KRS DAM: ಕೆಆರ್‌ಎಸ್ ಹಿನ್ನೀರು ಪ್ರದೇಶದಲ್ಲಿವೆ ನೀವು ನೋಡಿರದ ಅದ್ಭುತ ದೃಶ್ಯಗಳು

ಮಂಡ್ಯ, ನವೆಂಬರ್‌, 03: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಗೊಳಪಡುವ ಕೆಆರ್‌ಎಸ್ ಜಲಾಶಯದ ಹಿನ್ನೀರು ಪ್ರದೇಶದ ನೋಟ ಸುಂದರವಾಗಿದ್ದು, ಈ ಹಿನ್ನೀರಿನಲ್ಲಿ ಹಲವು ದೈವ ಕ್ಷೇತ್ರಗಳಿದ್ದು, ಅವು ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತಿವೆ. ಇದೀಗ ಇಲ್ಲಿ ಬಾಹುಬಲಿ ನೆಲೆ ನಿಂತಿರುವುದರಿಂದ ಎಲ್ಲರ ದೃಷ್ಟಿ ಇತ್ತ ಬೀರುವಂತಾಗಿದೆ.

ಕೆಆರ್‌ಎಸ್ ಹಿನ್ನೀರು ಪ್ರದೇಶಗಳಲ್ಲಿ ಹಲವು ತಾಣಗಳಿದ್ದು, ಅವುಗಳೆಲ್ಲವೂ ಅಭಿವೃದ್ಧಿ ವಂಚಿತವಾಗಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿವೆ. ಆ ಸಾಲಿಗೆ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹೆರಗನಹಳ್ಳಿ ಪಕ್ಕದ ಬಸ್ತಿಹೊಸಕೋಟೆ ಗ್ರಾಮದ ಗೊಮ್ಮಟ ಕ್ಷೇತ್ರ ಸೇರುವಂತಾಗಿದೆ.

KRS DAM: Hidden Tourist places in KRS Backwaters that you may miss

ಈ ಹಿಂದೆ ಕೆಆರ್‌ಎಸ್ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ಏಕಾಂಗಿಯಾಗಿ ಅನಾಥನಂತೆ ನಿಂತಿದ್ದ 18 ಅಡಿ ಎತ್ತರದ ಗೊಮ್ಮಟ ಮೂರ್ತಿಯನ್ನು ಇದೀಗ ಹೊರವಲಯದ ವಿಶಾಲವಾದ ಬಯಲಿನಲ್ಲಿ ಎತ್ತರದ ಪೀಠಕ್ಕೆ ಸ್ಥಳಾಂತರಿಸಿ ಗೊಮ್ಮಟ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆದಿದೆ. ಆ ಮೂಲಕ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತ ಪ್ರಶಾಂತ ಚಿತ್ತದ ಬಾಹುಬಲಿಯನ್ನು ನೋಡುವ ಅವಕಾಶ ಎಲ್ಲರಿಗೂ ದೊರೆಯುವಂತಾಗಿದೆ.

ಜೈನಧರ್ಮದ ನೆಲೆವೀಡಾದ ಬಸ್ತಿಹೊಸಕೋಟೆ

ದಿಗಂಬರ ಜೈನಮುನಿಗಳಾದ ಅಮೋಘಕೀರ್ತಿ ಮಹರಾಜರು ಹಾಗೂ ಅಮರಕೀರ್ತಿ ಮಹರಾಜ್ ಅವರ ಮಾರ್ಗದರ್ಶನದಲ್ಲಿ ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಿ.ವೀರೇಂದ್ರಹೆಗಡೆ ಅವರ ನೇತೃತ್ವದಲ್ಲಿ ಬಸ್ತಿಹೊಸಕೋಟೆಯ ಗೊಮ್ಮಟ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.

