Get Updates
Get notified of breaking news, exclusive insights, and must-see stories!

Indian Railways: ಭಾರತದ ಈ ರೈಲು ಮಾರ್ಗ ಈಗಲೂ ಇಂಗ್ಲೀಷರ ವಶದಲ್ಲಿದೆ: ಕಾರಣ ಏನು ಗೊತ್ತಾ?- ಇಲ್ಲಿದೆ ಮಾಹಿತಿ

ಭಾರತದಲ್ಲಿರುವ ಶಾಕುಂತಲಾ ರೈಲ್ವೆಯು ಈಗಲೂ ಬ್ರಿಟೀಷರ ವಶದಲ್ಲಿದೆ. ಇದಕ್ಕೆ ಭಾರತೀಯ ರೈಲ್ವೆ ಪಾವತಿಸುವ ಮೊತ್ತ ಎಷ್ಟು? ಮತ್ತು ಈ ಮಾರ್ಗವನ್ನು ಇನ್ನೂ ಯಾಕೆ ಸ್ಥಗಿತಗೊಳಿಸಲು ಆಗಿಲ್ಲ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನವದೆಹಲಿ, ಮಾರ್ಚ್‌, 13: ಭಾರತೀಯ ರೈಲ್ವೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಪರ್ವವೇ ಆಗುತ್ತಿದೆ. ಜನರ ಅನುಕೂಲಕ್ಕೆ ತಕ್ಕಂತೆ ಪ್ರವಾಸ ರೈಲುಗಳನ್ನು ಘೋಷಣೆ ಮಾಡುವುದರ ಜೊತೆಗೆ ಭಾರಿ ಜನಮನ್ನಣೆಯನ್ನು ಪಡೆದಿದೆ. ವಂದೇ ಭಾರತ್‌, ವಂದೇ ಮೆಟ್ರೋ ರೈಲುಗಳನ್ನು ಬಿಡುವ ಮೂಲಕ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯ ಪಥದತ್ತ ಸಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಭಾರತೀಯ ರೈಲ್ವೆಯಲ್ಲಿ ನಿಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ಇಲ್ಲಿ ತಿಳಿಯಿರಿ.

ಈಗಲೂ ಭಾರತದ ರೈಲು ಹಳಿಯೊಂದು ಬ್ರಿಟೀಷರ ವಶದಲ್ಲಿದೆ ಎನ್ನುವ ವಿಚಾರ ದೇಶದ ಜನರನ್ನು ಅಚ್ಚರಿಗೊಳಪಡಿಸಿದೆ. ಪ್ರತಿ ವರ್ಷವೂ ಸಹ ಈ ಹಳಿಯಲ್ಲಿ ರೈಲು ಓಡಿಸಲು ಭಾರತೀಯ ರೈಲ್ವೆ ಬ್ರಿಟೀಷ್ ಕಂಪನಿಯೊಂದಕ್ಕೆ ಕೋಟ್ಯಂತರ ರೂ. ಪಾವತಿಸುತ್ತದೆ. ಈ ಹಳಿಯ ಹೆಸರು ಶಕುಂತಲಾ ರೈಲ್ವೆ ಟ್ರ್ಯಾಕ್ ಆಗಿದೆ. ಹಾಗಾದರೆ ಈ ಹಳಿ ಇರುವ ಹಳ್ಳಿ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ಬ್ರಿಟೀಷರ ಕಾಲದಲ್ಲಿ ಈ ಟ್ರ್ಯಾಕ್‌ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು. ಸ್ವಾತಂತ್ರ್ಯ ಬಂದ ಸುಮಾರು 5 ವರ್ಷಗಳ ನಂತರ ರೈಲ್ವೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ಮಾರ್ಗವನ್ನು ಮಾತ್ರ ನಿರ್ಲಕ್ಷಿಸಿದ್ದಾರೆ. ಈ ಟ್ರ್ಯಾಕ್ ಇನ್ನೂ ಬ್ರಿಟನ್‌ನ ಖಾಸಗಿ ಕಂಪನಿಯಾದ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯ ಅಸ್ತಿತ್ವದಲ್ಲಿದೆ.

 ಈ ಮಾರ್ಗದಲ್ಲಿ ಕೇವಲ ಒಂದು ರೈಲು ಸಂಚಾರ

ಈ ಮಾರ್ಗದಲ್ಲಿ ಕೇವಲ ಒಂದು ರೈಲು ಸಂಚಾರ

ಇದೀಗ ಇಲ್ಲಿ ಕೇವಲ ಒಂದು ರೈಲು ಮಾತ್ರ ಕಾರ್ಯನಿರ್ವಹಿಸುತ್ತದೆ. ಅದರ ಹೆಸರು ಶಂಕುತಲಾ ಪ್ಯಾಸೆಂಜರ್ ಆಗಿದೆ. ಈ ರೈಲಿನ ಹೆಸರಿನ ಬಳಿಕ ಟ್ರ್ಯಾಕ್‌ನ ಹೆಸರು ಕೂಡ ಪ್ರಸಿದ್ಧಿ ಪಡೆಯಿತು ಎಂದು ಹೇಳಲಾಗುತ್ತಿದೆ. ಶಕುಂತಲಾ ಎಕ್ಸ್‌ಪ್ರೆಸ್ ಹೆಸರಿನ ರೈಲು ಹಳಿಯಲ್ಲಿ ಕೇವಲ ಒಂದು ಪ್ಯಾಸೆಂಜರ್ ರೈಲು ಮಾತ್ರ ಸಂಚರಿಸುತ್ತಿದೆ.

