NWKSRTC: ಬೆಳಗಾವಿಯಲ್ಲಿ ವಾಯುವ್ಯ ಸಾರಿಗೆಯ 55 ನೂತನ ಇವಿ ಬಸ್‌ಗಳಿಗೆ ಚಾಲನೆ, ಇವುಗಳ ವಿಶೇಷತೆ ತಿಳಿಯಿರಿ

ಬೆಳಗಾವಿ, ಫೆಬ್ರವರಿ, 18: ಬೆಳಗಾವಿಯಲ್ಲಿ ಇಂದು (ಫೆಬ್ರವರಿ 18) 55 ನೂತನ ಇವಿ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಹಾಗಾದರೆ ಈ ಬಸ್‌ಗಳು ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ 55 ಹೊಸ ಬಸ್‌ಗಳಿಗೆ ಚಾಲನೇ ನೀಡಿದರು. ಈ ಬಸ್ಸುಗಳು ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.

NWKSRTC: launched to 55 new electric buses in Belagavi, know speciality

ಈ ಬಸ್‌ಗಳ ವಿಶೇಷತೆಗಳೇನು: ಪರಿಸರ ಸ್ನೇಹಿ BS-6, AIS-140 ವಾಹನ‌ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆಗೆ ಸಿಸಿ ಕ್ಯಾಮೆರಾ, ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗಿದೆ. ಸುಧಾರಿತ ಎಬಿಎಸ್‌ವುಳ್ಳ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಿಕ್‌ ವಾಹನ ಸುಸ್ಥಿತ ನಿಯಂತ್ರಣ (EVSC) ಹೊಂದಿದ್ದು, ನೂತನ ತಂತ್ರಜ್ಞಾನ ಆನ್ ಬೋರ್ಡಿಂಗ್ ಡೆಗ್ನೊಸ್ಟಿಕನ್-02 ವ್ಯವಸ್ಥೆ ಹೊಂದಿದೆ. ಪ್ರಯಾಣಿಕರಿಗೆ ಆರಾಮದಾಯಕ ಆಸನದ ವ್ಯವಸ್ಥೆ, ಬೆಂಕಿ ಮುನ್ನೆಚ್ಚರಿಕೆ ನೀಡುವ FDS ಸಾಧನ ಕೂಡ ಅಳವಡಿಕೆ ಮಾಡಲಾಗಿದೆ.

ಅಷ್ಟೇ ಅಲ್ಲದೇ ರಾಯಬಾಗ ತಾಲೂಕಿನ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹಾರೂಗೇರಿ ನೂತನ ಬಸ್ ನಿಲ್ದಾಣ ಉದ್ಘಾಟನೆ, ಅಪಘಾತ ರಹಿತ 38 ಬಸ್ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿದರು.

ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾತನಾಡಿ, ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ 55 ಬಸ್ಸುಗಳನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಂದರೆ ಒಂದು ಬದ್ದತೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಚುನಾವಣೆ ಪೂರ್ವ ರಾಜ್ಯದ ಜನರಿಗೆ ಪಂಚ ಯೋಜನೆ ಜಾರಿ ಮಾಡಿದ್ದೇವೆ. 136 ಶಾಸಕರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಇನ್ನು ಜನರಿಗೆ ಕೊಟ್ಟ ಗ್ಯಾರಂಟಿ ಭರವಸೆಗಳಲ್ಲಿ ಮೊದಲ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದಕಲು ಮೊದಲು ಕೊಟ್ಟಿದ್ದು ಶಕ್ತಿಯೋಜನೆಯಾಗಿದೆ ಎಂದರು. ಹಾಗೆಯೇ ಸಚಿವ ರಾಮಲಿಂಗಾರೆಡ್ಡಿ ಅವರನ್ನ ವರ್ಕೋ ಹಾಲಿಕ ಮಿನಿಸ್ಟರ್ ಅಂತಾ ಕರೆಯುತ್ತೇವೆ ಎಂದರು.

749 ನೂತನ ಬಸ್ಸಗಳ ಖರೀದಿ ಆರಭವಾಗಿದೆ. ಹಾಗೇಯೆ ಎರಡು ಸಾವಿರ ಉದ್ಯೋಗಗಳನ್ನ ಕರೆಯಲಾಗಿದೆ. 38 ಚಾಲಕರ ಕಾರ್ಯಕ್ಕೆ ಮೆಚ್ಚಿ ಅವರಿಗೆ ಸನ್ಮಾನ ಮಾಡಿ ಪದಕ ಹಾಕಿ ಗೌರವ ಸಲ್ಲಿಸಿದ್ದೇವೆ. ಈ ಸನ್ಮಾನ ನಿಮಗಷ್ಟೇ ಅಲ್ಲ, ನಿಮ್ಮ ಕುಟುಂಬದವರಿಗೂ ಕೂಡಾ ಈ ಸನ್ಮಾನ ಸಲ್ಲುತ್ತದೆ. ಸಾರಿಗೆ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ 145 ಜನರಿಗೆ ಕೆಲಸ ನೀಡಿದ್ದೇವೆ. ಚಾಲಕ ಮತ್ತು ಕಂಡಕ್ಟರ್‌ ಅವರು ಅಪಘಾತದಲ್ಲಿ ಮರಣ ಹೊಂದಿದ್ದರೆ 50 ಲಕ್ಷ ಕೊಡುತ್ತೇವೆ ಎಂದರು.

ನಾನು ರಾಮನ ಭಕ್ತಳು, ಆದರೆ ಬಿಜೆಪಿ ಅವರು ರಾಮನ ಹೆಸರು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೆ ನಮ್ಮ ಸಿದ್ದರಾಮಯ್ಯ ಸರ್ಕಾರ ಚಾಚು ತಪ್ಪದೆ ರಾಮನಿಗೆ ಪೂಜೆ ಸಲ್ಲಿಸುತ್ತಿದೆ.

ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ ಅಶೋಕ ಪಟ್ಟಣ್, ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+