ನೇಪಾಳದ ನೋಡತಕ್ಕ ಇನ್ನಿತರ ಪ್ರವಾಸಿ ಸ್ಥಳಗಳು

Nepal travelogue by Suresha Bhatta
ಕಾಠ್ಮಂಡುವಿನಲ್ಲಿ ಮತ್ತು ಸುತ್ತಮುತ್ತ ಇರುವ ಪ್ರಮುಖ ಪ್ರವಾಸೀ ಸ್ಥಳಗಳು - ಪಶುಪತಿನಾಥ ಮಂದಿರದಿಂದ ಒಂದು ಕಿಮೀ ದೂರದಲ್ಲಿ ಬಾಗಮತಿ ನದಿಯ ಎಡದಂಡೆಯಲ್ಲಿ ಗುಹೇಶ್ವರಿ ದೇವಸ್ಥಾನ; ದಿಯೋಪಾಟನ್‌ನಲ್ಲಿರುವ ಮೂರು ಅಂತಸ್ತಿನ ಜಯಬಾಗೇಶ್ವರಿ ದೇವಸ್ಥಾನ; ಬೌಧನಾಥ ಸ್ಥೂಪ (ಬುದ್ಧ ಸ್ಥೂಪ); ಬಿಷ್ಣುಮತಿ ನದಿಯಾಚೆಯ ಸ್ವಯಂಭೂನಾಥ ದೇವಸ್ಥಾನ; ಕಾಠ್ಮಂಡುವಿನಿಂದ ಸುಮಾರು 19 ಕಿಮೀ ದೂರದಲ್ಲಿರುವ 18 ಮೀ ಉದ್ದದ, ಶೇಷಶಯನ ಬುಢಾನೀಲಕಂಠ ದೇವಸ್ಥಾನ; ಕರಕುಶಲ ಸಾಮಗ್ರಿಗಳಿಗೆ ಪ್ರಸಿದ್ಧಿಯಾದ, ಕಾಠ್ಮಂಡುವಿನಿಂದ ಸುಮಾರು 5 ಕಿಮೀ ದೂರದಲ್ಲಿರುವ ಲಲಿತಪುರ; ಬಡಗಾಂವ್ (ಭಕ್ತಾಪುರ)ನಲ್ಲಿರುವ ಹಲವಾರು ದೇವಸ್ಥಾನಗಳು ಮತ್ತು ಅರಮನೆಯ ಸಂಕೀರ್ಣ.

ಮ್ಯೂಸಿಯಮ್ ಮತ್ತು ಆರ್ಟ್ ಗ್ಯಾಲರಿ ಇರುವ ದರ್ಬಾರ್ ಚೌಕಿ (ದರ್ಬಾರ್ ಸ್ಕ್ವೇರ್) ಮತ್ತು ಭಕ್ತಾಪುರದ ಸಾಂಗಾದಲ್ಲಿರುವ 143 ಅಡಿ ಎತ್ತರದ ಶಿವ; ಭಕ್ತಾಪುರದ ನ್ಯಾಟಪೋಲ, ದತ್ತಾತ್ರೇಯ, ಚಾಂಗುನಾರಾಯಣ ದೇವಸ್ಥಾನಗಳು; ಹನುಮಾನ್ ಧೋಕಾ; ಕುಮಾರಿ ಘರ್; ನಾರಾಯಣ ಹಿತಿ ದರ್ಬಾರ್; ಪಾಟನ್‌ನಲ್ಲಿರುವ ಶ್ರೀಕೃಷ್ಣ ದೇವಸ್ಥಾನ; ಕಾಠ್ಮಂಡುವಿನಿಂದ 10-15 ಕಿಮೀ ದೂರದಲ್ಲಿರುವ ಗೋಕರ್ಣೇಶ್ವರ ಮಹಾದೇವ, ದಕ್ಷಿಣಕಲಿ ಮತ್ತು ಬಾಘ್ ಭೈರವ್ ದೇವಸ್ಥಾನಗಳು.

ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿ; ಸೀತಾಮಾತೆಯ ಹುಟ್ಟೂರು ಜನಕಪುರ; ವರಾಹಕ್ಷೇತ್ರ; ಗೋಸೈನ್ಕುಂಡ ಸರೋವರ; ಪೋಖರಾ ಕಣಿವೆಯಿಂದ ಸುಮಾರು 70 ಮೈಲಿ ಉತ್ತರಕ್ಕಿರುವ ವಿಖ್ಯಾತ ತೀರ್ಥಕ್ಷೇತ್ರ ಮುಕ್ತಿನಾಥ ಮತ್ತು ಕಾಠ್ಮಂಡುವಿನಿಂದ ಸುಮಾರು 120 ಕಿಮೀ ದೂರದಲ್ಲಿರುವ ತ್ರಿಶೂಲಿಯಿಂದ ಕೇಬಲ್ ಕಾರ್‌‍ನಲ್ಲಿ ಪಯಣಿಸಬೇಕಾದ ಬೆಟ್ಟದ ಮೇಲಿರುವ ಮನಕಾಮನಾ ದೇವಸ್ಥಾನ.

ಕಾಠ್ಮಂಡುವಿನಿಂದ ಸುಮಾರು 29 ಕಿಮೀ ದೂರದ, 2000 ಅಡಿ ಎತ್ತರದ ಕಾಕಣಿ ಹಾಗೂ 7133 ಅಡಿ ಎತ್ತರದ ನಾಗರಕೋಟ್‌ನಿಂದ ಮಂಜು ಬೀಳುವ ಹಾಗೂ ಹಿಮಾಲಯ ಶಿಖರಗಳ ಸುಂದರ ನೋಟ ನೋಡಬಹುದು. ಪೋಖರಾ ಕಣಿವೆ ಮತ್ತು ಪೋಖರಾ ಸರೋವರ ನಗರಕ್ಕೆ ಕಾಠ್ಮಂಡುವಿನಿಂದ ವಿಮಾನದಲ್ಲಿ ಹೋಗಬಹುದು. ಪೋಖರಾದಿಂದ ಮುಕ್ತಿನಾಥಕ್ಕೆ ಹೋಗುವ ದಾರಿ ಟ್ರೆಕ್ಕಿಂಗ್ ಹೋಗಬಯಸುವವರಿಗೆ ಅತ್ಯಂತ ಜನಪ್ರಿಯ ದಾರಿಗಳಲ್ಲೊಂದು. ಹಿಮಾಲಯ ಪರ್ವತಶ್ರೇಣಿಗಳನ್ನು ಬೆಳಗಿನ ನೇಸರಕಿರಣಗಳಲ್ಲಿ ನೋಡಲು ಕಾಠ್ಮಂಡುವಿನ ದೇಶೀಯ ವಿಮಾನನಿಲ್ದಾಣದಿಂದ ಮೌಂಟನ್-ಫ್ಲೈಟ್‌ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+