New Year 2024: ಬೆಂಗಳೂರಿನಿಂದ ತಿರುಪತಿಗೆ ಭೇಟಿ ನೀಡಲು ಬಯಸುವಿರಾ? ಇಲ್ಲಿದೆ ವಿಶೇಷ ಟೂರ್ ಪ್ಯಾಕೇಜ್
ಬೆಂಗಳೂರು ಡಿಸೆಂಬರ್ 29: ಹೊಸ ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಹೊಸ ವರ್ಷದ ಸಂದರ್ಭದಲ್ಲಿ ಎಲ್ಲಾದರು ಪ್ರಯಾಣಿಸಲು ಯೋಜಿಸುವವರೇ ಹೆಚ್ಚು. ಹಾಗೇನಾದರೂ ನೀವು ಪ್ರಯಾಣ ಮಾಡುವ ಯೋಚನೆಯಲ್ಲಿದ್ದರೆ, ಅತ್ಯಂತ ಕಡಿಮೆ ಹಣದಲ್ಲಿ ತಿರುಪತಿಗೆ ಭೇಟಿ ನೀಡಬಹುದು. ಜೊತೆಗೆ ಹೊಸ ವರ್ಷವನ್ನು ತಿಮ್ಮಪ್ಪನ ಆಶೀರ್ವಾದದ ಮೂಲಕ ಬರಮಾಡಿಕೊಳ್ಳಬಹುದು.
ಹೌದು.. ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮನ್ನು ತಿರುಪತಿಗೆ ಕರೆದೊಯ್ಯಲು IRCTC ಒಂದು ಅದ್ಭುತವಾದ ಪ್ರವಾಸ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. ತಿರುಪತಿ ತಿಮ್ಮಪ್ಪನ ದೇವಸ್ಥಾನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಇಲ್ಲಿರುವ ವೆಂಕಟೇಶ್ವರ ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ತಿರುಮಲ ಪರ್ವತದ ಮೇಲೆ ನಿರ್ಮಿಸಲಾಗಿದ್ದು ಪ್ರತಿ ವರ್ಷ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದರ್ಶನಕ್ಕಾಗಿ ಆಗಮಿಸುತ್ತಾರೆ.

ಈ ಬಾರಿ ಹೊಸ ವರ್ಷ ವಾರಾಂತ್ಯದಲ್ಲಿ ಬಂದಿದ್ದು ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ. ಈ ಹೊಸ ವರ್ಷದ ಸಂದರ್ಭದಲ್ಲಿ ನೀವು ಕೂಡ IRCTC ಪ್ರವಾಸ ಪ್ಯಾಕೇಜ್ ಅನ್ನು ಬಳಸಿಕೊಳ್ಳಬಹುದು. ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಅನೇಕ ಉತ್ತಮ ಸೌಲಭ್ಯಗಳನ್ನು ಸಹ ನೀಡಲಾಗಿದೆ. ಹಾಗಾದರೆ ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ -
IRCTC ಯ ಈ ಪ್ರವಾಸದ ಪ್ಯಾಕೇಜ್‌ನ ಹೆಸರು ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಎಂದಾಗಿದೆ. ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ನೀವು ಒಟ್ಟು 1 ರಾತ್ರಿ ಮತ್ತು 2 ಹಗಲು ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ. ಈ ಪ್ರವಾಸದ ಪ್ಯಾಕೇಜ್ ಜನವರಿ 2, 2024 ರಂದು ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ. IRCTCಯ ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ, ನಿಮ್ಮ ಪ್ರಯಾಣ ಬಸ್ ಮೂಲಕ ಪ್ರಾರಂಭವಾಗಲಿದೆ. ಇದರಲ್ಲಿ ನೀವು ಮಲ್ಟಿ ಎಕ್ಸಲ್ ಎಸಿ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ.
ಈ ಪ್ರವಾಸದ ಪ್ಯಾಕೇಜ್ ಅಡಿಯಲ್ಲಿ ಪ್ರಯಾಣಿಸುವಾಗ ಮಾರ್ಗದರ್ಶನದ ಸೌಲಭ್ಯವನ್ನು ಸಹ ನೀಡಲಾಗಿದೆ. ಇದಲ್ಲದೇ ಉಚಿತವಾಗಿ ದರ್ಶನ ಟಿಕೆಟ್ ಕೂಡ ನೀಡಲಾಗುವುದು. ಇದಕ್ಕಾಗಿ ನೀವು ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ.
