Bengaluru to Kedarnath Train: ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗಲು ವಿಶೇಷ ರೈಲು
ಬೆಂಗಳೂರಿನಿಂದ ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ಬಯಸುವವರಿಗೆ ಒಂದು ಶುಭ ಸುದ್ದಿ. ಅದೇನೆಂದರೆ ಸಂಪರ್ಕ ಕ್ರಾಂತಿ ರೈಲು ಮೂಲಕ ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗಬಹುದಾಗಿದೆ. ಹಾಗಾದರೆ ಬೆಂಗಳೂರಿನಿಂದ ರೈಲಿನ ಮೂಲಕ ಕೇದಾರನಾಥ ಧಾಮಕ್ಕೆ ತೆರಳುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇ 10ರಂದು ಕೇದಾರನಾಥ, ಯಮುನೋತ್ರಿ, ಗಂಗೋತ್ರಿ ಹಾಗೂ ಬದರಿನಾಥ ಧಾಮವನ್ನು ಮೇ 12ರಂದು ತೆರೆಯಲಾಗಿದೆ. ಕರ್ನಾಟಕದಿಂದ ಚಾರ್‌ಧಾಮ್ ಯಾತ್ರೆ ಕೈಗೊಳ್ಳುವವರಿಗೆ ವಿಶೇಷ ರೈಲುಗಳ ಸೌಲಭ್ಯವನ್ನು ಒದಗಿಸಲಾಗಿದೆ. ಹೌದು... ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಯಶ್ವಂತಪುರದಿಂದ ಸಂಪರ್ಕ ಕ್ರಾಂತಿ ರೈಲು ಹೊರಡುತ್ತದೆ. ಈ ರೈಲಿನಲ್ಲಿ ದೆಹಲಿವರೆಗೆ ಪ್ರಯಾಣ ಮಾಡಬಹುದು. ಹಾಗಾದರೆ ಈ ರೈಲು ಯಾವ ದಿನ ಇರುತ್ತದೆ? ಹೊರಡುವ ಸಮಯ ಯಾವುದು? ಎಲ್ಲದರ ಬಗ್ಗೆ ತಿಳಿಯೋಣ. ಬೆಂಗಳೂರಿನಿಂದ ಕೇದಾರನಾಥಕ್ಕೆ ರೈಲಿನ ಮೂಲಕ ಹೋಗಲು ಬಯಸುವವರಿಗೆ ಟೂರ್ ಪ್ಲ್ಯಾನ್ ಇಲ್ಲಿದೆ. ಈ ಪ್ಲ್ಯಾನ್ ಮೂಲಕ ನೀವು ಸುಲಭವಾಗಿ ಕೇದಾರನಾಥಕ್ಕೆ ಭೇಟಿ ನೀಡಬಹುದು.
ಬೆಂಗಳೂರಿನಿಂದ ದೆಹಲಿ ರೈಲು ಪ್ರಯಾಣ
ಸಂಪರ್ಕ ಕ್ರಾಂತಿ ರೈಲು (12649) ಬುಧವಾರ ಮಧ್ಯಾಹ್ನ 13.50ಕ್ಕೆ ಯಶ್ವಂತಪುರದಿಂದ ಹೊರಡುತ್ತದೆ. ಈ ರೈಲು ರಾತ್ರಿ 9.15ಕ್ಕೆ ಹುಬ್ಬಳ್ಳಿಯನ್ನು ತಲುಪುತ್ತದೆ. ತುಮಕೂರು ಹರಸಿಕೇರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಹೊಸಪೇಟೆ, ಬಳ್ಳಾರಿ ಮೂಲಕ ಈ ರೈಲು ಹಾದು ಹೋಗಲಿದೆ. ಈ ರೈಲು ಮುಂದೆ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ತಲುಪುವಾಗ ಶುಕ್ರವಾರ ಬೆಳಿಗ್ಗೆ 8.10 ಗಂಟೆಯಾಗಿರುತ್ತದೆ. ಹಾಗಾದರೆ ಈ ರೈಲು ಪ್ರಯಾಣ ದರ ಹೇಗಿದೆ ಎಂದು ತಿಳಿಯೋಣ.