ಇನ್ನು ಬಸ್ತಿಕೋಟೆ ಗ್ರಾಮದ ಬಗ್ಗೆ ಹೇಳಬೇಕೆಂದರೆ, ಈ ಗ್ರಾಮವು ಕೃಷ್ಣರಾಜಪೇಟೆ ತಾಲೂಕು ಕೇಂದ್ರದಿಂದ 32 ಕಿಲೋ ಮೀಟರ್‌ ದೂರದಲ್ಲಿದೆ. ಒಂದು ಕಾಲದಲ್ಲಿ ಜೈನಧರ್ಮದ ನೆಲೆವೀಡಾಗಿತ್ತು ಎಂಬುದಕ್ಕೆ ಇಲ್ಲಿರುವ ಬಾಹುಬಲಿ ವಿಗ್ರಹವೇ ಸಾಕ್ಷಿಯಾಗಿದೆ. ಈಗ ಗ್ರಾಮದಲ್ಲಿ ಪರಿಶಿಷ್ಠ ವರ್ಗಕ್ಕೆ ಸೇರಿರುವ ಸಮುದಾಯ ನೆಲೆಯೂರಿದೆ. ಆದರೂ ಜೈನಧರ್ಮದ ನೆಲೆವೀಡಾಗಿದ್ದು, ವಿಭಿನ್ನವಾದ ಸಂಸ್ಕೃತಿ ಹಾಗೂ ಕಲೆಯನ್ನು ಹೊಂದಿರುವ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಿನ್ನೀರಿನಲ್ಲಿ ಏಕಾಂಗಿಯಾಗಿದ್ದ ಗೊಮ್ಮಟ ಮೂರ್ತಿ

ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದ ಸಂದರ್ಭ ಬಸ್ತಿಕೋಟೆ ಗ್ರಾಮವು ಹಿನ್ನೀರಿನಲ್ಲಿ ಮುಳುಗಡೆಯಾದಾಗ ಅಲ್ಲಿದ್ದ ಜನರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಅವತ್ತು ಇಡೀ ಗ್ರಾಮವೇ ಸ್ಥಳಾಂತರಗೊಂಡಿದ್ದರೂ ಮುಳುಗಡೆ ಪ್ರದೇಶದಲ್ಲಿದ್ದ 18 ಅಡಿ ಎತ್ತರದ ಬಾಹುಬಲಿ ಮೂರ್ತಿಯು ಅಲ್ಲಿಯೇ ಉಳಿದಿತ್ತು. ಗೊಮ್ಮಟನು ಏಕಾಂಗಿಯಾಗಿ ಮಾತ್ರವಲ್ಲದೇ ಅನಾಥನಾಗಿಯೇ ಉಳಿದು ಹೋಗಿತ್ತು.

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ವೇಳೆ ಬಾಹುಬಲಿ ಮೂರ್ತಿ ಕಾಣಿಸುತ್ತಿತ್ತು. ಈ ವೇಳೆ ಅಲ್ಲಿಗೆ ಕೆಲವರು ತೆರಳುತ್ತಿದ್ದವರು. ಪ್ರವಾಸಿಗರು ಬರುತ್ತಿರಲಿಲ್ಲ. ಹೀಗಾಗಿ ಅಲ್ಲಿ ದನ, ಕುರಿ ಮೇಯಿಸುತ್ತಿದ್ದರು. ಆದರೆ ಈ ಕ್ಷೇತ್ರದ ಅಭಿವೃದ್ಧಿಯತ್ತ ಯಾರೂ ಗಮನಹರಿಸಲಿಲ್ಲ. ಹೀಗಾಗಿ ಅದು ಪಾಳುಬಿದ್ದಿತ್ತು. ಕೆಲವು ಪುಂಡಪೋಕರಿಗಳ ಹಾವಳಿಯಿಂದ ಕ್ಷೇತ್ರದಲ್ಲಿದ್ದ ಮಂಟಪಗಳು ಹಾಗೂ ತೀರ್ಥಂಕರರ ವಿಗ್ರಹಗಳು ಭಗ್ನಗೊಂಡಿದ್ದವು.

ಕ್ಷೇತ್ರದ ಅಭಿವೃದ್ಧಿ ಕಾರ್ಯ ಆರಂಭ

ಇದೆಲ್ಲದರ ನಡುವೆ ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಡಾ.ನಾರಾಯಣಗೌಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಪ್ರವಾಸೋಧ್ಯಮ ಸಚಿವರಾಗಿದ್ದ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾರಾ ಮಹೇಶ್ ಅವರ ವಿಶೇಷ ಕಾಳಜಿಯ ಫಲವಾಗಿ ಸಂಪೂರ್ಣವಾಗಿ ಹಾಳಾಗಿದ್ದ ಗೊಮ್ಮಟ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಯಿತು.

