KSRTC: ಬೆಂಗ್ಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್‌ ಸೇವೆ, ದಿನಾಂಕ, ದರ, ಸಮಯಗಳ ವಿವರ ತಿಳಿಯಿರಿ

ಬೆಂಗಳೂರು, ನವೆಂಬರ್‌, 27: ರಾಜ್ಯದಲ್ಲಿ ಹಬ್ಬಗಳು ಸಮೀಪಿಸುತ್ತಿದ್ದಂತೆಯೇ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ವಿಶೇಷ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೇವೆಯನ್ನು ಕಲ್ಪಿಸಿದೆ. ಹಾಗಾದರೆ ಪ್ರಯಾಣಿಕರು ಯಾವಾಗಿನಿಂದ ಈ ಸೇವೆಯನ್ನು ಪಡೆಯಬಹುದು ಹಾಗೂ ದರ, ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

KSRTC: Volvo bus service from Bengaluru to Sabarimala, Know date, fare, timings details

KSRTCಯು ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಡಿಸೆಂಬರ್ 1 ರಿಂದ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಇನ್ನು ಟಿಕೆಟ್ ದರ ಪ್ರತಿ ಪ್ರಯಾಣಿಕರಿಗೆ 1,600 ರೂಪಾಯಿ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಈ ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ಮರುದಿನ ಬೆಳಗ್ಗೆ 6:45ರ ಸುಮಾರಿಗೆ ನಿಲಕ್ಕಲ್‌ಗೆ ತಲುಪಲಿದೆ. ನಂತರ ಸಂಜೆ 6 ಗಂಟೆಗೆ ನಿಲಕ್ಕಲ್‌ನಿಂದದ ಹೊರಡಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು

ಹಬ್ಬಹರಿದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ದಸರಾ, ದೀಪಾವಳಿಗೆ ವಿಶೇಷ ರೈಲುಗಳನ್ನು ಬಿಟ್ಟಿತ್ತು. ಹಾಗೆಯೇ ಇದೀಗ ಶಬರಿಮಲೈಗೆ ಹೋಗಲು ಎರಡು ವಿಶೇಷ ರೈಲು ಆರಂಭಿಸಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಬರಿಮಲೈಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲ ಆಗಲಿ ಎಂದು ಕಳೆದ ವರ್ಷ ಸಾಲುಮರದ ತಿಮ್ಮಕ್ಕ ನೇತೃತ್ವದಲ್ಲಿ ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘ ರೈಲ್ವೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಮನವಿ ಸಲ್ಲಿಕೆ ಮಾಡಿತ್ತು. ಇದಕ್ಕೆ ಸ್ಪಂದಿಸಿದ್ದ ಇಲಾಖೆ ಎರಡು ವಿಶೇಷ ರೈಲು ಆರಂಭ ಮಾಡಿತ್ತು. ಅದರಂತೆಯೇ ಪ್ರಸ್ತುತ ವರ್ಷವೂ ಈ ಸೌಲಭ್ಯ ಇದೆ ಎಂದರು.

ವಾರದಲ್ಲಿಎರಡು ರೈಲುಗಳಿದ್ದು, ಡಿಸೆಂಬರ್‌ 2ರಿಂದ 20ರವರೆಗೆ ಸೌಲಭ್ಯ ಆರಂಭ ಆಗಲಿದೆ. ಪ್ರತಿ ಶನಿವಾರ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ (07305) ರೈಲು ಬೆಳಗ್ಗೆ 10.30ಕ್ಕೆ ಹೊರಡಲಿದೆ.

ಕೊಟ್ಟಾಯಂನಿಂದ ಹುಬ್ಬಳ್ಳಿಗೆ(07306) ಪ್ರತಿ ಭಾನುವಾರ ಬೆಳಗ್ಗೆ 11ಕ್ಕೆ ಹಿಂದಿರುಗಲಿದೆ. ಡಿಸೆಂಬರ್‌ 5ರಿಂದ 17 ಪ್ರತಿ ಮಂಗಳವಾರ ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ(07307) ಹೊರಟು, ಡಿಸೆಂಬರ್‌ 6ರಿಂದ ಕೊಟ್ಟಾಯಂನಿಂದ ಹುಬ್ಬಳ್ಳಿಗೆ (07308) ಪ್ರತಿ ಬುಧವಾರ ಬೆಳಗ್ಗೆ 11ಕ್ಕೆ ಬರಲಿದೆ. ಈಗಾಗಲೇ ಮುಂಗಡ ಟಿಕೆಟ್‌ ಆರಂಭವಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+