್ಷನ್ ಇಲ್ಲಿಗೆ ತಲುಪಲು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಇಲ್ಲಿಂದ ಮುಳ್ಳಯ್ಯನಗಿರಿಗೆ ಕೇಲವ 51 ಕಿಲೋ ಮೀಟರ್‌ ಆಗುತ್ತದೆ ಅಷ್ಟೇ. ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ 33 ಕಿಲೋ ಮೀಟರ್‌ ಆಗಲಿದ್ದು, ಇಲ್ಲಿಂದ ಬಸ್ಸುಗಳು ಸೌಲಭ್ಯವೂ ಇದೆ. ಚಿಕ್ಕಮಗಳೂರು, ಕಡೂರಿನಿಂದ ಟ್ಯಾಕ್ಸಿ ಮೂಲಕವೂ ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು. ಕೆಲವು ಕಿಲೋ ಮೀಟರ್‌ಗಳಷ್ಟು ರಸ್ತೆ ಕಿರಿದಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಇನ್ನು ಬೈಕ್‌ನಲ್ಲಿ ಪ್ರಯಾಣ ಬೆಳೆಸುವವರಿಗೆ ಇನ್ನು ಸುಲಭ ಮಾರ್ಗ ಇದಾಗಿದೆ. ಮುಳ್ಳಯ್ಯನಗಿರಿಗೆ ಬಸ್‌, ಕಾರ್‌ಗಳಲ್ಲಿ ಬರುವವರಿಗಿಂತ ಬೈಕ್‌ಗಳಲ್ಲಿ ಜಾಲಿ ರೈಡ್‌ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇಲ್ಲಿನ ಅಚ್ಚ ಹಸಿರಿನ ಮನಮೋಹಕ ದೃಶ್ಯಗಳನ್ನು ನೋಡಲು ಕೇವಲ ಹೊರರಾಜ್ಯದವರು ಅಷ್ಟೇ ಅಲ್ಲದೇ, ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ.

ಕೈಗೆಟುಕುವ ದರದಲ್ಲಿ ಹೋಂ ಸ್ಟೇ ವ್ಯವಸ್ಥೆ

ಕೈಗೆಟುಕುವ ದರದಲ್ಲಿ ಹೋಂ ಸ್ಟೇ ವ್ಯವಸ್ಥೆ

ಇನ್ನು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ದರದಲ್ಲಿ ಹೋಂ ಸ್ಟೇಗಳು ಲಭ್ಯವಿದ್ದು, ಪ್ರವಾಸಿಗರಿಗೆ ತಂಗಲು ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಹಾಗಾಗಿ ಇಲ್ಲಿಗೆ ಬಂದವರು ಕನಿಷ್ಠ ಮೂರು ದಿನವಂತೂ ತಂಗಿ ಪ್ರಕೃತಿ ಸೌಂದರ್ಯವನ್ನು ಸವಿದು ತಮ್ಮ ಊರುಗಳತ್ತ ಹಿಂದಿರುಗುತ್ತಾರೆ. ರಜೆ ದಿನಗಳಲಂತೂ ಪ್ರವಾಸಿಗರು ಈ ಸ್ಥಳಗಳಲ್ಲಿ ತುಂಬಿ ತುಳುಕುತ್ತಿರುತ್ತಾರೆ. ಎಷ್ಟು ಪ್ರವಾಸಿಗರು ಇಲ್ಲಿನ ಪ್ರಕೃತಿ ಸವಿದು ಹಿಂದಿರುಗುತ್ತಾರೋ ಮತ್ತೆ ಅದರ ಎರಡು ಪಟ್ಟು ಪ್ರವಾಸಿಗರು ಲಗ್ಗೆ ಇಡುತ್ತಲೇ ಇಡುತ್ತಾರೆ.

ಪ್ರಾಣಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ

ಪ್ರಾಣಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ

ಇನ್ನು ಭದ್ರಾ ವನ್ಯಜೀವಿ ಅಭಯಾರಣ್ಯದ ನೋಟವಂತೂ ಚಲನಚಿತ್ರದ ಒಂದು ದೃಶ್ಯ ಕಂಡತೆಯೇ ಭಾಸವಾಗುತ್ತದೆ. ಕರ್ನಾಟಕದ ಅತ್ಯಂತ ಜನಪ್ರಿಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಇದು ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಾಣಿ ಪ್ರೇಮಿಗಳಿಗೆ ಭದ್ರಾ ವನ್ಯಜೀವಿ ಅಭಯಾರಣ್ಯವು ಹೇಳಿ ಮಾಡಿಸಿದ ಜಾಗವಾಗಿದೆ. ಮಕ್ಕಳಿಗೂ ಕೂಡ ವನ್ಯಜೀವಿಗಳ ಪರಿಚಯ ಮಾಡಿಸಲು ಇದು ಅತ್ಯುತ್ತಮವಾದುದ್ದಾಗಿದೆ.