ಇತ್ತೀಚೆಗೆ ಶ್ರವಣಬೆಳಗೊಳ ಕ್ಷೇತ್ರಕ್ಕೆ ಚಾತುರ್ಮಾಸ ವ್ರತಕ್ಕೆ ತೆರಳುತ್ತಿದ್ದ ದಿಗಂಬರ ಜೈನಮುನಿಗಳು ಬಸ್ತಿಹೊಸಕೋಟೆಗೆ ಆಗಮಿಸಿ ಗೊಮ್ಮಟನಿಗೆ ಮಹಾಮಜ್ಜನ ಮಾಡಿ, ವಿಶೇಷಪೂಜೆ ಸಲ್ಲಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

12ನೇ ಶತಮಾನದ ಬಾಹುಬಲಿ ಮೂರ್ತಿ

ಇಲ್ಲಿರುವ ಬಾಹುಬಲಿ ಮೂರ್ತಿಯನ್ನು ಹೊಯ್ಸಳ ದೊರೆ ವಿಷ್ಣುವರ್ಧನನ ಮಂತ್ರಿಯಾಗಿದ್ದ ಪುಣಿಶಿಮಯ್ಯ ಎಂಬುವವರು ಕ್ರಿ.ಶ. 12ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದ್ದರು ಎಂಬುದು ಶಾಸನಗಳಿಂದ ತಿಳಿದುಬಂದಿದೆ. 18 ಅಡಿ ಎತ್ತರದ ಈ ವಿಗ್ರಹವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಸುಂದರವಾಗಿದ್ದು, ಪ್ರಸನ್ನ ಚಿತ್ತತೆ ಮೊಗದಲ್ಲಿ ಲಾಸ್ಯವಾಡುತ್ತಿದೆ. ಈ ವಿಗ್ರಹವನ್ನು ಮೂಲಸ್ಥಳದಿಂದ ಸ್ಥಳಾಂತರ ಮಾಡಿ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ 15 ಅಡಿ ಎತ್ತರದ ವಿಶಾಲವಾದ ಕಾಂಕ್ರೀಟ್ ಜಗುಲಿಯನ್ನು ನಿರ್ಮಿಸಿ, ಜಗುಲಿಯ ಹಿಂಭಾಗದಲ್ಲಿ ಪೂರ್ವಾಭಿಮುಖವಾಗಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಈ ಹಿಂದೆ ಸಾಲಿಗ್ರಾಮ, ಮೈಸೂರು, ಪಾಂಡವಪುರ ಹಾಗೂ ಬೆಳ್ಳೂರಿನಿಂದ ಆಗಮಿಸುತ್ತಿದ್ದ ಜಿನಬಂಧುಗಳು ಪ್ರತೀ 3 ವರ್ಷಕ್ಕೊಮ್ಮೆ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಾಡಿ ಸಂಭ್ರಮಿಸುತ್ತಿದ್ದರು. ದಿಗಂಬರ ಜೈನ ಮುನಿಗಳು ಕ್ಷೇತ್ರಕ್ಕೆ ಆಗಮಿಸಿ ಮಹಾಮಸ್ತಕಾಭಿಷೇಕ ಮಾಡಿದ ಫಲವಾಗಿ ಇಂದು ಅಭಿವೃದ್ಧಿ ಕಾಣುವಂತಾಗಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಆಕರ್ಷಕ ತಾಣವಾಗಲಿರುವ ಬಸ್ತಿಹೊಸಕೋಟೆ

ಅದು ಏನೇ ಇರಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಿದ ಜಗುಲಿಯ ಮೇಲಿನಿಂದ ಪ್ರಕೃತಿಯ ರಮ್ಯರಮಣೀಯ ನೋಟ ಹಾಗೂ ಜಲಸಾಗರದ ವೈಭವ ಕಾಣುವಂತೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿಯ ಸುಂದರ ನೋಟ ಗಮನಾರ್ಹವಾಗಿದೆ. ಈ ಕ್ಷೇತ್ರ ಅಭಿವೃದ್ಧಿಯಾಗಿದೆ. ಆದರೆ ದೈವ ಕ್ಷೇತ್ರವಾಗಿಯೂ ಪ್ರವಾಸಿ ತಾಣವಾಗಿಯೂ ಎಲ್ಲರನ್ನು ಸೆಳೆಯಲಿದೆ. ಜೊತೆಗೆ ಇದುವರೆಗೆ ಜನರಿಂದ ದೂರವಿದ್ದ ಬಸ್ತಿಹೊಸಕೋಟೆ ಗೊಮ್ಮಟ ಕ್ಷೇತ್ರವು ಇನ್ಮುಂದೆ ಎಲ್ಲರನ್ನು ಆಕರ್ಷಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+