ಕರ್ನಾಟಕಕ್ಕೆ ಹೊಸ ರೈಲಿಗಾಗಿ ಬೇಡಿಕೆ; ಇಲ್ಲಿದೆ ನೋಡಿ ಪಟ್ಟಿ

ಬೆಂಗಳೂರು, ಜುಲೈ 12; ಕರ್ನಾಟಕದ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಮೊದಲಿನಿಂದಲೂ ಇರುವ ಆರೋಪವಾಗಿದೆ. ಹೊಸ ರೈಲುಗಳನ್ನು ನೀಡುವಲ್ಲಿಯೂ ಭಾರತೀಯ ರೈಲ್ವೆ ಮೀನಮೇಷ ಎಣಿಸುತ್ತಿದೆ. ಬೆಂಗಳೂರಿಗೆ ಕಲಬುರಗಿ, ಬೀದರ್‌ನಿಂದ ಹೊಸ ರೈಲು ಬೇಕು ಎಂದು ಕೆಲವು ದಿನಗಳ ಹಿಂದೆ ಟ್ವಿಟರ್‌ ಅಭಿಯಾನ ನಡೆದಿತ್ತು.

ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್‌ ರೈಲು ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲುಗಳು ರಾಜ್ಯಕ್ಕೆ ಬೇಕು ಎಂಬುದು ಕರ್ನಾಟಕದ ರೈಲ್ವೆ ಪ್ರಯಾಣಿಕರ ಆಗ್ರಹವಾಗಿದೆ. ಈ ಕುರಿತು ಟ್ವೀಟ್‌ ಮಾಡಿ ಕರ್ನಾಟಕದಿಂದ ಆಯ್ಕೆಯಾದ ಸಂಸದರ ಗಮನ ಸೆಳೆಯಲಾಗಿದೆ.

Karnataka Railway Users Demand For New Trains For State List

Karnataka Rail Users ಬುಧವಾರ ಟ್ವೀಟ್ ಮಾಡಿ ಕರ್ನಾಟಕದಿಂದ ಆಯ್ಕೆಯಾದ ಸಂಸದರ ಪೈಕಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬ, ಶೋಭಾ ಕರಂದ್ಲಾಜೆ ಮತ್ತು ಎ. ನಾರಾಯಣ ಸ್ವಾಮಿ ಗಮನ ಸೆಳೆದಿದೆ. ರಾಜ್ಯಕ್ಕೆ ಹೊಸ ರೈಲುಗಳು ಬೇಕು ಎಂದು ಬೇಡಿಕೆ ಇಟ್ಟಿದೆ.

ಯಾವ-ಯಾವ ಹೊಸ ರೈಲುಗಳು; ಟ್ವೀಟ್‌ನಲ್ಲಿ ಬೆಂಗಳೂರು-ಬೀದರ್ ವಯಾ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ನೂತನ ರೈಲನ್ನು ಓಡಿಸಬೇಕು. ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಮಂಗಳೂರು ರೈಲನ್ನು ಸಮಯ ಪರಿಷ್ಕರಣೆಯೊಂದಿಗೆ ವಿಶೇಷ ರೈಲುಗಳ ಬದಲಾಗಿ ಶಾಶ್ವತ ರೈಲುಗಳಾಗಿ ಪರಿವರ್ತಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಬೆಳಗಾವಿ/ ಹುಬ್ಬಳ್ಳಿ-ಪುಣೆ ಇಂಟರ್ ಸಿಟಿ ರೈಲನ್ನು ಪ್ರಾರಂಭಿಸುವುದು. ಬೆಳಗಾವಿ/ ಮಿರಜ್-ಮೈಸೂರು ವಯಾ ಹಾಸನ ಹೊಸ ರೈಲನ್ನು ಪ್ರಾರಂಭಿಸುವುದು. ವಾರಕ್ಕೆ ಒಂದು ದಿನ ಸಂಚರಿಸುತ್ತಿರುವ ಯಶವಂತಪುರ-ಮುರುಡೇಶ್ವರ ರೈಲನ್ನು ಕಾರವಾರದವರೆಗೂ ವಿಸ್ತರಿಸುವುದು ಜೊತೆಗೆ ಸಮಯ ಪರಿಷ್ಕರಣೆಯೊಂದಿಗೆ ಪ್ರತಿ ದಿನ ಸಂಚರಿಸುವಂತೆ ಮಾಡುವುದು ಎಂದು ಬೇಡಿಕೆ ಸಲ್ಲಿಸಲಾಗಿದೆ.

ಬೇಡಿಕೆ ಇರುವ ಹೊಸ ರೈಲುಗಳು

* ಬೆಂಗಳೂರು-ಮಂಗಳೂರು ವಯಾ ಮೈಸೂರು ರೈಲನ್ನು ವಾರದ ಆರು ದಿನದ ಬದಲಾಗಿ ವಾರದ ಎಲ್ಲ ದಿನ ಸಮಯ ಪರಿಷ್ಕರಣೆಯೊಂದಿಗೆ ಸಂಚರಿಸುವಂತೆ ಮಾಡುವುದು.

* ಮುಂಬೈ-ಗದಗ ಎಕ್ಸ್‌ಪ್ರೆಸ್ ರೈಲನ್ನು ಬಳ್ಳಾರಿ ಅಥವಾ ಹೊಸಪೇಟೆವರೆಗೆ ವಿಸ್ತರಿಸುವುದು

* ಮೈಸೂರು/ ಬೆಂಗಳೂರಿನಿಂದ ಮುಂಬೈಗೆ ಹೊಸ ಸೂಪರ್ ಫಾಸ್ಟ್ ರೈಲನ್ನು ಓಡಿಸುವುದು.

* ಚಿಕ್ಕಮಗಳೂರು-ಬೆಂಗಳೂರು ರೈಲಿನ ವೇಗ ವೃದ್ಧಿಸುವುದು

* ಹುಬ್ಬಳ್ಳಿ/ ಬೆಳಗಾವಿ-ಚೆನ್ನೈ ಪ್ರತಿ ದಿನ ಸಂಚರಿಸುವ ಹೊಸ ರೈಲು ಓಡಿಸುವುದು

* ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನು ಸಂಪರ್ಕಿಸುವ ಸಲುವಾಗಿ ಚಿಕ್ಕಮಗಳೂರು-ಕಡೂರು/ ಬಿರುರು ನಡುವೆ ಡೆಮು ರೈಲುಗಳನ್ನು ಓಡಿಸುವುದು

* ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸೇವೆಯನ್ನು ವಾರದಲ್ಲಿ ಹೆಚ್ಚು ದಿನ ಓಡಿಸುವುದು

* ವಿಜಯಪುರ-ತಿರುಪತಿ/ ಚೆನ್ನೈ ವಯಾ ಗದಗ, ಬಳ್ಳಾರಿ ಹೊಸ ರೈಲನ್ನು ಓಡಿಸುವುದು

* ಬೆಂಗಳೂರು-ದೇವನಹಳ್ಳಿ ಮೆಮು ರೈಲುಗಳನ್ನು ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸುವುದು

* ಬೀದರ್/ ಕಲಬುರಗಿ-ಹುಬ್ಬಳ್ಳಿ ವಯಾ ರಾಯಚೂರು, ಬಳ್ಳಾರಿ ಹೊಸ ಇಂಟರ್ ಸಿಟಿ ರೈಲು
ಓಡಿಸುವುದು

* ಮಂಗಳೂರು-ಮುಂಬೈ ನಡುವೆ ಹೆಚ್ಚುವರಿ ರೈಲನ್ನು ಪ್ರಾರಂಭಿಸುವುದು ಮಿರಜ್/ ಬೆಳಗಾವಿ-ವಾಸ್ಕೋ ಇಂಟರ್ ಸಿಟಿ ರೈಲನ್ನು ಪ್ರಾರಂಭಿಸುವುದು

* ವಾರದಲ್ಲಿ ಮೂರು ದಿನ ಸಂಚರಿಸುವ ಹೊಸ ಬೆಂಗಳೂರು-ಮಂಗಳೂರು ಇಂಟರ್ ಸಿಟಿ ವಯಾ ತುಮಕೂರು, ಅರಸೀಕೆರೆ, ಹಾಸನ ಹೋಗುವಂತೆ ಮಾಡುವುದು.

* ಹೊಸ ಬೀದರ್-ಮಂಗಳೂರು ವಯಾ ಬಳ್ಳಾರಿ, ಚಿತ್ರದುರ್ಗ, ಹಾಸನ ಅಥವಾ ವಯಾ ಬಳ್ಳಾರಿ, ಹುಬ್ಬಳ್ಳಿ, ಕಾರವಾರ ರೈಲು ಓಡಿಸುವುದು.

* ಗುಂತಕಲ್-ಚಿಕ್ಕಜಜೂರು ರೈಲನ್ನು ಚಿಕ್ಕಮಗಳೂರು ತನಕ ವಿಸ್ತರಿಸುವುದು

* ಮಂಗಳೂರು-ಪುಣೆ ವಯಾ ಕಾರವಾರ, ಬೆಳಗಾವಿಗೆ ಹೊಸ ರೈಲು ಸಂಚಾರ

* ಕಾರವಾರ-ತಿರುಪತಿ ವಯಾ ಮಂಗಳೂರು, ಹಾಸನ ಹೊಸ ರೈಲು ಓಡಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+