ಹೊಸ ವರ್ಷಕ್ಕೆ ಪ್ರವಾಸಿ ತಾಣಗಳಲ್ಲಿ ಹೊಸ ಸಮಸ್ಯೆ, ಏನದು
ಹೇಳಿ ಕೇಳಿ ಇದು ರಜೆ ಸಮಯ. ಸಾಲು.. ಸಾಲು ರಜೆ ಹಿನ್ನಲೆಯಲ್ಲಿ ಜನ ಪ್ರವಾಸಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಪ್ಲಾನ್ ಮಾಡಿಕೊಳ್ಳುವಾಗಲೇ ಹೊಸ ಸಮಸ್ಯೆಯೊಂದು ಎದುರಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷ, ವರ್ಷಾಂತ್ಯ ಹಿನ್ನೆಲೆಯಲ್ಲಿ ಹಿರಿಯರು ಹಾಗೂ ಮಕ್ಕಳಿಗೆ ಏಕಕಾಲಕ್ಕೆ ರಜೆ ಸಿಕ್ಕಿದೆ. ವರ್ಷವೆಲ್ಲ ದುಡಿದು ವರ್ಷಾಂತ್ಯದಲ್ಲಿ ಸಣ್ಣ ಪ್ರವಾಸ ಮಾಡಬೇಕು ಎಂದು ಪ್ಲಾನ್ ಮಾಡಿಕೊಳ್ಳುತ್ತಿರುವವರಿಗೆ ಪ್ರವಾಸಿ ತಾಣಗಳಲ್ಲಿ ಈ ಬಾರಿ ತುಂಬಾ ಸಮಸ್ಯೆ ಎದುರಾಗಿದೆ. ಅದಕ್ಕೆ ಮುಖ್ಯ ಕಾರಣ ಈ ಬಾರಿ ಪ್ರವಾಸಿ ತಾಣಗಳಲ್ಲಿ ಜನ ಹೆಚ್ಚಾಗಿ ಸೇರುತ್ತಿರುವುದು ಮಾತ್ರವಲ್ಲ. ಜನ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಹಲವು ಪ್ರವಾಸಿ ತಾಣಗಳಲ್ಲಿ ವಸತಿ ಸಮಸ್ಯೆಯೂ ಎದುರಾಗಿರುವುದು ವರದಿಯಾಗಿದೆ.
ಹೌದು ಕರ್ನಾಟಕದಲ್ಲಿ ಈ ಬಾರಿ ಜನ ಪ್ರವಾಸ ಮಾಡುವುದು ಹೆಚ್ಚಾಗಿದೆ. ಇನ್ನು ಗಮನಿಸಬೇಕಾದ ಅಂಶವೆಂದರೆ ಕೋವಿ* ನಂತರ ದೇಶದಾದ್ಯಂತ ಜನ ಸಣ್ಣ ಸಣ್ಣ ಪ್ರವಾಸಗಳನ್ನು ಮಾಡುವುದು ಹೆಚ್ಚಾಗುತ್ತಿದೆ. ಆದರೆ, ಈ ಬಾರಿ ವರ್ಷಾಂತ್ಯದಲ್ಲಿ ಪ್ರವಾಸ ಮಾಡುವವರಿಗೆ ಶಾಕ್ ಎದುರಾಗಿದೆ.

ಹೋಟೆಲ್ & ಹೋಮ್ ಸ್ಟೇ ಫುಲ್: ಇನ್ನು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಾಗೂ ವರ್ಷಾಂತ್ಯದ ಆಫರ್‌ಗಳು ಸಹ ಇರುವುದರಿಂದ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ಹೋಮ್ ಸ್ಟೇಗಳು ಸಹ ಭರ್ತಿಯಾಗಿವೆ. ಹೀಗಾಗಿ, ಜನ ರೂಮ್‌ಗಳು ಸಿಗದೆ ಪ್ರವಾಸಿ ತಾಣಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಮತ್ತಷ್ಟು ಸಮಸ್ಯೆ ಆಗಲಿದೆ ಎಂದು ಹೇಳಲಾಗಿದೆ.