 ಪ್ರಯಾಣದ ಸಮಯಗಳನ್ನು ತಿಳಿಯಿರಿ

ಪ್ರಯಾಣದ ಸಮಯಗಳನ್ನು ತಿಳಿಯಿರಿ

ಇದು ಅಮರಾವತಿಯಿಂದ ಮುರ್ತಜಾಪುರಕ್ಕೆ 189 ಕಿಲೋ ಮೀಟರ್‌ಗಳ ಪ್ರಯಾಣವನ್ನು 6-7 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ. ಈ ಪ್ರಯಾಣದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅಚಲಪುರ, ಯವತ್ಮಾಲ್ ಸೇರಿದಂತೆ 17 ಸಣ್ಣ ಮತ್ತು ದೊಡ್ಡ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

 ರೈಲು ತಯಾರಾದ ಸ್ಥಳ ಯಾವುದು?

ರೈಲು ತಯಾರಾದ ಸ್ಥಳ ಯಾವುದು?

100 ವರ್ಷಗಳಷ್ಟು ಹಳೆಯದಾದ 5 ಬೋಗಿಗಳ ರೈಲನ್ನು 70 ವರ್ಷಗಳ ಕಾಲ ಸ್ಟೀಮ್ ಇಂಜಿನ್ ಮೂಲಕ ಸಂಚರಿಸಲಾಗುತ್ತಿತ್ತು. ಇದನ್ನು 1921ರಲ್ಲಿ ಯುಕೆ ಮ್ಯಾಂಚೆಸ್ಟರ್‌ನಲ್ಲಿ ತಯಾರಿಸಲಾಯಿತು. 15 ಏಪ್ರಿಲ್, 1994ರಂದು, ಶಕುಂತಲಾ ಎಕ್ಸ್‌ಪ್ರೆಸ್‌ನ ಉಗಿ ಇಂಜಿನ್ ಅನ್ನು ಡೀಸೆಲ್ ಎಂಜಿನ್​ಗೆ ಬದಲಾವಣೆ ಮಾಡಲಾಯಿತು.

ಈ ಮಾರ್ಗದಲ್ಲಿ ಅಳವಡಿಸಲಾಗಿರುವ ಸಿಗ್ನಲ್‌ಗಳು ಕೂಡ ಇನ್ನೂ ಬ್ರಿಟೀಷರ ಕಾಲದ್ದಾಗಿವೆ. ಇವುಗಳನ್ನು 1895ರಲ್ಲಿ ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ತಯಾರಿಸಲಾಗಿತ್ತು. 7 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಪ್ರಯಾಣ ಮಾಡುವ ಜನರೆಲ್ಲ ಬಡಕುಟುಂಬದವರೇ ಆಗಿದ್ದಾರೆ. ಆದ್ದರಿಂದ ಈ ರೈಲನ್ನು ಇನ್ನು ಸ್ಥಗಿತಗೊಳಿಸಿಲ್ಲ.

 ರೈಲನ್ನು ತಯಾರಿಸಲು ಮುಖ್ಯ ಕಾರಣ ಏನು?

ರೈಲನ್ನು ತಯಾರಿಸಲು ಮುಖ್ಯ ಕಾರಣ ಏನು?

ಅಮರಾವತಿಯ ಪ್ರದೇಶವು ಹತ್ತಿ ಬೆಳೆಯುವಲ್ಲಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿತ್ತು. ಆಗ ಮುಂಬೈ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟೀಷರು ಈ ರೈಲನ್ನು ನಿರ್ಮಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. 1903ರಲ್ಲಿ ಬ್ರಿಟೀಷ್ ಕಂಪನಿ ಕ್ಲಿಕ್ ನಿಕ್ಸನ್ ಅನ್ನು ಪ್ರಾರಂಭಿಸಿದ್ದು, ರೈಲು ಹಳಿ ಹಾಕುವ ಕಾರ್ಯವನ್ನು 1916ರಲ್ಲಿ ಪೂರ್ಣಗೊಳಿಸಿತು.