ವನ್ಯಜೀವಿ ಧಾಮಕ್ಕಿರುವ ಮತ್ತೊಂದು ಹೆಸರೇನು?

ವನ್ಯಜೀವಿ ಧಾಮಕ್ಕಿರುವ ಮತ್ತೊಂದು ಹೆಸರೇನು?

ಹಾಗಾದರೆ ಭದ್ರಾ ವನ್ಯಜೀವಿ ಅಭಯಾರಣ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಪಡೆದು ಒಮ್ಮೆ ಸ್ನೇಹಿತರ ಜೊತೆ ಅಥವಾ ಕುಟುಂಬ ಸಮೇತ ಒಮ್ಮೆ ಭೇಟಿ ನೀಡಿ ಬನ್ನಿ. 490 ಚದರ ಕಿಮೀ ಪ್ರದೇಶದಲ್ಲಿ ಹರಡಿರುವ ಭದ್ರಾ ವನ್ಯಜೀವಿ ಧಾಮವನ್ನು ಮುತ್ತೋಡಿ ವನ್ಯಜೀವಿ ಅಭಯಾರಣ್ಯ ಅಂತಲೂ ಕರೆಯುತ್ತಾರೆ. ಇದು ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಅಭಯಾರಣ್ಯದೊಳಗೆ ಸಫಾರಿಗಾಗಿ ಅರಣ್ಯ ಇಲಾಖೆ ಜೀಪ್ ಅನ್ನು ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ 30ಕ್ಕೂ ಹೆಚ್ಚು ಹುಲಿಗಳು ಮತ್ತು 20 ಚಿರತೆಗಳು ಇವೆ. ಹಾಗಾಗಿ ಸಫಾರಿಯಲ್ಲಿ ಹುಲಿ ಮತ್ತು ಚಿರತೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇನ್ನು ಭದ್ರಾ ಅಣೆಕಟ್ಟು ತನ್ನ ದ್ವಾರಗಳ ಮೂಲಕ ನೀರನ್ನು ಬಿಡುಗಡೆ ಮಾಡುವಾಗ, ಈ ದೃಶ್ಯವನ್ನು ನೋಡುವುದೇ ಒಂದು ಮನೋಹಕವಾಗಿರುತ್ತದೆ. ಭದ್ರಾ ಜಲಾಶಯದ ಒಳಗೆ ದೋಣಿ ವಿಹಾರ ಮಾಡಲು ವ್ಯವಸ್ಥೆ ಇದ್ದು, ಇಲ್ಲಿ ರಮಣೀಯ ಸೂರ್ಯಾಸ್ತವನ್ನು ಸಹ ನೋಡಬಹುದಾಗಿದೆ. ಇಲ್ಲಿ 120ಕ್ಕೂ ಹೆಚ್ಚು ವಿವಿಧ ಸಸ್ಯ ಮತ್ತು ಮರದ ಪ್ರಭೇದಗಳನ್ನು ಕೂಡ ನೋಡಬಹುದಾಗಿದೆ.

ಪ್ರವಾಸಿಗರಿಗೆ ರೆಸಾರ್ಟ್‌ಗಳ ವ್ಯವಸ್ಥೆ

ಪ್ರವಾಸಿಗರಿಗೆ ರೆಸಾರ್ಟ್‌ಗಳ ವ್ಯವಸ್ಥೆ

ಭದ್ರಾ ವನ್ಯಜೀವಿ ಅಭಯಾರಣ್ಯವು ಬೆಂಗಳೂರಿನಿಂದ 265 ಕಿಲೋ ಮೀಟರ್‌ ಇದ್ದರೆ, ಶಿವಮೊಗ್ಗದಿಂದ 32 ಕಿಲೋ ಮೀಟರ್‌ ಆಗುತ್ತದೆ. ಭದ್ರಾವತಿ ರೈಲು ನಿಲ್ದಾಣದಿಂದ 25 ಕಿಲೋ ಮೀಟರ್‌ ದೂರದಲ್ಲಿದೆ. ಭದ್ರಾವತಿ ಪಟ್ಟಣಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಲಭ್ಯವಿದೆ. ಆದ್ದರಿಂದ ಭದ್ರಾ ಅಣೆಕಟ್ಟು, ವನ್ಯಜೀವಿ ಅಭಯಾರಣ್ಯವನ್ನು ತಲುಪಲು ಟ್ಯಾಕ್ಸಿಗಳನ್ನು ಭದ್ರಾವತಿ, ಚಿಕ್ಕಮಗಳೂರು, ಶಿವಮೊಗ್ಗದಿಂದ ಬಾಡಿಗೆಗೆ ಪಡೆದು ತೆರಳಬಹುದಾಗಿದೆ. ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಜಂಗಲ್ ಲಾಡ್ಜ್‌ ಮತ್ತು ರೆಸಾರ್ಟ್‌ಗಳನ್ನು ಲಭ್ಯವಿರುತ್ತದೆ. ಇಲ್ಲಿ ಭದ್ರಾ ಹಿನ್ನೀರಿನ ವೀಕ್ಷಣೆ ಮಾಡಬಹುದಾದ ಕುಟೀರಗಳಿವೆ. ಪ್ರವಾಸಿಗರಿಗೆ ಭದ್ರಾದಿಂದ ಹತ್ತಿರದ 25-30 ಕಿಲೋ ಮೀಟರ್‌ ದೂರವಿರುವ ಭದ್ರಾವತಿ ಮತ್ತು ಶಿವಮೊಗ್ಗ ನಗರಗಳಲ್ಲಿ ಉಳಿದುಕೊಳ್ಳಲು ಇನ್ನು ಹೆಚ್ಚಿನದಾಗಿ ಸೌಲಭ್ಯಗಳ ವ್ಯವಸ್ಥೆ ಇದೆ.