IRCTC ಯ ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ನಿಮ್ಮನ್ನು ತಿರುಪತಿಗೆ ಕರೆದೊಯ್ಯಲಾಗುತ್ತದೆ. ಪ್ಯಾಕೇಜ್‌ನ ಭಾಗವಾಗಿ ನಿಮ್ಮ ವಾಸ್ತವ್ಯಕ್ಕಾಗಿ ಹೋಟೆಲ್ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತದೆ. IRCTCಯ ಈ ತಿರುಪತಿ ಬಾಲಾಜಿ ಪ್ರವಾಸದ ಪ್ಯಾಕೇಜ್‌ನ ದರ ಕೇವಲ 1930 ರೂಪಾಯಿ ಮಾತ್ರ. ಇದನ್ನು ಪಾವತಿಸಿದರೆ ನೀವು ಆರಾಮದಾಯಕವಾಗಿ ಯಾವುದೇ ಗೊಂದಲ ಗಡಿಬಿಡಿಯಿಲ್ಲದೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡಬಹುದು. ಹೊಸ ವರ್ಷವನ್ನು ತಿಮ್ಮಪ್ಪನ ಆಶೀರ್ವಾದದ ಮೂಲಕ ಬರಮಾಡಿಕೊಳ್ಳಬಹುದು.
ತಿರುಪತಿಯಲ್ಲಿ ಈಗಾಗಲೇ ಹತ್ತು ದಿನಗಳ ವೈಕುಂಠ ದ್ವಾರ ದರ್ಶನ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ವೈಕುಂಠ ಏಕಾದಶಿ ನಿಮಿತ್ತ ತಿರುಮಲ ವೈಕುಂಠ ದ್ವಾರ ದರ್ಶನಕ್ಕಾಗಿ ಡಿಸೆಂಬರ್ 23 ರಿಂದ 2024 ರ ಜನವರಿ 1 ರವರೆಗೆ ಸರ್ವ ದರ್ಶನ ಟೋಕನ್ ವಿತರಣೆ ಮಾಡಲಾಗಿದೆ. ಈಗಾಗಲೇ ಭಕ್ತರು ನಿತ್ಯ ತಿರುಮಲಕ್ಕೆ ಭೇಡಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ. ಈ ನಡುವೆ ಟಿಟಿಡಿ ಮುಂದಿನ ಸರ್ವದರ್ಶನದ ಟೋಕನ್‌ಗಳನ್ನು ಜನವರಿ 2 ರಿಂದ ನೀಡಲಾಗುವುದು ಎಂದು ತಿಳಿಸಿದೆ.
ವೈಕುಂಠ ಏಕಾದಶಿ ನಿಮಿತ್ತ ತಿರುಪತಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ. ಹತ್ತು ದಿನಗಳ ಕಾಲ ಭಕ್ತರು ತಿರುಮಲಕ್ಕೆ ಭೀಟಿ ನೀಡಲು ಬೇಕಾದ ಟೋಕನ್‌ಗಳನ್ನು ಈಗಾಗಲೇ ನೀಡಲಾಗಿದೆ. ಹತ್ತು ದಿನಗಳ ಬಳಿಕ ಅಂದರೆ ಜನವರಿ 2 ರಿಂದ ಭಕ್ತರು ತಿರುಮಲಕ್ಕೆ ಭೇಟಿ ನೀಡಲು ಹೊಸ ಟೋಕನ್‌ಗಳನ್ನು ನೀಡಲು ಟಿಟಿಡಿ ನಿರ್ಧರಿಸಿದೆ. ಒಂದು ವೇಳೆ ವೈಕುಂಠ ಏಕಾದಶಿ ಸಮಯದಲ್ಲಿ ತಿಮ್ಮಪ್ಪನ ದರ್ಶನ ಮಾಡಲು ಸಾಧ್ಯವಾಗದೇ ಇರುವವರು ಈ ಟೋಕನ್‌ಗಳನ್ನು ಪಡೆಯಬಹುದು.












Click it and Unblock the Notifications