Maha shivaratri 2023: ವಿಶೇಷ ಟೂರ್‌ ಪ್ಯಾಕೇಜ್‌ ಘೋಷಿಸಿದ IRCTC, ದೇವಾಲಯಗಳು, ಟಿಕೆಟ್ ದರದ ವಿವರ ತಿಳಿಯಿರಿ

ಮಹಾಶಿವರಾತ್ರಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ವಿಶೇಷ ಪ್ಯಾಕೇಜ್‌ನಲ್ಲಿ ಯಾವೆಲ್ಲ ದೇವಾಲಯಗಳಿಗೆ ಪ್ರಯಾಣ ಮಾಡಬಹುದು ಎನ್ನುವ ವಿವರ ಇಲ್ಲಿದೆ ಗಮನಿಸಿ.

ನವದೆಹಲಿ, ಫೆಬ್ರವರಿ, 13: ಭಾರತೀಯ ರೈಲ್ವೆಯು ಪ್ರತಿ ಹಬ್ಬಗಳ ಸಮಯದಲ್ಲೂ ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇದೆ. ಈ ಹಿಂದೆ ಸಂಕ್ರಾಂತಿಯ ಪ್ರಯುಕ್ತ ರಾಜ್ಯದ ಜನರಿಗೆ ವಿವಿಧ ರಾಜ್ಯಗಳಿಗೆ ತೆರಳುವ ಟೂರ್‌ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿತ್ತು. ಇದೀಗ ಶಿವರಾತ್ರಿ ಸಮೀಪಿಸುತ್ತಿದ್ದು, ಶಿವನ ಪ್ರಮುಖ ದೇವಾಲಯಗಳಿರುವ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮತ್ತೆ ಸಿಹಿಸುದ್ದಿಯನ್ನು ನೀಡಿದೆ. ಹಾಗಾದರೆ ಐಆರ್‌ಸಿಟಿ ಘೋಷಿಸಿರುವ ಟೂರ್‌ ಪ್ಯಾಕೇಜ್‌ನಲ್ಲಿ ಯಾವೆಲ್ಲ ಸ್ಥಳಗಳು ಇವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ದೇಶದೆಲ್ಲೆಡೆ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ತಯಾರಿಗಳು ಈಗಾಗಲೇ ನಡೆಯುತ್ತಲೇ ಇವೆ. ಹಾಗೆಯೇ ಪ್ರಮುಖ ಶಿವ ದೇವಾಲಯಗಳು ಇರುವ ಸ್ಥಳಗಳಿಗೆ ಭಕ್ತರು ಈಗಿನಿಂದಲೇ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ. ಅದರಲ್ಲೂ ರೈಲಿನಲ್ಲಿ ಪ್ರಯಾಣ ಮಾಡಲು ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಶಿವರಾತ್ರಿ ಪ್ರಯುಕ್ತ ಪ್ರಮುಖ ದೇವಾಲಯಗಳಿರುವ ಸ್ಥಳಗಳಿಗೆ ರೈಲುಗಳನ್ನು ಬಿಡಲು ಇಲಾಖೆ ನಿರ್ಧಾರ ಮಾಡಿದೆ. ದೇಶದಲ್ಲಿರುವ ಪ್ರಮುಖ ಶಿವನ ದೇವಾಲಯಗಳಿಗೆ ತೆರೆಳುವ ಪ್ರಯಾಣಿಕರಿಗೆ ಉಪಯುಕ್ತವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶಿವರಾತ್ರಿಯ ವಿಶೇಷ ಟೂರ್‌ ಪ್ಯಾಕೇಜ್

ಶಿವರಾತ್ರಿಯ ವಿಶೇಷ ಟೂರ್‌ ಪ್ಯಾಕೇಜ್

ಮಹಾಶಿವರಾತ್ರಿಯು ಶಿವನನ್ನು ಪೂಜಿಸುವವರಿಗೆ ಬಹಳ ಪ್ರಮುಖ ದಿನವಾಗಿದೆ. ಭಾರತದದಲ್ಲಿ ಅತ್ಯಂತ ಪ್ರಮುಖವಾದ ಶಿವನ ದೇವಾಲಯಗಳನ್ನು ಕೂಡ ನೋಡಬಹುದಾಗಿದೆ. 12 ಶಿವ ಜ್ಯೋತಿರ್ಲಿಂಗಗಳು ಈ ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ. ಶಿವನ ಭಕ್ತರು ತೀರ್ಥಯಾತ್ರೆಗೆ ಪ್ರಯಾಣಿಸಲು ಈ ದೇವಾಲಯಗಳನ್ನು ಅತ್ಯಂತ ಮಂಗಳಕರ ಸ್ಥಳಗಳೆಂದು ಪರಿಗಣಿಸುತ್ತಿದ್ದಾರೆ. ಆದ್ದರಿಂದ ಶಿವರಾತ್ರಿಯ ಪ್ರಯುಕ್ತ ಭಾರತೀಯ ರೈಲ್ವೆ ಇಲಾಖೆ 12 ಜ್ಯೋತಿರ್ಲಿಂಗಗಳ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.