ಜಿಲ್ಲೆಯ ಪ್ರಮುಖ ತಾಣಗಳಲ್ಲೊಂದಾದ ದತ್ತಪೀಠ

ಜಿಲ್ಲೆಯ ಪ್ರಮುಖ ತಾಣಗಳಲ್ಲೊಂದಾದ ದತ್ತಪೀಠ

ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಅಚ್ಚುಮೆಚ್ಚಾದ ಪ್ರವಾಸಿ ತಾಣಗಳಿವೆ. ಪ್ರತಿಯೊಂದು ಪ್ರವಾಸಿ ತಾಣಗಳಿಗೆ ತನ್ನದೇ ಆದಂತಹ ಇತಿಹಾಸವಿದೆ. ಹಾಗೆಯೇ ಅತ್ಯಂತ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪೀಠಕ್ಕೆ ತೆರಳುವ ಭಕ್ತಾದಿಗಳಿಗೆ, ಪ್ರತಿನಿತ್ಯ ಸಂಚರಿಸಲು ಸರ್ಕಾರದ ವತಿಯಿಂದ ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಎಂದು ಶ್ರೀರಾಮ ಸೇನೆ ಆಗ್ರಹಿಸಿತ್ತು. ಈ ಪ್ರದೇಶದಲ್ಲಿ ಪ್ರತಿನಿತ್ಯ ಸಂಚಾರ ಮಾಡುವಂತಹ ಖಾಸಗಿ ಬಸ್‌ಗಳಲ್ಲಿ ಬಾಬಾಬುಡನ್‌ಗಿರಿ ಎಂದು ನಾಮಫಲಕ ಹಾಕಲಾಗಿದೆ. ಈ ನಾಮ ಫಲಕಗಳನ್ನು ತೆರವುಗೊಳಿಸಿ ದತ್ತಪೀಠಕ್ಕೆ ತೆರಳುವಂತಹ ಎಲ್ಲಾ ಬಸ್‌ಗಳಿಗೆ ದತ್ತಪೀಠ ಎಂದು ನಾಮಫಲಕ ಹಾಕಬೇಕು ಎಂದು ಆಗ್ರಹಿಸುತ್ತಲೇ ಬಂದಿದೆ.

ಮೈಸೂರಿಗೂ, ಈ ಬೆಟ್ಟಕ್ಕೂ ಏನು ಸಂಬಂಧ?

ಮೈಸೂರಿಗೂ, ಈ ಬೆಟ್ಟಕ್ಕೂ ಏನು ಸಂಬಂಧ?

ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ದೇವಿರಮ್ಮನ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಬೆಟ್ಟದ ದೇವಿರಮ್ಮ ತಾಯಿಗೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನುವ ಉಲ್ಲೇಖಗಳಿವೆ. ಆದ್ದರಿಂದ ಪ್ರತಿವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜೆ ವಸ್ತುಗಳು ಬರುತ್ತದೆ. ಒಟ್ಟಾರೆ ದೇವಿರಮ್ಮ ತಾಯಿಯನ್ನು ನೋಡುವುದಕ್ಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರುವ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತ ಆಗದಂತೆ ಕಾಯುತ್ತಿದ್ದಾಳೆ.

ಕಾಫಿನಾಡ ಜನರ ದೀಪಾವಳಿ ವಿಶೇಷತೆ

ಕಾಫಿನಾಡ ಜನರ ದೀಪಾವಳಿ ವಿಶೇಷತೆ

ಕೊರೆಯುವ ಚಳಿ, ಮೈಮೇಲೆ ಬೀಳುವ ಇಬ್ಬನಿ, ಜಾರುವ ಗುಡ್ಡವನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಡುತ್ತಾರೆ. ಇನ್ನು ಭಕ್ತರು ಬರಿಗಾಲಲ್ಲಿ ಬೆಟ್ಟವೇರಿ, ದೇವಿಯ ದರ್ಶನ ಮಾಡುವುದು ಈಗಲೂ ನಡೆದುಕೊಂಡು ಬಂದಿದೆ. ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆ ಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದು, ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಭಕ್ತರು ತರುವ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಿಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡುತ್ತಾರೆ. ದೀಪವನ್ನು ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನು ಆಚರಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+