ಇದೇ ಸಮಯ ಎಂದು ಕೆಲವು ಹೋಟೆಲ್‌ಗಳು ಹಾಗೂ ಖಾಸಗಿ ವಾಹನ ಸಂಸ್ಥೆಗಳು ಪ್ರಯಾಣದ ಮತ್ತು ವಸತಿಯ ಹಣವನ್ನು ಹೆಚ್ಚಿಸಿವೆ. ಇದು ಪ್ರವಾಸ ಮಾಡಲು ಆಸೆಯಿಂದ ಹೋಗುತ್ತಿರುವವರಿಗೆ ನುಂಗಲಾರದ ತುಪ್ಪವಾಗ್ತಿದೆ.
ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಾತ್ರೆ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಹಂಪಿ, ಚಿತ್ರದುರ್ಗದ ಕೋಟೆ, ಚಾಮುಂಡಿ ಬೆಟ್ಟ, ಶಿವಮೊಗ್ಗ, ಕೊಡಗು, ನಂದಿಬೆಟ್ಟ, ಕೆಆರ್‌ಎಸ್, ಮೈಸೂರು ಅರಮನೆ, ನಾಗರಹೊಳೆ, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದ ಕೆಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ ಬೇಡಿಕೆ ಹೇಗಿದೆ: ಬೆಂಗಳೂರಿನಲ್ಲೂ ಹೊಸ ವರ್ಷ ಸಂಭ್ರಮಾಚರಣೆ ಜೋರಾಗಿದೆ. ಬೆಂಗಳೂರಿನಲ್ಲಿ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳವೆ. 65 ಫೈ ಸ್ಟಾರ್ ಹೋಟೆಲ್‌ಗಳು ಬೆಂಗಳೂರಿನಲ್ಲಿ ಇವೆ. ಅಲ್ಲದೆ ಹಲವು ಪ್ರತಿಷ್ಠಿತ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಿವೆ. ಬೆಂಗಳೂರಿನಲ್ಲಿ ಹೊಸ ವರ್ಷ ಹಾಗೂ ಹೋಟೆಲ್ ಉದ್ಯಮದ ಬಗ್ಗೆ ಮಾತನಾಡಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, ಈ ಬಾರಿ ಹೊಸ ವರ್ಷದ ಸಮಯದಲ್ಲಿ 1,000 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಹೊರತುಪಡಿಸಿ ವಿವಿಧ ಜಿಲ್ಲೆಗಳಲ್ಲಿ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ. ಬೆಂಗಳೂರಲ್ಲಿ 1600 ಬರ್ ಅಂಡ್ ರೆಸ್ಟೋರೆಂಟ್‌ಗಳಿವೆ. ಪಬ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಬೆಂಗಳೂರಿನಲ್ಲಿ ಶೇ 70ರಷ್ಟು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಬುಕ್ಕಿಂಗ್ ಆಗಿವೆ. ಪ್ರತಿ ದಿನ 120 ಕೋಟಿ ಅಬಕಾರಿ ಇಲಾಖೆಗೆ ಸಂಗ್ರಹವಾಗುತ್ತದೆ. ಡಿಸೆಂಬರ್ 30 ಹಾಗೂ 31ರಷ್ಟು 250 ಕೋಟಿ ರೂಪಾಯಿ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿಗೆ ಹೊಸ ವರ್ಷದ ಸಮಯದಲ್ಲಿ ಉತ್ತರ ಭಾರತದಿಂದ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದಲೂ ಜನ ಬರುತ್ತಾರೆ. ಇನ್ನು ವಿದೇಶದಿಂದಲೂ ಜನ ಹೊಸ ವರ್ಷ ಆಚರಣೆಗೆ ಇಲ್ಲಿಗೆ ಬರುತ್ತಾರೆ. ಇಲ್ಲಿ ಭಿನ್ನವಾದ ಪಬ್‌ಗಳು, ಜೋರು ಹೊಸ ವರ್ಷ ಸಂಭ್ರಮಾಚರಣೆ ಹಾಗೂ ಕಡಿಮೆ ಬೆಲೆಯೂ ಇದಕ್ಕೆ ಕಾರಣವಾಗಿದೆ.












Click it and Unblock the Notifications