IRCTC tour package: ಅಯೋಧ್ಯೆಯಿಂದ ಶ್ರೀಲಂಕಾದವರೆಗೂ ಪ್ರವಾಸ ಮಾಡಲು ಬಯಸುವಿರಾ?, ಇಲ್ಲಿದೆ ವಿವರ
ಅಯೋಧ್ಯೆಯಿಂದ ಶ್ರೀಲಂಕಾದವರೆಗೂ ಪ್ರವಾಸ ಕೈಗೊಳ್ಳುವವರಿಗೆ ಐಆರ್‌ಸಿಟಿಸಿಯು ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ನವದೆಹಲಿ, ಮಾರ್ಚ್, 05: ಐಆರ್‌ಸಿಟಿಸಿಯು ಏಪ್ರಿಲ್ 7ರಂದು ವಿಶೇಷ ಪ್ರವಾಸಿ ರೈಲಿನ ಮೂಲಕ ಶ್ರೀ ರಾಮಾಯಣ ಯಾತ್ರೆಯನ್ನು ಪ್ರಾರಂಭಿಸಲಿದೆ. ಶ್ರೀ ರಾಮಾಯಣ ಯಾತ್ರೆಯು ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನ ಥೀಮ್ ಆಧಾರಿತ ತೀರ್ಥಯಾತ್ರೆ ಆಗಿರಲಿದೆ. ಇದರಲ್ಲಿ ಪ್ರಮುಖ ಪವಿತ್ರ ಸ್ಥಳಗಳನ್ನು ನೋಡಬಹುದಾಗಿದೆ.
ನವದೆಹಲಿಯ ಸಫ್ದರ್‌ಜಂಗ್‌ನಿಂದ ಹೊರಡುವ ಈ ರೈಲು ಅಯೋಧ್ಯೆ, ಜನಕ್‌ಪುರ, ಸೀತಾಮಧಿ, ಬಕ್ಸರ್, ವಾರಣಾಸಿ, ಮಾಣಿಕ್‌ಪುರ ಜೆಎನ್, ನಾಸಿಕ್ ರೋಡ್ ಹೊಸಪೇಟ್, ರಾಮೇಶ್ವರಂ, ಭದ್ರಾಚಲಂ ರಸ್ತೆ, ನಾಗ್ಪುರ ಮಾರ್ಗವಾಗಿ ಸಂಚಾರ ಮಾಡಲಿದೆ. ಮತ್ತು ನಂತರ ಕೊನೆಗೆ ನವದೆಹಲಿಗೆ ಹಿಂತಿರುಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐಆರ್‌ಸಿಟಿಸಿಯ ಪ್ರಕಾರ ರೈಲಿನಲ್ಲಿ ಒಟ್ಟು 120 ಪ್ರವಾಸ ಪ್ಯಾಕೇಜ್‌ಗೆ ಸಂಬಂಧಿಸಿದ ಸೀಟುಗಳು ಲಭ್ಯವಿರುತ್ತವೆ. ಅದರಲ್ಲಿ ಎಸಿ ಕೂಪ್ 24 ಆಸನ, ಎಸಿ ಕ್ಯಾಬಿನ್ 48 ಆಸನಗಳು ಮತ್ತು ಎಸಿ 2 48 ಆಸನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ದೆಹಲಿ ಸಫ್ದರ್‌ಜಂಗ್, ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ್, ಲಕ್ನೋ ಬೋರ್ಡಿಂಗ್ ಪಾಯಿಂಟ್‌ಗಳು ಕೂಡ ಸೇರಿವೆ. ಇನ್ನು ವಿರಂಗನಿ ಲಕ್ಷ್ಮಿ ಬಾಯಿ, ಗ್ವಾಲಿಯರ್, ಆಗ್ರಾ, ಮಥುರಾ ಇವು ಡಿ-ಬೋರ್ಡಿಂಗ್ ಸ್ಟೇಷನ್‌ಗಳು ಆಗಿವೆ.

