Konkan Railway: ಆಗಸ್ಟ್ 8ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದು- ಇಲ್ಲಿದೆ ಮಾಹಿತಿ, ವಿವರ
Konkan Railway Zone: ಸಾಮಾನ್ಯವಾಗಿ ಹಳಿ ಅಳವಡಿಕೆ ಹಾಗೂ ರೈಲ್ವೆಗೆ ಸಂಬಂಧ ಕಾಮಗಾರಿ ನಡೆಯುವ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಈ ಮಾರ್ಗದಲ್ಲಿ ಆಗಸ್ಟ್ 8ರ ವರೆಗೆ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಸೇವೆ ಇರುವುದಿಲ್ಲ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ. ಅಷ್ಟೇ ಅಲ್ಲದೆ, ಕೆಲವು ಭಾಗಗಳಲ್ಲಿ ಗುಡ್ಡ ಕುಸಿದ ಪರಿಣಾಮ ಬಸ್ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಇನ್ನು ಪಶ್ಚಿಮಘಟ್ಟ ಭಾಗದ ಎಡಕುಮೇರಿ- ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಪರಿಣಾಮ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

ಇದೀಹ ಈ ಭಾಗದಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿರುವ ಹಿನ್ನಲೆ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ-ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸೇವೆಯನ್ನು ಆಗಸ್ಟ್ 8ರ ವರೆಗೆ ರದ್ದು ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವೆಲ್ಲಾ ಮಾರ್ಗಗಳಲ್ಲಿ ಯಾವ್ಯಾವತ್ತು ರದ್ದು.?
* ಆಗಸ್ಟ್ 7ರ ವರೆಗೆ ಸಂಪೂರ್ಣ ರದ್ದು: ರೈಲು ನಂ.16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲು
* ಆಗಸ್ಟ್ 8ರವರೆಗೆ ಸಂಪೂರ್ಣ ರದ್ದು: ರೈಲು ನಂ.16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು
* ಆಗಸ್ಟ್ 8ರವರೆಗೆ ಸಂಪೂರ್ಣ ರದ್ದು: ರೈಲು ನಂ.01595 ಕಾರವಾರ-ಮಡಗಾಂವ್ ಹಾಗೂ ರೈಲು ನಂ. 01596 ಮಡಗಾಂವ್-ಕಾರವಾರ ವಿಶೇಷ ರೈಲು
* ಆಗಸ್ಟ್ 7ರ ವರೆಗೆ ಸಂಪೂರ್ಣ ರದ್ದು: ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್
* ಆಗಸ್ಟ್ 8ರವರೆಗೆ ಸಂಪೂರ್ಣ ರದ್ದು: ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲು
* ಆಗಸ್ಟ್ 7ರ ವರೆಗೆ ಸಂಪೂರ್ಣ ರದ್ದು: ರೈಲು ನಂ.16515 ಕೆಎಸ್ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು
* ಆಗಸ್ಟ್ 8ರವರೆಗೆ ಸಂಪೂರ್ಣ ರದ್ದು: ರೈಲು ನಂ.16516 ಕಾರವಾರ-ಕೆಎಸ್ಆರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲು
ಇನ್ನು ಈ ಬಗ್ಗೆ ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳ ಹಾಗೂ ಆಸುಪಾಸಿನಲ್ಲಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಅವಕಾಶ ಕಲ್ಪಿಸಿಲ್ಲ. ಆದರೆ, ಸದ್ಯದಲ್ಲೇ ದುರಸ್ಥಿ ಕಾರ್ಯ ಸಂಪೂರ್ಣ ಆಗಲಿದ್ದು, ಬಳಿಕ ರೈಲು ಸಂಚಾರ ಮುಂದುವರಿಯಲಿದೆ. ಅಲ್ಲಿ ತನಕ ರೈಲು ಪ್ರಯಾಣಿಕರು ಸಹಕರಿಸುವಂತೆ ವಿನಂತಿ ಮಾಡಿಕೊಂಡಿದೆ.












Click it and Unblock the Notifications