IRCTC: ಬರೀ ₹15,000ದಲ್ಲಿ ಅತೀ ಕಡಿಮೆ ದರದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಬೇಕೆ?-ಮಾಹಿತಿ, ವಿವರ ಇಲ್ಲಿದೆ

ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಕೈಗೆಟಕುಗ ದರದಲ್ಲಿ ಬರೀ ದೇಶ ಅಲ್ಲದೆ, ವಿದೇಶಗಳಿಗೂ ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೀಗ ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರಾ ಎನ್ನುವ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಇದು ಆರಂಭವಾಗುವುದು ಎಲ್ಲಿಂದ, ಯಾವಾಗ ಹಾಗೂ ಪ್ರಯಾಣ ದರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕ ಸರ್ಕಾರವು ಐಆರ್‌ಸಿಟಿಸಿಯೊಂದಿಗೆ ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರಾ ಥೀಮ್ ಆಧಾರಿತ ತೀರ್ಥಯಾತ್ರೆಯ ಪ್ರವಾಸ ಪ್ಯಾಕೇಜ್‌ ಅನ್ನು ಆರಂಭಿಸಿದೆ. ಭಾರತ್ ಗೌರವ್ ಟೂರಿಸ್ಟ್ ರೈಲಿನ ಈ 6 ದಿನಗಳ ಪ್ರಯಾಣದಲ್ಲಿ ತಿರುವನಂತಪುಂ, ಕನ್ಯಾಕುಮಾರಿ, ರಾಮೇಶ್ವರಂ ಮತ್ತು ಮಧುರೈನ ಪ್ರಮುಖ ಪವಿತ್ರ ಸ್ಥಳಗಳನ್ನು ವೀಕ್ಷಣೆ ಮಾಡಬಹುದಾಗಿದೆ.

IRCTC Karnataka Bharat Gourav Dakshina Yatra tour package details

ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆಯ ಅಡಿಯಲ್ಲಿ 5 ರಾತ್ರಿ ಹಾಗೂ 6 ಹಗಲುಗಳ ಪ್ರವಾಸ ಇರಲಿದ್ದು, ಇದು ಜುಲೈ 1ರಂದು ಆರಂಭ ಆಗಲಿದೆ. ಕರ್ನಾಟಕ ಸರ್ಕಾರ ಸಹ ಈ ಪ್ರವಾಸ ಮಾಡುವವರಿಗೆ ಬರೋಬ್ಬರಿ 5,000 ರೂಪಾಯಿ ಸಹಾಯಧನ ನೀಡಲಿದೆ ಎನ್ನುವ ಮಾಹಿತಿ ಇದೆ.

ಈ ಪ್ರವಾಸದಲ್ಲಿ ಕನ್ಯಾಕುಮಾರಿಯಲ್ಲಿ ಭಗವತಿ ದೇವಸ್ಥಾನ, ವಿವೇಕಾನಂದ ಶಿಲಾ ಸ್ಮಾರಕ, ತಿರುವನಂತಪುರದಲ್ಲಿ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ರಾಮೇಶ್ವರದಲ್ಲಿ ರಾಮನಾಥಸ್ವಾಮಿ ದೇವಸ್ಥಾನ, ಮಧುರೈನಲ್ಲಿ ಮೀನಾಕ್ಷಿ ದೇವಸ್ಥಾನಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಪ್ರಯಾಣ ವಿಭಾಗ ರೈಲು ಆಗಿದ್ದು, ಈ ರೈಲು ಬೆಳಗಾವಿಯಿಂದ ಹೊರಡಲಿದ್ದು, ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ, ಮಧುರೈಗೆ ಪ್ರಯಾಣ ಬೆಳೆಸಲಿದೆ. ಈ ಪ್ರವಾಸ ಕೊನೆಗೆ ಬೆಳಗಾವಿಯಲ್ಲಿ ಮುಕ್ತಾಯವಾಗಲಿದೆ. ಇನ್ನು ಈ ರೈಲಿಗೆ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರಿನಲ್ಲಿ ನಿಲುಡೆ ಇರಲಿದೆ.

ಭಾರತ ಗೌರವ್ ರೈಲು ಯೋಜನೆಯಡಿಯಲ್ಲಿ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ರೈಲ್ವೆಯು ಸುಮಾರಿ ಶೇಕಡ 33ರಷ್ಟು ರಿಯಾಯಿತಿಯನ್ನು ಪ್ರವಾಸಿಗರಿಗೆ ನೀಡಲಿದೆ. ಪ್ರವಾಸದ ಟಿಕೆಟ್ ದರ ಒಬ್ಬ ವ್ಯಕ್ತಿಗೆ 15,000 ರೂಪಾಯಿ ಇರಲಿದೆ.

ಪ್ರವಾಸಿಗರು https://www.irctctourism.com/ ವೆಬ್‌ಸೈಟ್‌ನಲ್ಲಿ IRCTC ದಿವ್ಯ ದಕ್ಷಿಣ ಯಾತ್ರಾ ಪ್ಯಾಕೇಜ್ ಅನ್ನು ಬುಕ್ ಮಾಡಬೇಕಾಗುತ್ತದೆ. ಈ ವೆಬ್‌ಸೈಟ್ ತೆರೆದ ನಂತರ ಭಾರತ್ ಗೌರವ್ ವಿಭಾಗಕ್ಕೆ ಹೋಗಿ, ಇದರಲ್ಲಿ ದಿವ್ಯ ದಕ್ಷಿಣ ಯಾತ್ರೆ ಸೇರಿದಂತೆ ಹಲವು ದರ್ಶನ ಪ್ರವಾಸಗಳು ವಿವಿಧ ದಿನಾಂಕಗಳಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+