ಬೆಂಗಳೂರು, ಹುಬ್ಬಳ್ಳಿ ಮಾರ್ಗದ ಹಲವು ರೈಲು ಭಾಗಶಃ ರದ್ದು

ದಕ್ಷಿಣ ಮಧ್ಯ ರೈಲ್ವೆ ವಲಯ ಇಂಜಿನಿಯರಿಂಗ್ ಕಾಮಗಾರಿಗಳ ಹಿನ್ನಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು, ಫೆಬ್ರವರಿ 08; ದಕ್ಷಿಣ ಮಧ್ಯ ರೈಲ್ವೆ ವಲಯ ಇಂಜಿನಿಯರಿಂಗ್ ಕಾಮಗಾರಿಗಳ ಹಿನ್ನಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿದೆ. ರೈಲ್ವೆ ಪ್ರಯಾಣಿಕರು ಪ್ರಯಾಣಕ್ಕೆ ಮುನ್ನ ಈ ಮಾಹಿತಿ ತಿಳಿಯಿರಿ.

ನ್ಯೂ ಗುಂಟೂರು ಮತ್ತು ನಂಬೂರು ನಿಲ್ದಾಣಗಳ ನಡುವೆ ರೈಲು ಹಳಿ ನವೀಕರಣ (ಟಿಆರ್‌ಆ‌)ಗೆ ಸಂಬಂಧಿಸಿದ ಇಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಈ ಕೆಳಗಿನ ಕೆಲವು ರೈಲುಗಳು ಭಾಗಶಃ ರದ್ದುಗೊಂಡಿವೆ.

ಫೆಬ್ರವರಿ 13 ರಿಂದ 17ರ ತನಕ ವಿವಿಧ ಮಾರ್ಗದಲ್ಲಿ ಸಂಚಾರ ನಡೆಸುವ ಹಲವು ರೈಲುಗಳು ಭಾಗಶಃ ರದ್ದಾಗಿದೆ. ವೀಕೆಂಡ್‌ನಲ್ಲಿ ರೈಲು ಪ್ರಯಾಣ ಮಾಡುವ ಆಲೋಚನೆ ಇದ್ದರೆ ಒಮ್ಮೆ ರೈಲುಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ.

South Central Railway Partial Cancelled Trains Due To Engineering Works

ತಿರುವನಂತಪುರಂ ಸೆಂಟ್ರಲ್ ಮತ್ತು ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿಯೂ ಕೆಲವು ರೈಲು ಭಾಗಶಃ ರದ್ದಾಗಿದೆ.

ಭಾಗಶಃ ರದ್ದುಗೊಂಡಿರುವ ರೈಲುಗಳು

* ಫೆಬ್ರವರಿ 13, 14 ಮತ್ತು 16 ರಂದು ಕೆ. ಎಸ್. ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16526 ಕೆ. ಎಸ್. ಆರ್ ಬೆಂಗಳೂರು ಕನ್ಯಾಕುಮಾರಿ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ ಸೆಂಟ್ರಲ್-ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಭಾಗಶಃ ರದ್ದು. ಈ ರೈಲು ಕನ್ಯಾಕುಮಾರಿ ನಿಲ್ದಾಣದ ಬದಲು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಲ್ಲಿ ನಿಲ್ಲಲಿದೆ.

* ಇದೇ ಫೆಬ್ರವರಿ 14, 15 ಮತ್ತು 17ರಂದು ಕನ್ಯಾಕುಮಾರಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16525 ಕನ್ಯಾಕುಮಾರಿ-ಕೆ. ಎಸ್. ಆರ್ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಕನ್ಯಾಕುಮಾರಿ-ತಿರುವನಂತಪುರಂ ಸೆಂಟ್ರಲ್ ರೈಲ್ವೆ ನಿಲ್ದಾಣಗಳ ನಡುವೆ ಭಾಗಶಃ ರದ್ದು. ರೈಲು ಕನ್ಯಾಕುಮಾರಿ ನಿಲ್ದಾಣದ ಬದಲಿಗೆ ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ಹೊರಡುತ್ತದೆ.

* ಫೆಬ್ರವರಿ 7 ರಿಂದ 9 ರವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17329 ಎಸ್. ಎಸ್. ಎಸ್. ಹುಬ್ಬಳ್ಳಿ-ವಿಜಯವಾಡ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಗುಂಟೂರು ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಭಾಗಶಃ ರದ್ದು. ಈ ರೈಲು ವಿಜಯವಾಡ ನಿಲ್ದಾಣದ ಬದಲು ಗುಂಟೂರು ನಿಲ್ದಾಣದಲ್ಲಿ ನಿಲ್ಲಲಿದೆ.

* ಫೆಬ್ರವರಿ 8 ರಿಂದ 10 ರವರೆಗೆ ವಿಜಯವಾಡ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17330 ವಿಜಯವಾಡ ಎಸ್. ಎಸ್. ಎಸ್. ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ವಿಜಯವಾಡ ಮತ್ತು ಗುಂಟೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು. ರೈಲು ವಿಜಯವಾಡ ನಿಲ್ದಾಣದ ಬದಲಿಗೆ ಗುಂಟೂರು ನಿಲ್ದಾಣದಿಂದ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+