ಹೊಸ ವರ್ಷಾಚರಣೆಗೆ ಕೊಡಗಿಗೆ ತೆರಳುವ ಪ್ರವಾಸಿಗರೇ ಗಮನಿಸಿ! ಪಾರ್ಟಿ ಮಾಡುವುದಕ್ಕಿದೆ ಈ ನಿರ್ಬಂಧ
ಮಡಿಕೇರಿ, ಡಿಸೆಂಬರ್ 27: ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಹೊಸ ವರ್ಷಾಚರಣೆಗೆ ಕೊಡಗಿಗೆ ಪ್ರವಾಹದಂತೆ ಪ್ರವಾಸಿಗರು ಹರಿದು ಬರುವ ಸಾಧ್ಯತೆಗಳು ಕಂಡು ಬಂದಿದೆ. ಇದಕ್ಕೆ ಪುಷ್ಠಿಕೊಡುವಂತೆ ಕೊಡಗಿನಲ್ಲಿರುವ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಭರ್ತಿಯಾಗಿವೆ. ಆದರೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ಮುನ್ನ ಕೆಲವೊಂದು ವಿಚಾರಗಳನ್ನು ಮನದಟ್ಟು ಮಾಡಿಕೊಂಡು ಅದರಂತೆ ನಡೆದುಕೊಂಡರೆ 'ಕೊಡಗಿನ ಪ್ರವಾಸ' ತ್ರಾಸದಾಯಕವಾಗದೆ ಸುಖಕರವಾಗಿರಲಿದೆ.
ಈಗಾಗಲೇ ಪ್ರವಾಸಿಗರು ಜಿಲ್ಲೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಹುತೇಕ ಪ್ರವಾಸಿತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಹೀಗೆ ಬರುವ ಪ್ರವಾಸಿಗರಲ್ಲಿ ಕೆಲವರು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗಿದರೆ, ಇನ್ನುಳಿದಂತೆ ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುವ ದೃಶ್ಯವೂ ಕಂಡು ಬರುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಸೇರಿ ಪಾರ್ಟಿ ಮಾಡುವುದು, ಕಿರುಚಾಡುವುದಕ್ಕೆ ನಿರ್ಬಂಧ ಹೇರಿ ಎಂಬ ಒತ್ತಾಯವನ್ನು ಸ್ಥಳೀಯರು ಮಾಡುತ್ತಿದ್ದಾರೆ.

ಇನ್ನು ಹೊಸ ವರ್ಷಾಚರಣೆ ಸಲುವಾಗಿ ಆಗಮಿಸಿ ಹೋಂಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಕೆಲವೊಂದು ನಿಬಂಧನೆಗಳಿಗೆ ಒಳಪಡಲೇ ಬೇಕಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಿಶಬ್ದ ವಲಯಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಮಧ್ಯ ರಾತ್ರಿಯಲ್ಲಿ ಸದ್ದು ಗದ್ದಲಕ್ಕೆ ಬ್ರೇಕ್ ಹಾಕಲಾಗುತ್ತಿದೆ. ವರ್ಷಾಚರಣೆ ಎಂದ ಮೇಲೆ ಮೋಜು ಮಸ್ತಿ ಇದ್ದದ್ದೇ, ಮಧ್ಯರಾತ್ರಿವರೆಗೆ ಪ್ರವಾಸಿಗರ ಕಿರುಚಾಟ, ಸಂತೋಷದ ಅರಚಾಟ, ಮೋಜು ಮಸ್ತಿಯ ಕೂಗು, ಕ್ಯಾಂಪ್ ಫೈರ್ ಹೀಗೆ ಎಲ್ಲವೂ ನಡೆಯುತ್ತದೆ. ಆದರೆ 12 ಗಂಟೆ ಬಳಿಕವೂ ಅದನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಲಾಗಿದೆ.
ಗಲಾಟೆ ಮಾಡಿದರೆ ನಿಮ್ಮ ಬಳಿಗೆ ಪೊಲೀಸ್
ಹೊಸ ವರ್ಷವನ್ನು ಸ್ವಾಗತಿಸಿದ ನಂತರವೂ ಮೋಜು ಮಸ್ತಿಯನ್ನು ಮುಂದುವರೆಸದೆ, ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡುವಂತೆ ಸೂಚಿಸಲಾಗುತ್ತಿದೆ. ಒಂದು ವೇಳೆ ಅದನ್ನು ಪಾಲಿಸದಿದ್ದರೆ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಲು ಸಿದ್ಥತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮೊದಲೇ ಈ ಬಗ್ಗೆ ಅರಿತು ಇತಿಮಿತಿಯಲ್ಲಿ ನಡೆದುಕೊಂಡರೆ ಎಲ್ಲರಿಗೂ ಒಳ್ಳೆಯದಾಗಲಿದೆ.
ಜಿಲ್ಲೆಯಲ್ಲಿ ಅಧಿಕೃತ ಹೋಂಸ್ಟೇ ಗಳಿಗಿಂತಲೂ ಅನಧಿಕೃತವಾಗಿ ಹೋಂಸ್ಟೇಗಳು ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಹೋಂಸ್ಟೇಗಳ ಮೇಲೆಯೂ ಪೊಲೀಸರು ನಿಗಾವಹಿಸಲಿದ್ದಾರೆ. ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರಿಗೆ ಕೆಲವೊಂದು ಸೂಚನೆಗಳನ್ನು ಮಾಲೀಕರೇ ನೀಡಿ ಅದರಂತೆ ನಡೆದುಕೊಳ್ಳುವಂತೆ ಸೂಚಿಸಲಾಗುತ್ತಿದೆ. ಯಾವುದೇ ಗಲಾಟೆ, ಅರಚಾಟಗಳಿಗೆ ಅವಕಾಶ ನೀಡದಂತೆ ಖುಷಿಯಾಗಿ ಹೊಸವರ್ಷಾಚರಣೆಯನ್ನು ಮಾಡಲು ಸಲಹೆ ನೀಡಲಾಗುತ್ತಿದೆ.

ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ
ಪಟ್ಟಣಗಳ ಸದ್ದುಗದ್ದಲದಲ್ಲಿ ಕಾಲಕಳೆಯುವವರೇ ಹೆಚ್ಚಾಗಿ ಕೊಡಗಿಗೆ ಬರುವುದರಿಂದ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ರಸ್ತೆ ಮಧ್ಯೆ ಮದ್ಯ ಸೇವಿಸುವುದು, ಅದರಲ್ಲೂ ವನ್ಯಜೀವಿ ವಲಯದಲ್ಲಿ ವಾಹನಗಳನ್ನು ನಿಲ್ಲಿಸಿ ತೊಂದರೆ ಕೊಡುವುದು ಅಪರಾಧವಾಗಿದ್ದು, ಈ ಬಗ್ಗೆ ನಿಗಾವಹಿಸುವುದು ಅಗತ್ಯವಾಗಿದೆ. ಇದೆಲ್ಲದರ ನಡುವೆ ಕೊಡಗಿನಲ್ಲಿರುವ ರಸ್ತೆಗಳು ಚಿಕ್ಕದಾಗಿಯೂ ತಿರುವುಗಳಿಂದ ಕೂಡಿರುವುದರಿಂದ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಇಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳದೆ ಅತಿ ವೇಗದಿಂದಲೂ ಚಾಲಿಸದೆ ಎಚ್ಚರಿಕೆ ವಹಿಸಿದರೆ ಅಪಘಾತ ತಡೆಯಲು ಸಾಧ್ಯವಾಗುತ್ತದೆ. ತಮ್ಮೊಂದಿಗೆ ತರುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ರಾಶಿಯಲ್ಲಿ ಅಥವಾ ಡಬ್ಬಿಗೆ ಹಾಕಿದರೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಾರಣ ಮತ್ತು ಜಲಪಾತಗಳನ್ನು ನೋಡಲು ಹೋಗುವ ಮುನ್ನ ಸ್ಥಳೀಯರು ಅಥವಾ ತಿಳಿದವರ ಸಲಹೆ ಪಡೆಯುವುದು ಅಗತ್ಯವಾಗಿದೆ.
ಪ್ರವಾಸ ಸುಖಕರವಾಗಿರುವಂತೆ ನೋಡಿಕೊಳ್ಳಿ
ರಾತ್ರಿ ವೇಳೆ ವಾಹನಗಳನ್ನು ಚಲಾಯಿಸಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವುದು ಅಪಾಯ. ಕಾರಣ ಕಾಡಾನೆಗಳು ಸಂಚರಿಸುವ ಸಾಧ್ಯತೆಯಿರುವುದರಿಂದ ಸಮಸ್ಯೆ ಎದುರಾಗಬಹುದು. ಕೆಲವೊಮ್ಮೆ ಮುಂಜಾನೆ ಮತ್ತು ರಾತ್ರಿ ಸಮಯದಲ್ಲಿ ದಟ್ಟವಾದ ಮಂಜಿನ ಮುಸುಕು ವಾಹನ ಚಾಲನೆಗೆ ಅಡ್ಡಿಯಾಗಬಹುದು. ಚಳಿ, ಗಾಳಿ ಇರುವ ಕಾರಣ ಜತೆಯಲ್ಲಿ ಸ್ವೆಟರ್ ಸೇರಿದಂತೆ ಬೆಚ್ಚನೆಯ ಉಡುಪುಗಳನ್ನು ತೆಗೆದುಕೊಂಡು ಬರುವುದು ಬಹುಮುಖ್ಯವಾಗಿದೆ. ಅದರಲ್ಲೂ ಮಕ್ಕಳೊಂದಿಗೆ ಬರುವುದಾದರೆ ಹೆಚ್ಚಿನ ನಿಗಾವಿರಲಿ.

ಒಟ್ಟಾರೆಯಾಗಿ ಹೇಳಬೇಕೆಂದರೆ ತುಂಬಾ ನಿರೀಕ್ಷೆಯನ್ನಿಟ್ಟುಕೊಂಡು ಬರುವ ಪ್ರವಾಸಿಗರು ಇಲ್ಲಿನ ನಿಸರ್ಗದ ಮಡಿಲಲ್ಲಿ ಒಂದಷ್ಟು ಹೊತ್ತು ಕಳೆದು ಒಂದಷ್ಟು ಸವಿನೆನಪುಗಳೊಂದಿಗೆ ತಮ್ಮ ಊರಿಗೆ ಮರಳಬೇಕು. ಹೀಗಾಗಿ ಪ್ರವಾಸಿಗರು ಶಿಸ್ತು ಸಂಯಮದಿಂದ ನಡೆದುಕೊಳ್ಳುವುದಲ್ಲದೆ, ಒಂದಷ್ಟು ಮುಂಜಾಗ್ರತೆ ವಹಿಸಿಕೊಂಡರೆ ನಿಮ್ಮ ಪ್ರವಾಸ ಸುಖಕರವಾಗಿರಲು ಸಾಧ್ಯವಾಗುತ್ತದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications