Vande Bharat Express: ಕೇರಳದಲ್ಲಿ ವಂದೇ ಭಾರತ್‌ ಆರಂಭವಾಗಿ ಒಂದು ವರ್ಷ-ರೆಸ್ಪಾನ್ಸ್‌ ಹೇಗಿದೆ?

Vande Bharat Express: ಇದೀಗ ದೇಶಾದ್ಯಂತ ವಂದೇ ಭಾರತ್‌ ರೈಲು ಸಂಚಾರ ಮಾಡುತ್ತಿದ್ದು, ಜನಮನ್ನಣೆ ಪಡೆಯುತ್ತಲೇ ಇದೆ. ಇದೀಗ ಕೇರಳದಲ್ಲಿ ಸಂಚಾರ ಮಾಡುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಇದೀಗ ಒಂದು ವರ್ಷ ತುಂಬಿದೆ. ಹಾಗಾದರೆ ಇದಕ್ಕೆ ಇಲ್ಲಿ ಯಾವ ರೀತಿ ರೆಸ್ಪಾನ್ಸ್‌ ಇದೆ ಹಾಗೂ ಆರಂಭವಾಗಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೇರಳದಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಗಿತ್ತು. ಪ್ರಯಾಣ ದರ ಹೆಚ್ಚಳ ಹಿನ್ನೆಲೆ ಈ ರೈಲು ಪ್ರಯಾಣಿಕರನ್ನು ಸೆಳೆಯುತ್ತದೆಯೋ ಇಲ್ಲವೋ ಎನ್ನುವ ಚರ್ಚೆಗಳು ಕೂಡ ಆರಂಭದಲ್ಲಿ ಆಗಿದ್ದವು. ಆದರೆ ದಿನ ಕಳೆದಂತೆ ಈ ರೈಲಿಗೆ ಉತ್ತಮ ಸ್ಪಂದನೆ ದೊರೆಯುತ್ತ ಬಂದಿದೆ.

One year since Vande Bharat Express started in Kerala how is the response

ವಂದೇ ಭಾರತ್ ರೈಲು‌ ಸೇವೆ ಆರಂಭವಾಗುವ ಮೊದಲ ಎರಡು ವಾರಗಳವರೆಗೆ ಟಿಕೆಟ್‌ಗಳು ವೇಟಿಂಗ್‌ ಲಿಸ್ಟ್‌ನಲ್ಲಿದ್ದು, ಕಳೆದ ಏಪ್ರಿಲ್‌ 26ರಂದು ಕಾಸರಗೋಡಿನಿಂದ ತಿರುವನಂತಪುರಕ್ಕೆ ಮೊದಲ ಟ್ರಿಪ್‌ನಲ್ಲೇ 19.50 ಲಕ್ಷ ಆದಾಯಯವನ್ನು ತೆಕ್ಕೆಗೆ ಹಾಕಿಕೊಂಡಿತ್ತು.

ತಿರುವನಂತಪುರದಿಂದ ಕಾಸರಗೋಡಿಗೆ ಮತ್ತು ಕಾಸರಗೋಡು-ತಿರುವನಂತಪುರಕ್ಕೆ ಸಂಚಾರ ಮಾಡುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜನರ ಮೆಚ್ಚುಗೆನ್ನು ಪಡೆದುಕೊಂಡಿದೆ. ಇದೀಗ ಸದ್ಯ ದೇಶದಲ್ಲಿ 51 ವಂದೇ ಭಾರತ್‌ ರೈಲುಗಳು ಸಂಚಾರ ಮಾಡುತ್ತಿವೆ. ಪ್ರಯಾಣಿಕರ ಸಂಖ್ಯೆ ಕೇರಳದಲ್ಲಿ ಇದೀಗ ಹೆಚ್ಚಳ ಆಗಿದೆ. ಆಕ್ಯುಪೆನ್ಸಿ ಶೇಕಡಾ 200ರ ಸಮೀಪ ತಲುಪಿರುವ ಭಾರತದ ಏಕೈಕ ರೈಲು ಓಡಾಟ ಇದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್‌ 25ರಂದು ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು.

ಕೇರಳ ಈಗ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಖುಷಿಯಲ್ಲಿದೆ. ಎರಡನೇ ವಂದೇ ಭಾರತ್‌ ರೈಲು ತಿರುವನಂತಪುರದಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ತಿರುವನಂತಪುರವರೆಗೆ ಸಂಚಾರ ಮಾಡುತ್ತಿದೆ. ಮೊದಲ ವಂದೇ ಭಾರತ್‌ನ ಆಕ್ಯುಪೆನ್ಸಿ ದರವು 200 ಪ್ರತಿ ಶತದ ಸಮೀಪದಲ್ಲಿದ್ದರೆ, ಎರಡನೇ ವಂದೇ ಭಾರತ್‌ ರೈಲಿನ ಆಕ್ಯುಪೆನ್ಸಿ ದರವು ಶೇಕಡಾ 165ಕ್ಕಿಂತ ಹೆಚ್ಚಿದೆ.

ಸದ್ಯ ವಂದೇ ಭಾರತ್‌ ರೈಲಿನ ಸಮಯವನ್ನು ಪ್ರಯಾಣಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಕೇರಳದಲ್ಲಿ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಕಾಯ್ದಿರಿಸುವಿಕೆ ಲಭಿಸುವುದಿಲ್ಲ ಎಂಬುದನ್ನು ಇದರ ಆಕ್ಯುಪೆನ್ಸಿ ದರ ತೋರಿಸುತ್ತದೆ. ರೈಲ್ವೆ ಇಲಾಖೆಯು ಕೇರಳಕ್ಕೆ ವಂದೇ ಭಾರತ್‌ ಬಂದ ನಂತರ ರೈಲುಗಳ ವೇಗವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದೆ. ಇದೀಗ ವೇಗವನ್ನು 130 ಕಿಲೋ ಮೀಟರ್‌ಗೆ ತರಲು, ಹೊಸ ಸಿಗ್ನಲಿಂಗ್‌ ವ್ಯವಸ್ಥೆ ಮತ್ತು ಕರ್ವ್ ಫಿಲ್ಲಿಂಗ್‌ ಅನ್ನು ಆರಂಭಿಸಲಾಗುದೆ.

ತಿರುವನಂತಪುರದಿಂದ ಕಾಸರಗೋಡಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ವಾರದಲ್ಲಿ 6 ದಿನ ಸಂಚಾರ ಮಾಡುತ್ತದೆ. ವಂದೇ ಭಾರತ್‌ (20634) ತಿರುವನಂತಪುರದಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 1:20ಕ್ಕೆ ಕಾಸರಗೋಡಿಗೆ ತಲುಪಲಿದೆ. ವಂದೇ ಭಾರತ್‌(20633) ಕಾಸರಗೋಡಿನಿಂದ ಮಧ್ಯಾಹ್ನ 2:30ಕ್ಕೆ ಹೊರಟು ರಾತ್ರಿ 10:40ಕ್ಕೆ ತಿರುವನಂತಪುರ ತಲುಪುತ್ತದೆ.

ಮತ್ತೊಂದು ವಂದೇ ಭಾರತ್‌ ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 06:15ಕ್ಕೆ ಹೊರಟು ಸಂಜೆ 3:05ಕ್ಕೆ ತಿರುವನಂತಪುರ ತಲುಪುತ್ತದೆ. ವಂದೇ ಭಾರತ್‌ ತಿರುವನಂತಪುರದಿಂ ಸಂಜೆ 4:05ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ಮಂಗಳೂರು ತಲುಪುತ್ತದೆ. ಇತರ ರೈಲುಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರದಂತೆ ವಂದೇ ಭಾರತ್‌ ವೇಳಾಪಟ್ಟಿಯನ್ನು ಎರಡು ಬಾರಿ ಬದಲಾವಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+