New Year 2024: ವರ್ಷಾಂತ್ಯಕ್ಕೆ ಮೈಸೂರಿನತ್ತ ಮುಖ ಮಾಡಿದ ಪ್ರವಾಸಿಗರು: ಸಾಂಸ್ಕೃತಿಕ ನಗರಿಯಲ್ಲಿ ಜನ ಸಾಗರ
ಮೈಸೂರು, ಡಿಸೆಂಬರ್ 25: ವರ್ಷಾಂತ್ಯದ ರಜೆಯನ್ನು ಜಾಲಿಯಾಗಿ ಕಳೆಯುವ ನಿಟ್ಟಿನಲ್ಲಿ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿರುವುದರಿಂದ ಎಲ್ಲೆಂದರಲ್ಲಿ ಜನಸಾಗರವೇ ಕಂಡು ಬರುತ್ತಿದ್ದು ಅಚ್ಚರಿ ಮೂಡಿಸಿದೆ. ದಸರಾ ಬಳಿಕ ಇಷ್ಟೊಂದು ಜನರು ಇದೇ ಮೊದಲ ಬಾರಿಗೆ ಕಂಡು ಬರುತ್ತಿದ್ದಾರೆ.
ಪ್ರವಾಸಿಗರ ದಂಡು ನಿರೀಕ್ಷೆಗೂ ಮೀರಿ ನಗರಕ್ಕೆ ಹರಿದು ಬಂದಿದ್ದರಿಂದ ಎಲ್ಲೆಂದರಲ್ಲಿ ಜನ, ವಾಹನ ದಟ್ಟಣೆ ಕಾಣಿಸುತ್ತಿದ್ದು, ಟ್ರಾಫಿಕ್ ಕಿರಿಕಿರಿ ಕಂಡುಬರುತ್ತಿದೆ.
ವಾರಾಂತ್ಯದಲ್ಲಿ ರಜೆ ಹಾಗೂ ಕ್ರಿಸ್‌ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರು ಮೈಸೂರಿನತ್ತ ಆಗಮಿಸಿರುವುದು ಖುಷಿ ನೀಡಿದೆ. ಈಗಾಗಲೇ ನಗರದಲ್ಲಿರುವ ಹೋಟೆಲ್ ಗಳು ತುಂಬಿ ತುಳುಕುತ್ತಿವೆ. ಪ್ರವಾಸಿ ತಾಣಗಳಲ್ಲಿಯೂ ನೂಕು ನುಗ್ಗಲು ಕಾಣಿಸುತ್ತಿದೆ.

ಈಗಾಗಲೇ ಅರಮನೆ ಅಂಗಳದಲ್ಲಿ ಮಾಗಿ ಉತ್ಸವ ಆರಂಭವಾಗಿದ್ದು, ಫಲಪುಷ್ಪ ಪ್ರದರ್ಶನ ಜನ ಮನ ಸೆಳೆಯುತ್ತಿದೆ. ಇದರ ಜತೆಗೆ ದಸರಾ ವಸ್ತುಪ್ರದರ್ಶನವೂ ಇರುವುದರಿಂದ ಪ್ರವಾಸಿಗರೆಲ್ಲರೂ ಇತ್ತ ದೌಡಾಯಿಸುತ್ತಿದ್ದಾರೆ.
ಬಹಳಷ್ಟು ಪ್ರವಾಸಿಗರು ಮೈಸೂರು ನಗರದಲ್ಲಿ ವಾಸ್ತವ್ಯ ಹೂಡಿದ್ದು, ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಭಕ್ತರು ಕೂಡ ಆಗಮಿಸಿದ್ದು, ನಂಜನಗೂಡು, ತಿ.ನರಸೀಪುರ, ಕೆ.ಆರ್,ನಗರದಲ್ಲಿರುವ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.
ಮೈಸೂರಿನ ಹೋಟೆಲ್‌ಗಳು ಸಂಪೂರ್ಣ ಭರ್ತಿ
ಕಳೆದೆರೆಡು ದಿನಗಳಿಂದ ನಗರದಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದ್ದು, ಮೈಸೂರಿನಲ್ಲಿ ಈ ಬಾರಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಂಭಮ ಇಮ್ಮಡಿಗೊಳಿಸಿದೆ. ಸಾಲು ಸಾಲು ರಜೆ ದಿನಗಳು ಬಂದಿರುವುದರ ಪರಿಣಾಮ ದೇಶದ ನಾನಾ ಭಾಗಗಳ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ. ಇದರ ಪರಿಣಾಮ ಮೈಸೂರಿನಲ್ಲಿರುವ ಪ್ರತಿಷ್ಠಿತ ಹೋಟೆಲ್ಗಳು ಸೇರಿದಂತೆ 425 ಹೋಟೆಲ್ಗಳ 10500 ಕೊಠಡಿಗಳು ಡಿ.23ರಿಂದ ಡಿ.31ರವರೆಗೆ ಶೇ.100ರಷ್ಟು ಭರ್ತಿಯಾಗಿವೆ.