ಯಾವೆಲ್ಲ ದೇವಸ್ಥಾನಗಳನ್ನ ನೋಡಬಹುದು?

ಯಾವೆಲ್ಲ ದೇವಸ್ಥಾನಗಳನ್ನ ನೋಡಬಹುದು?

1. ಸೋಮನಾಥ ದೇವಾಲಯ

2. ಕಾಶಿ ವಿಶ್ವನಾಥ

3. ಮಹಾಕಾಳೇಶ್ವರ

4. ಮಲ್ಲಿಕಾರ್ಜುನ

5. ಓಂಕಾರೇಶ್ವರ

6. ಕೇದಾರನಾಥ

7. ಭೀಮಾಶಂಕರ

8. ಬೈದ್ಯನಾಥ

9. ರಾಮನಾಥಸ್ವಾಮಿ

10. ನಾಗೇಶ್ವರ

11. ತ್ರಯಂಬಕೇಶ್ವರ

12. ಗೃಷ್ಣೇಶ್ವರ

 ಶಿವನ ಭಕ್ತರಿಗೆ ಸಿಹಿಸುದ್ದಿ ನೀಡಿದ IRCTC

ಶಿವನ ಭಕ್ತರಿಗೆ ಸಿಹಿಸುದ್ದಿ ನೀಡಿದ IRCTC

ಐಆರ್‌ಸಿಟಿಸಿಯು 12 ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡಲು ಬಯಸುವ ಯಾತ್ರಾರ್ಥಿಗಳಿಗಾಗಿ ವಿಶೇಷವಾದ ಪ್ರವಾಸದ ಪ್ಯಾಕೇಜ್ ಅನ್ನು ರಚಿಸಿದೆ. ಜ್ಯೋತಿರ್ಲಿಂಗ ಯಾತ್ರಾ ಪ್ರವಾಸ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ, ಮಹಾಕಾಳೇಶ್ವರ, ಸೋಮನಾಥ, ನಾಗೇಶ್ವರ, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್‌ನಂತಹ ಜನಪ್ರಿಯ ಯಾತ್ರಾ ಸ್ಥಳಗಳನ್ನು ಕೂಡ ನೋಡಬಹುದಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಟಿಕೆಟ್‌ ಬುಕ್‌ ಮಾಡುವ ವಿವರ ಇಲ್ಲಿದೆ

ಟಿಕೆಟ್‌ ಬುಕ್‌ ಮಾಡುವ ವಿವರ ಇಲ್ಲಿದೆ

ಆಸಕ್ತರು IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಪ್ರವಾಸದ ಪ್ಯಾಕೇಜ್​ನ ಟಿಕೆಟ್ ಬುಕ್ ಮಾಡಬಹುದಾಗಿದೆ. ಮಹಾಶಿವರಾತ್ರಿ ನವ ಜ್ಯೋತಿರ್ಲಿಂಗ ಯಾತ್ರಾ SZBD384A ಮಾರ್ಚ್ 08ರಿಂದ- 20ರವರೆಗೂ ನಡೆಯಲಿದೆ. 12 ರಾತ್ರಿಗಳು ಅಥವಾ 13 ದಿನಗಳ ಪ್ಯಾಕೇಜ್‌ ಇದಾಗಿದೆ. ತಿರುನೋವೇಲಿ, ವುರುಡುನಗರ, ಮಧುರೈ, ದಿಂಡಿಗಲ್, ಕರೂರ್, ಈರೋಡ್, ಸೇಲಂ, ವಾರಂಗಲ್, ವಿಜಯವಾಡ, ಜೋಲಾರ್ಪೆಟ್ಟೈ, ಕಟ್ಪಾಡಿ, ಪೆರಂಬೂರ್, ನೆಲ್ಲೂರಿನ ಮೂಲಕ ರೈಲು ಸಂಚಾರ ಮಾಡಲಿದೆ.

 ಪ್ಯಾಕೇಜ್‌ನ ಬಗ್ಗೆ ಸಂಪೂರ್ಣ ಮಾಹಿತಿ

ಪ್ಯಾಕೇಜ್‌ನ ಬಗ್ಗೆ ಸಂಪೂರ್ಣ ಮಾಹಿತಿ

ಹಾಗೆಯೇ ಮಹಾಕಾಳೇಶ್ವರ, ಓಂಕಾರೇಶ್ವರ, ಸೋಮಂತ್, ತ್ರಯಂಬಕೇಶ್ವರ, ಭೀಮಶಂಕರ, ಗುರುನೇಶ್ವರ, ಆಯುಂಧ್ ನಾಗನಾಥ್, ಪರ್ಲಿ ವೈಜಿನಾಥ್, ಮಲ್ಲಿಕಾರ್ಜುನ ಸ್ವಾಮಿ ಯಾತ್ರಾ ಸ್ಥಗಳು ಕೂಡ ಈ ಪ್ಯಾಕೇಜ್‌ನಲ್ಲಿ ಲಭ್ಯವಿವೆ. ಈ ಪ್ರವಾಸದ ವೆಚ್ಚವು 15,350 ರೂಪಾಯಿಗಳು ಆಗಿರುತ್ತದೆ ಎನ್ನುವ ಮಾಹಿತಿಯನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+