NWKRTC: ಬೆಳಗಾವಿ-ಹೈದರಾಬಾದ್ ಐರಾವತ ಬಸ್, ವೇಳಾಪಟ್ಟಿ
ಬೆಳಗಾವಿ, ಮೇ 20: ಬೆಳಗಾವಿ-ಹೈದರಾಬಾದ್ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿ ಒಂದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಭಯ ನಗರಗಳ ನಡುವೆ ಐಷಾರಾಮಿ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ. ಪ್ರತಿದಿನ ಬೆಳಗಾವಿ-ಹೈದರಾಬಾದ್ ನಡುವೆ ಐರಾವತ ಕ್ಲಬ್ ಕ್ಲಾಸ್ ಬಸ್ ಸಂಚಾರ ನಡೆಸುತ್ತಿದೆ.

ಬಸ್ ವೇಳಾಪಟ್ಟಿ: ಕರ್ನಾಟಕದ ಗಡಿಜಿಲ್ಲೆ ಬೆಳಗಾವಿ ಮತ್ತು ತೆಲಂಗಾಣದ ನಡುವೆ ಸಂಚಾರ ನಡೆಸುವ ಐರಾವತ ಕ್ಲಬ್ ಕ್ಲಾಸ್ ಪ್ರತಿದಿನದ ಬಸ್ ಸೇವೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಸ್ ಬೆಳಗಾವಿಯಿಂದ 19:00 ಗಂಟೆಗೆ ಹೊರಡಲಿದೆ. ಹೈದಾರಾಬಾದ್‌ನಿಂದ 20:15ಕ್ಕೆ ಹೊರಡಲಿದೆ ಎಂದು ಮಾಹಿತಿ ನೀಡಲಾಗಿದೆ.
ಬೆಳಗಾವಿ-ಹೈದರಾಬಾದ್ ನಡುವಿನ ಬಸ್ ಯುರಗಟ್ಟಿ, ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಕಲಬುರಗಿ ಮತ್ತು ಹುಮ್ನಾಬಾದ್ ನಡುವೆ ಸಂಚಾರ ನಡೆಸಲಿದೆ.
ಈ ಬಸ್‌ನಲ್ಲಿ ಸಂಚಾರ ನಡೆಸಲು ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ ಮಾಡಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ವೇಗದೂತ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಬಬಲಾದಿ ನಡುವೆ ವೇಗದೂತ ಬಸ್ ಸಂಚಾರವನ್ನು ಆರಂಭಿಸಿದೆ. ಬೆಳಗಾವಿ-ಬಬಲಾದಿ ನಡುವಿನ ಬಸ್ ಯರಗಟ್ಟಿ, ಯಾದವಾಡ, ಮುಧೋಳ್, ಗಲಗಲಿ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಬಬಲಾದಿ ನಡುವಿನ ಬಸ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬೆಳಗಾವಿಯಿಂದ ಬಸ್ 16:00 ಹೊರಡುವ ಬಸ್ ಬಬಲಾದಿಯನ್ನು 20:00ಕ್ಕೆ ತಲುಪಲಿದೆ. ಬಬಲಾದಿಯಿಂದ 06:00 ಹೊರಟು, ಬೆಳಗಾವಿಗೆ 10:00ಕ್ಕೆ ತಲುಪಲಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಮಾರ್ಗದಲ್ಲಿ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ, ರಾಮದುರ್ಗ-ಬೆಂಗಳೂರು, ಮುರುಡೇಶ್ವರ- ಬೆಂಗಳೂರು ಮತ್ತು ಬೀಳಗಿ-ಬೆಂಗಳೂರು ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತವೆ. ಜನರು ಆನ್‌ಲೈನ್ ಟಿಕೆಟ್‌ಗಳಿಗಾಗಿ http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಹುಬ್ಬಳ್ಳಿ-ಶಿರಡಿ ಮಾರ್ಗದ ಪ್ರಯಾಣ ದರ 1,300 ರೂ.ಗಳು. ಬಸ್ ಹುಬ್ಬಳ್ಳಿಯಿಂದ ಹೊರಟು 20:08, ಶಿರಡಿಯನ್ನು 08;45ಕ್ಕೆ ತಲುಪುತ್ತದೆ. ಶಿರಡಿಯಿಂದ 20:00ಕ್ಕೆ ಹೊರಟು, ಹುಬ್ಬಳ್ಳಿಯನ್ನು 08:45ಕ್ಕೆ ತಲುಪಲಿದೆ. ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ.
ಬೆಳಗಾವಿ-ಲಾತೂರ ಬಸ್ ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳುಜಾಪುರ ಮೂಲಕ ಸಾಗುತ್ತದೆ. ಪ್ರಯಾಣ ದರ 924 ರೂ.ಗಳು. ಈ ಬಸ್ ಬೆಳಗಾವಿಯಿಂದ 20:00ಕ್ಕೆ ಹೊರಟು, ಲಾತೂರ 06:20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಗೆ 50.30ಕ್ಕೆ ತಲುಪುತ್ತದೆ.












Click it and Unblock the Notifications