ಸಂಪೂರ್ಣ ವೆಚ್ಚದ ವಿವರ
ಎಸಿ 1 ಕೂಪೆಗೆ (24 ಸೀಟುಗಳು) ಇದ್ದು, ಇಲ್ಲಿ ಡಬಲ್ ಶೇರಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಮತ್ತು ಇದಕ್ಕೆ ಬೆಲೆ ₹1,68,950 ದರವನ್ನು ನಿಗದಿ ಮಾಡಲಾಗಿದೆ. ಇನ್ನು ಎಸಿ 1 ಕ್ಯಾಬಿನ್‌ಗೆ (48 ಆಸನಗಳು) ಸಿಂಗಲ್, ಡಬಲ್ ಮತ್ತು ಮೂವರು ಪ್ರಯಾಣ ಮಾಡಲು ಟಿಕೆಟ್ ಬೆಲೆಯು ಭಿನ್ನವಾಗಿರುತ್ತದೆ. ₹1,61,645 ರಿಂದ ₹1,35,500 ಆಗುತ್ತದೆ ಎಂದು ಮಾಹಿತಿ ನೀಡಿದೆ.
ಹಾಗೆಯೇ 2 ಎಸಿಗೆ (48 ಸೀಟುಗಳು), ಇದರ ದರ ₹1,29,165 ರಿಂದ ₹1,03,020 ಆಗಿರುತ್ತ ಎನ್ನುವ ಮಾಹಿತಿಯನ್ನು ನೀಡಿದೆ. ಮತ್ತು 5-11 ವರ್ಷದೊಳಗಿನ ಮಕ್ಕಳಿಗೆ, ಎಸಿ 1 ಕ್ಯಾಬಿನ್‌ಗೆ ಟಿಕೆಟ್‌ನ ಬೆಲೆ ₹1,35,500 ಮತ್ತು 2 ACಗೆ 1,03,020 ವೆಚ್ಚ ಆಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರವಾಸಿ ತಾಣಗಳ ವಿವರ ಇಲ್ಲಿದೆ
ಯಾತ್ರಾರ್ಥಿಗಳು ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯು ಘಾಟ್, ಭಾರತ್-ಹನುಮಾನ್ ದೇವಸ್ಥಾನ ಮತ್ತು ಭಾರತ್ ಕುಂಡ್, ರಾಮ್ ಜಾನಕಿ ಮಂದಿರ, ಜಾನಕಿ ಮಂದಿರ ಮತ್ತು ಪುನೌರ ಧಾಮ್, ರಾಮ್ ರೇಖಾ ಘಾಟ್, ರಾಮೇಶ್ವರ ನಾಥ ದೇವಸ್ಥಾನ, ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ, ಸೀತಾ ಮಾತಾ ದೇವಸ್ಥಾನ, ಭಾರದ್ವಾಜ್ ಆಶ್ರಮ, ಗಂಗಾ-ಯಮುನಾ ಸಂಗಮವನ್ನು ನೋಡಬಹುದಾಗಿದೆ.
ಹಾಗೆಯೇ ಹನುಮಾನ್ ದೇವಸ್ಥಾನ, ಶೃಂಗಿ ಋಷಿ ಸಮಾಧಿ ಮತ್ತು ಶಾಂತಾ ದೇವಿ ದೇವಸ್ಥಾನ, ರಾಮಚೌರಾ, ಗುಪ್ತ ಗೋದಾವರಿ, ರಾಮ್ ಘಾಟ್, ಸತಿ ಅನುಸೂಯಾ ದೇವಸ್ಥಾನ, ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಗುಫಾ, ಕಲಾರಾಮ್ ದೇವಸ್ಥಾನ, ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ & ವಿಠ್ಠಲ್ ದೇವಸ್ಥಾನ, ರಾಮನಾಥಸ್ವಾಮಿ ದೇವಸ್ಥಾನ ಮತ್ತು ಧನುಷ್ಕೋಡಿ, ಶ್ರೀ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ರಾಮಟೆಕ್ ಕೋಟೆ ಮತ್ತು ದೇವಸ್ಥಾನವನ್ನು ವೀಕ್ಷಿಸಬಹುದಾಗಿದೆ.

ಶ್ರೀಲಂಕಾ ಯಾತ್ರೆಯ ವಿವರ ಇಲ್ಲಿದೆ
ಪ್ರವಾಸಿಗರು ಶ್ರೀಲಂಕಾದಲ್ಲಿ ರಾಮಾಯಣ ಹಾದಿಯ ಪ್ರವಾಸವನ್ನು ಮತ್ತಷ್ಟು ವಿಸ್ತರಿಸಲು ಬಯಸಿದರೆ, ನಾಗಪುರದಿಂದ ಅವರು ನೇರವಾಗಿ ರಾಮಾಯಣ ಯಾತ್ರೆಯ ಮುಂದಿನ ಭಾಗಕ್ಕೆ ಹೋಗಬಹುದಾಗಿದೆ. ಏಪ್ರಿಲ್ 23 ರಂದು ಹಿಂದಿನ ಪ್ರವಾಸವು ನಾಗ್ಪುರ ರೈಲು ನಿಲ್ದಾಣದಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿಂದ ರೈಲು ನವದೆಹಲಿಗೆ ಹೊರಡಲಿದೆ. ಶ್ರೀಲಂಕಾ ಪ್ರವಾಸದಲ್ಲಿ 5 ರಾತ್ರಿಗಳು ಮತ್ತು 6 ದಿನಗಳು ರಾಮಾಯಣ ಪ್ರವಾಸವನ್ನು ಮತ್ತೆ ಮುಂದುವರೆಸುವವರು ಕೊಲಂಬೊಗೆ ಪ್ರಯಾಣಿಸಲು ನಾಗ್ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ.
ಒಬ್ಬರಿಗೆ - ₹82880
ಇಬ್ಬರಿಗೆ - ₹69620
ಮೂವರಿಗೆ- ₹67360
ಮಗುವಿನೊಂದಿಗೆ ಹಾಸಿಗೆಗೆ- ₹46870
ಮಗುವಿನೊಂದಿಗೆ ಹಾಸಿಗೆ ಇಲ್ಲದೆ - ₹44720 ಪಾವತಿಸಬೇಕಾಗುತ್ತದೆ.

ಲಭ್ಯವಿರುವ ಆಸನಗಳು ಎಷ್ಟು?
ಇಲ್ಲಿ ಕೊಲಂಬೊ, ಡಂಬುಲ್ಲಾ, ಟ್ರಿಂಕೋಮಲಿ, ಕ್ಯಾಂಡಿ ಮತ್ತು ನುವಾರಾ ಎಲಿಯಾ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ನಿಮಗೆ ಬೇಕಾದ ಎಲ್ಲಾ ಆಹಾರಗಳನ್ನು ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಆಸನಗಳು ಒಟ್ಟು 40ಕ್ಕೆ ಸೀಮಿತವಾಗಿರುತ್ತವೆ.

ಯಾವೆಲ್ಲ ನಿಯಗಳನ್ನು ಪಾಲಿಸಬೇಕು?
ಇನ್ನು ವಿಮಾನದ ವಿವರಗಳ ಕುರಿತು ಹೇಳುವುದಾದರೆ ಏಪ್ರಿಲ್ 23ರಂದು, ಪ್ರಯಾಣಿಕರು 6E 6018 ವಿಮಾನದ ಮೂಲಕ 10:20ಕ್ಕೆ ನಾಗ್ಪುರದಿಂದ ಚೆನ್ನೈಗೆ ಹೊರಡಬಹುದಾಗಿದೆ. ಮತ್ತು ನಂತರ ಚೆನ್ನೈನಿಂದ ಕೊಲಂಬೊಗೆ ಶ್ರೀಲಂಕಾ ಏರ್ಲೈನ್ಸ್ ವಿಮಾನವು ಹೊರಡಲಿದೆ. ಪ್ರಯಾಣಿಕರು ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
ಒಂದು ಡೋಸ್ ಲಸಿಕೆ ಪಡೆದ ಪ್ರಯಾಣಿಕರು ಸ್ವಂತ ವೆಚ್ಚದಲ್ಲಿ ನಿರ್ಗಮನ ದಿನಾಂಕದಿಂದ 72 ಗಂಟೆಗಳ ಒಳಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೊಂಡೊಯ್ಯಬಹುದಾಗಿದೆ. ಹಾಗೆಯೇ ಪ್ರವಾಸಿಗರು ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದ ಏರ್ ಸುವಿಧಾ ಆ್ಯಪ್‌ನಲ್ಲಿ ತಮ್ಮ ರುಜುವಾತುಗಳನ್ನು ಸೇರಿಸಬೇಕಾಗುತ್ತದೆ. ಅಲ್ಲದೆ, ಪಾಸ್‌ಪೋರ್ಟ್ ಸಿಂಧುತ್ವವು ಭಾರತಕ್ಕೆ ಮರಳಿದ ದಿನಾಂಕದಿಂದ ಕನಿಷ್ಠ 6 ತಿಂಗಳು ಆಗಿರಬೇಕು ಎಂದು ಸೂಚಿಸಿದೆ.












Click it and Unblock the Notifications