ವರ್ಷಾಂತ್ಯದ ಹಿನ್ನೆಲೆ ಎಲ್ಲೆಡೆ ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸ ಆರಂಭವಾಗಿರುವುದು ಒಂದೆಡೆಯಾದರೆ, ನಾಲ್ಕನೇ ಶನಿವಾರ, ಭಾನುವಾರ, ಸೋಮವಾರ ಕ್ರಿಸ್ಮಸ್ ಹಬ್ಬದ ಸಾಲು, ಸಾಲು ರಜೆ ಇರುವುದರಿಂದ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನತ್ತ ಆಗಮಿಸಿದ್ದಾರೆ.
ಹೀಗೆ ಬಂದವರು ಸದ್ಯ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಸೋಮನಾಥ ದೇವಾಲಯ, ಟಿಬೇಟಿಯನ್ ಕ್ಯಾಂಪ್, ತಲಕಾಡು, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ಮೈಸೂರು ಅರಮನೆ, ನಾಗರಹೊಳೆ ಅಭಯಾರಣ್ಯ, ಕೆಆರ್ಎಸ್, ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.
ಗರಿಗೆದರಿದ ವ್ಯಾಪಾರ ವಹಿವಾಟು
ಈ ನಡುವೆ ಕ್ರಿಸ್ ಮಸ್ ಹಿನ್ನಲೆಯಲ್ಲಿ ಚರ್ಚ್ ಗಳಿಗೆ ಜನ ಸಾಗರವೇ ಹರಿದು ಬರುತ್ತಿದೆ. ಅದರಲ್ಲೂ ಸಂತ ಫಿಲೋಮಿನಾ ಚರ್ಚ್ ನಲ್ಲಿ ಜನ ಸಾಗರವೇ ಹರಿದು ಬಂದಿರುವುದು ವಿಶೇಷವಾಗಿದೆ. ಅರಮನೆ ಅಂಗಳದಲ್ಲಿ ಶುಕ್ರವಾರದಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ನೋಡಿಕೊಂಡು ಕಾರಂಜಿಕೆರೆ ಉದ್ಯಾನ ಹಾಗೂ ಲಿಂಗಾಂಬುದಿ ಕೆರೆಯಲ್ಲಿನ ಸಸ್ಯೋದ್ಯಾನ, ಮೃಗಾಲಯ ಮತ್ತು ಚಾಮುಂಡಿಬೆಟ್ಟದತ್ತ ಜನ ತೆರಳುತ್ತಿದ್ದಾರೆ. ಕೆಆರ್ ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ ಮೊದಲಾದ ಕಡೆಗಳಿಗೆ ಪ್ರವಾಸಿಗರು ತೆರಳುತ್ತಿರುವುದರಿಂದ ಎಲ್ಲಿ ನೋಡಿದರೂ ಜನರೇ ಕಂಡು ಬರುತ್ತಿದ್ದಾರೆ.

ಪ್ರವಾಸಿಗರು ಆಗಮಿಸುತ್ತಿದ್ದಂತೆಯೇ ಪ್ರವಾಸೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ಪ್ರವಾಸಿ ಟ್ಯಾಕ್ಸಿ , ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳು, ಮಾಲ್, ಚಿತ್ರಮಂದಿರ, ಹೋಟೆಲ್, ಅಂಗಡಿ ಹೀಗೆ ಎಲ್ಲರೂ ಖುಷಿಯಾಗಿದ್ದು, ವ್ಯಾಪಾರ ವಹಿವಾಟು ಗರಿಗೆದರಿದೆ. ಈ ನಡುವೆ ಟ್ರಾಫಿಕ್ ಸಮಸ್ಯೆ ನೋಡಿರದ ನಗರದ ಜನ ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗಿದೆ.
ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ
ಪ್ರವಾಸಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮೈಸೂರು-ಬೆಂಗಳೂರು ರಸ್ತೆ, ಮೈಸೂರು-ಕೊಡಗು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅರಮನೆ ಸುತ್ತಲಿನ ರಾಜಮಾರ್ಗ ವಾಹನ ದಟ್ಟಣೆಯಿಂದ ಕೂಡಿದೆ. ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಮಂದಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರೆ, ಮೈಸೂರು ಅರಮನೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಅರಮನೆ ಆಡಳಿತ ಮಂಡಳಿಯಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದರಿಂದ ಅರಮನೆ ವೀಕ್ಷಣೆಯೊಂದಿಗೆ, ಫಲಪುಷ್ಪ ಪ್ರದರ್ಶನವೂ ಇರುವುದರಿಂದ ಹೆಚ್ಚು ಮಂದಿ ಅರಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಕೊರೊನಾ ಮರೆತ ಜನ ಸಾಗರ
ಒಟ್ಟಾರೆಯಾಗಿ ಕೊರೊನಾ ಮಹಾಮಾರಿ ಉಲ್ಭಣಗೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೆ ಪ್ರವಾಸಿಗರು ಮೈಸೂರಿನತ್ತ ಆಗಮಿಸುತ್ತಿದ್ದು, ವಾರಪೂರ್ತಿ ನಗರ ಪ್ರವಾಸಿಗರಿಂದ ತುಂಬಿ ತುಳುಕಲಿದೆ. ವರ್ಷಾಚರಣೆಗೆ ಮೈಸೂರನ್ನು ಆಯ್ದುಕೊಂಡ ದೇಶ ವಿದೇಶಗಳ ಪ್ರವಾಸಿಗರು ಈ ವಾರವೇ ಆಗಮಿಸಲಿರುವುದರಿಂದ ಮೈಸೂರು ಇನ್ನೊಂದಷ್ಟು ದಿನ ಪ್ರವಾಸಿಗರಿಂದ ತುಂಬಿ ತುಳುಕಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications