Vande Bharat Express Train: ಬೆಂಗಳೂರು-ಮಧುರೈ ಹೊಸ ವಂದೇ ಭಾರತ್ ರೈಲು ಟಿಕೆಟ್ ದರ ಎಷ್ಟು.? ಇಲ್ಲಿದೆ ಮಾಹಿತಿ
Vande Bharat Express Train: ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಗಳಿಸುತ್ತಲೇ ಬಂದಿದೆ. ಇದೀಗ ಮೂರು ಮಾರ್ಗಗಳಿಗೆ ಹೊಸ ವಂದೇ ಭಾರತ್ ರೈಲು ಸೇವೆಗೆ ಇಂದು (ಆಗಸ್ಟ್ 31) ನವದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಟಿಕೆಟ್ ದರ ಎಷ್ಟೆಂದು ಇಲ್ಲಿ ತಿಳಿಯಿರಿ.
ಈ ಹೊಸ ವಂದೇ ಭಾರತ್ ರೈಲು ಸೇವೆ ಬೆಂಗಳೂರು-ತಮಿಳುನಾಡಿನ ಮಧುರೈ ನಡುವೆ ಓಡಲಿದೆ. ಕೇಸರಿ ಬಣ್ಣದ ಬಣ್ಣದ ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಮಧುರೈ-ಬೆಂಗಳೂರು, ಬೆಂಗಳೂರು-ಮಧುರೈ ನಡುವೆ ಓಡಲಿದೆ.

ಬೆಳಗ್ಗೆ 5:15ಕ್ಕೆ ಮಧುರೈ ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20671 ದಿಂಡಿಗಲ್-ತಿರುಚ್ಚಿ-ಕರೂರು-ನಾಮಕ್ಕಲ್ ಸೇಲಂ-ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಅದೇ ದಿನ ಮಧ್ಯಾಹ್ನ 1 ಗಂಟೆಗೆ ತಲುಪಲಿದ್ದು, ಪ್ರಯಾಣದ ಅವದೀ 8 ಗಂಟೆ ಆಗಿರುತ್ತದೆ. ಇನ್ನು ಮಧುರೈ-ಬೆಂಗಳೂರು ಟಿಕೆಟ್ ನಡುವೆ ರೈಲು ಟಿಕೆಟ್ ದರ 1,575 ರೂಪಾಯಿ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಂಗಳವಾರ ಹಿರತುಪಡಿಸಿ ವಾರದ 6 ದಿನ ಮಧ್ಯಾಹ್ನ 1:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20672 ಕೆ.ಆರ್.ಪುರಂ-ಸೇಲಂ-ನಾಮಕ್ಕಲ್-ತಿರುಚ್ಚಿ-ದಿಂಡಿಗಲ್ ಮಾರ್ಗವಾಗಿ ಮಧುರೈ ಜಂಕ್ಷನ್‌ಗೆ ಅದೇ ದಿನ ರಾತ್ರಿ 9:45ಕ್ಕೆ ತಲುಪಲಿದೆ. ಪ್ರಯಾಣದ ಅವಧಿ 8 ಗಂಟೆ ಆಗಲಿದ್ದು, ಬೆಂಗಳೂರು-ಮಧುರೈ ನಡುವಿನ ಪ್ರಯಾಣದ ಟಿಕೆಟ್ ದರ 1,575 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
ಇನ್ನು ಬೆಂಗಳೂರು-ಮಧುರೈ ನಡುವೆ ಅಂತರ 521 ಕಿಲೋ ಮೀಟರ್ ಇದ್ದು, ಐತಿಹಾಸಿಕ ಹಾಗೂ ದೇವಾಲಯಗಳ ನಗರಿ ಎಂದು ಮಧುರೈ ಖ್ಯಾತಿಯಾಗಿದೆ. ಆದ್ದರಿಂದ ಕರ್ನಾಟಕದಿಂದ ಅಲ್ಲಿಗೆ ತುಂಬಾ ಯಾತ್ರಾರ್ಥಿಗಳು ಪ್ರಯಾಣ ಮಾಡುತ್ತಲೇ ಇರುತ್ತಾರೆ.
ವಿಶೇಷ ರೈಲು ಸಂಚಾರ ಸಮಯ ವಿಸ್ತರಣೆ: ಭಾರತೀಯ ರೈಲ್ವೆ ಪ್ರಯಾಣಿಕೆ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ದಾನಪುರದ ವಿಶೇಷ ರೈಲುಗಳ ಸಂಚಾರವನ್ನು ಮತ್ತೆರಡು ವಾರ ವಿಸ್ತರಣೆ ಮಾಡಲು ರೈಲ್ವೆ ನಿರ್ಧಾರ ಮಾಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಬಿಹಾರದ ದಾನಪುರ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಎಂಟು ರೈಲುಗಳು ಆಗಸ್ಟ್ 28ರಿಂದ ಸೆಪ್ಟೆಂಬರ್ 7ರ ವರೆಗೆ ಒಟ್ಟು 14 ಟ್ರಿಪ್‌ಗಳನ್ನು ಓಡಲಿದೆ. ಅದೇ ರೀತಿ ವಾರಕ್ಕೆ ಎರಡು ಬಾರಿ ಓಡುವ ಎರಡು ರೈಲುಗಳು ತಲಾ ಎರಡು ಬಾರಿ ಹೆಚ್ಚುವರಿಯಾಗಿ ಸಂಚಾರ ಮಾಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.












Click it and Unblock the Notifications