ಬೆಂಗಳೂರಿನಿಂದ ದೆಹಲಿ ರೈಲು ಪ್ರಯಾಣ ದರ:
SL-840
3A:3180
2A: 3165
1A:5405
ದೆಹಲಿಯಿಂದ ಹರಿದ್ವಾರಕ್ಕೆ ಪ್ರಯಾಣ
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ನಿಂದ 9.50ಕ್ಕೆ ಇನ್ನೊಂದು ಟ್ರೈನ್ ಮೂಲಕ ಹರಿದ್ವಾರಕ್ಕೆ ಹೋಗಬೇಕಾಗುತ್ತದೆ. ಇದು ಹರಿದ್ವಾರವನ್ನು ಸಂಜೆ 4.10ಕ್ಕೆ ತಲುಪುತ್ತದೆ. ಇದಕ್ಕೆ 190 ರೂಪಾಯಿ ಟಿಕೆಟ್ ದರ ಇರಲಿದೆ. ಶುಕ್ರವಾರವೇ ಹರಿದ್ವಾರವನ್ನು ತಲುಪಲಾಗುತ್ತದೆ.
ಶನಿವಾರ ಬೆಳಿಗ್ಗೆ ಹರಿದ್ವಾರದಿಂದ ಸೋನ್‌ಪ್ರಯಾಗ್ ಗೆ ಬಸ್ ಮೂಲಕ ಪ್ರಯಾಣ (1000 ಪ್ರಯಾಣ ದರ) ಮಾಡಿ ರಾತ್ರಿ ಸೋನ್‌ಪ್ರಯಾಗ್ ನಲ್ಲಿ ಉಳಿದುಕೊಂಡು ಭಾನುವಾರ ಬೆಳಗ್ಗೆ ಬೇಗ ಜೀಪ್ ಮೂಲಕ ಗೌರಿಕುಂಡಕ್ಕೆ ಪ್ರಯಾಣ ಆರಂಭವಾಗುತ್ತದೆ.
ಭಾನುವಾರ ಬೆಳಗ್ಗೆ ಸೋನ್‌ಪ್ರಯಾಗ್ ಮೂಲಕ ಗೌರಿಕುಂಡಕ್ಕೆ ಜೀಪ್ ಮೂಲಕ ಹೋಗಲಾಗುತ್ತದೆ. ಗೌರಿಕುಂಡದಿಂದ ಕೇದಾರನಾಥ್ ಟ್ರಕ್ಕಿಂಗ್ ಶುರುವಾಗುತ್ತದೆ. ಐದನೇ ದಿನವೇ ನೀವು ಕೇದಾರನಾಥ ಧಾಮವನ್ನು ತಲುಪುವ ಮೂಲಕ ದೇವರ ದರ್ಶನ ಮಾಡಬಹುದು.

ಚಾರ್‌ಧಾಮ್ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡುವುದು ಹೇಗೆ?
ಉತ್ತರಖಂಡನ ಯಾವುದೇ ಯಾತ್ರೆಗೆ ಹೋಗಬೇಕಾದರು ನೀವು ಯಾತ್ರಾ ರಿಜಿಸ್ಟ್ರೇಷನ್ ಮಾಡಿಸಲೇಬೇಕು. ಆನ್‌ಲೈನ್‌ನಲ್ಲಿ ಯಾತ್ರಾ ರಿಜಿಸ್ಟ್ರೇಷನ್ ಮಾಡಿಸುವುದಾದರೆ https://registrationandtouristcare.uk.gov.in/signin.php ಮೂಲಕ ಮಾಡಬಹುದು.
ಇನ್ನೊಂದು tourist care uttarakhand ಮೊಬೈಲ್ ಆಪ್ ಕೂಡ ಇದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಕೂಡ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಇನ್ನೊಂದು ಯಾತ್ರಾ ರಿಜಿಸ್ಟ್ರೇಷನ್ ನಂಬರ್ 8394833833 ಇದೆ. ಇದನ್ನು ಸೇವ್ ಮಾಡಿಕೊಂಡು ಈ ನಂಬರ್‌ಗೆ ಯಾತ್ರಾ ಅಂತ ಮೆಸೇಜ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications