ಕರ್ನಾಟಕ ಕರಾವಳಿಗೆ ಅನುಕೂಲ; ಈ ರೈಲು ಸೇವೆ ವಿಸ್ತರಣೆ
ಮಂಗಳೂರು, ಅಕ್ಟೋಬರ್ 08; ದಕ್ಷಿಣ ಮಧ್ಯ ರೈಲ್ವೆ ಜಬಲ್ಪುರ್-ಕೊಯಮತ್ತೂರು ವಾರದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ರೈಲು ಕರ್ನಾಟಕದ ಮಂಗಳೂರು, ಉಡುಪಿ, ಕಾರವಾರದ ಮೂಲಕ ಸಂಚಾರ ನಡೆಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲು ನಂಬರ್ 02198 ಜಬಲ್ಪುರ್-ಕೊಯಮತ್ತೂರು ಸೂಪರ್ ಫಾಸ್ಟ್ ವಾರದ ವಿಶೇಷ ರೈಲು ಜಬಲ್ಪುರ್‌ನಿಂದ 23:50ಕ್ಕೆ ಶುಕ್ರವಾರ ಹೊರಡಲಿದೆ. ಮೂರನೇಯ ದಿನ ಕೊಯಮತ್ತೂರ್‌ಗೆ 17:10ಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲನ್ನು ಅಕ್ಟೋಬರ್ 13, 20 ಮತ್ತು 27ರ ತನಕ ವಿಸ್ತರಣೆ ಮಾಡಲಾಗಿದೆ. ರೈಲು ನಂಬರ್ 02197 ಕೊಯಮತ್ತೂರು-ಜಬಲ್ಪುರ್ ರೈಲನ್ನು ಅಕ್ಟೋಬರ್ 16, 23 ಮತ್ತು 30ರ ತನಕ ವಿಸ್ತರಣೆ ಮಾಡಲಾಗಿದೆ. ಕೊಯಮತ್ತೂರ್‌ನಿಂದ ಸೋಮವಾರ 15:25ಕ್ಕೆ ಹೊರಡುವ ರೈಲು ಜಬಲ್ಪುರ್‌ಗೆ ಮೂರನೇ ದಿನ 08.45ಕ್ಕೆ ಆಗಮಿಸಲಿದೆ.
ರೈಲಿನ ಬೋಗಿ, ನಿಲ್ದಾಣದ ವಿವರ; ರೈಲು ನಂಬರ್ 02198/ 02197 ಜಬಲ್ಪುರ್-ಕೊಯಮತ್ತೂರ್-ಜಬಲ್ಪುರ್ ಸೂಪರ್ ಫಾಸ್ಟ್ ವಾರದ ವಿಶೇಷ ರೈಲು ಒಂದು ಎಸಿ ಫಸ್ಟ್ ಕೋಚ್, ಎರಡು ಎಸಿ 2 ಟೈರ್ ಕೋಚ್, 6 ಎಸಿ ತ್ರ ಟೈರ್ ಕೋಚ್, 11 ಸ್ಲೀಪರ್ ಕೋಚ್, ಎರಡು ಸೆಕೆಂಡ್ ಕ್ಲಾಸ್ ಮತ್ತು ಎರಡು ದಿವ್ಯಾಂಗ ಬೋಗಿಯನ್ನು ಒಳಗೊಂಡಿದೆ.
ಜಬಲ್ಪುರ್-ಕೊಯಮತ್ತೂರ್-ಜಬಲ್ಪುರ್ ಸೂಪರ್ ಫಾಸ್ಟ್ ರೈಲು 1.35/ 1.45 ಮಡಗಾಂವ್ 5.45/5.55, 2.50/ 2.55 ಕಾರವಾರ 4.30/ 4.32, 3.50/ 3.52 ಕುಮಟಾ 3.30/ 3.32, 5./ 05.02 ಬೈಂದೂರು 2.26/ 2.28, 5.50/ 5.52 ಕುಂದಾಪುರ 02.02/ 02.02, 6.50/ 06.52 ಉಡುಪಿ 1.34/ 1.36, 7.50/ 7.52 ಮುಲ್ಕಿ 01.02/ 01.04, 9.20/ 9.30 ಮಂಗಳೂರು ಜಂಕ್ಷನ್ 23.00/ 23.10 ಆಗಮನ ನಿರ್ಗಮನವಾಗಲಿದೆ.
ರೈಲುಗಳ ರದ್ದು ಮಾಹಿತಿ; ಗುಂಟೂರು ವಿಭಾಗದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಸಲುವಾಗಿ ಕೆಲವು ರೈಲುಗಳನ್ನು ರದ್ದುಗೊಳಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಈ ಕುರಿತು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
* ರೈಲು ಸಂಖ್ಯೆ 17329 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 9 ರಿಂದ ಅಕ್ಟೋಬರ್ 10 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ.
* ರೈಲು ಸಂಖ್ಯೆ 17330 ವಿಜಯವಾಡ-ಎಸ್.ಎಸ್.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 10 ರಿಂದ ಅಕ್ಟೋಬರ್ 11 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.











Click it and Unblock the Notifications