ಬ್ರಿಟಿಷರ ಕಾಲದಲ್ಲಿ ರೈಲು ಜಾಲವನ್ನು ವಿಸ್ತರಿಸಲು ಖಾಸಗಿ ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಭಾರತೀಯ ರೈಲ್ವೇಯನ್ನು 1951ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಆಗ ಈ ಮಾರ್ಗಚಷ್ಟೇ ಭಾರತ ಸರ್ಕಾರದ ಅಸ್ತಿತ್ವದಲ್ಲಿ ಇರಲಿಲ್ಲ. ಬದಲಾಗಿ ಭಾರತ ಸರ್ಕಾರವು ಈ ಕಂಪನಿಗೆ ಪ್ರತಿ ವರ್ಷ 1 ಕೋಟಿ 20 ಲಕ್ಷಗಳ ರೂಪಾಯಿಗಳ ಸಹಾಯಧನವನ್ನು ನೀಡುತ್ತಾ ಬಂದಿದೆ.

 ಜವಾಬ್ದಾರಿ ಹೊತ್ತಿರುವ ಬ್ರಿಟೀಷ್ ಸರ್ಕಾರ

ಜವಾಬ್ದಾರಿ ಹೊತ್ತಿರುವ ಬ್ರಿಟೀಷ್ ಸರ್ಕಾರ

ಶಕುಂತಲಾ ಪ್ಯಾಸೆಂಜರ್ ರೈಲು ಕೆಳವರ್ಗದ ಕುಟುಂಬಗಳಿಗೆ ಆಸರೆಯಾಗಿದೆ. ಯವತ್ಮಾಲ್ ಮತ್ತು ಅಚಲಪುರ ನಡುವೆ ಪ್ರಯಾಣಿಸಲು ಇದು ಏಕೈಕ ಮಾರ್ಗವಾಗಿದೆ. ಹೀಗಾಗಿ ರೈಲು ಸಂಚಾರ ಇನ್ನು ಸ್ಥಗಿತ ಆಗಿಲ್ಲ. ಇಂದಿಗೂ ಈ ಟ್ರ್ಯಾಕ್​ ಬ್ರಿಟೀಷ್ ಕಂಪನಿಯ ಅಸ್ತಿತ್ವದಲ್ಲಿದೆ. ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯೂ ಕೂಡ ಬ್ರಿಟೀಷ್ ಸರ್ಕಾರದ ಮೇಲಿದೆ.

ಭಾರತ ಸರ್ಕಾರದಿದ ಪ್ರತಿ ವರ್ಷವೂ ಹಣವನ್ನು ನೀಡಲಾಗುತ್ತದೆ. ಆದರೂ ಕೂಡ ಈ ಟ್ರ್ಯಾಕ್ ನಿರ್ವಹಣೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಳೆದ 65 ವರ್ಷಗಳಿಂದಲೂ ದುರಸ್ತಿಯೇ ಆಗಿಲ್ಲ ಎಂದು ರೈಲ್ವೆ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಡಿಎಂ ಸರಣಿಯ ಡೀಸೆಲ್ ಲೊಕೊ ಎಂಜಿನ್‌ನ ಗರಿಷ್ಠ ವೇಗವು 20 kmphನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಟ್ರ್ಯಾಕ್‌ನಲ್ಲಿ ಓಡುತ್ತಿರುವ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಮತ್ತು ಎರಡನೇ ಬಾರಿಗೆ ಏಪ್ರಿಲ್ 2016 ರಲ್ಲಿ ಮುಚ್ಚಲಾಯಿತು. ನಂತರ ಸ್ಥಳೀಯ ಜನರ ಬೇಡಿಕೆ ಹಾಗೂ ಸಂಸದ ಆನಂದ್ ರಾವ್ ಒತ್ತಡದಿಂದ ಸರ್ಕಾರ ಮತ್ತೆ ಇದನ್ನು ಪ್ರಾರಂಭಿಸಿತ್ತು. ಈ ರೈಲು ಇದೀಗ ಅಮರಾವತಿ ಜನರ ಜೀವನಾಡಿಯಾಗಿದೆ ಎಂದು ಸಂಸದ ಆನಂದ್ ರಾವ್ ಹೇಳಿದ್ದಾರೆ.

 ಆನಂದ್ ರಾವ್ ಹೇಳಿದ್ದೇನು?

ಆನಂದ್ ರಾವ್ ಹೇಳಿದ್ದೇನು?

ಇದು ನಿಂತರೆ ಬಡವರು ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಇದನ್ನು ಇನ್ನು ಸ್ಥಗಿತಗೊಳಿಸಿಲ್ಲ ಎಂದು ತಿಳಿಸಿದ್ದಾರೆ. ಆನಂದ್ ರಾವ್ ಅವರು ಈ ನ್ಯಾರೋ ಗೇಜ್ ಅನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವ ಪ್ರಸ್ತಾವನೆಯನ್ನೂ ರೈಲ್ವೆ ಇಲಾಖೆಗೆ ಕಳುಹಿಸಿದ್ದಾರೆ. ಭಾರತ ಸರ್ಕಾರವು ಹಲವಾರು ಬಾರಿ ಈ ಟ್ರ್ಯಾಕ್ ಅನ್ನು ಖರೀದಿಸಲು ಮುಂದಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+