Get Updates
Get notified of breaking news, exclusive insights, and must-see stories!

Indian Railways: ಪೊಂಗಲ್ ಹಬ್ಬ ಹಿನ್ನೆಲೆ ಬೆಂಗಳೂರು-ಕೊಚುವೇಲಿ ನಡುವೆ ವಿಶೇಷ ರೈಲು-ಸಮಯ & ದಿನಾಂಗಳ ವಿವರ ತಿಳಿಯಿರಿ

ಬೆಂಗಳೂರು, ಫೆಬ್ರವರಿ, 23: ಅಟ್ಟುಕಲ್ ಪೊಂಗಲ್ ಹಿನ್ನೆಲೆ ರೈಲ್ವೆಯು ಬೆಂಗಳೂರು ಎಸ್‌ಎಂವಿಟಿ ಮತ್ತು ಕೊಚುವೇಲಿ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ಹಾಗಾದರೆ ಸಮಯಗಳು, ದಿನಾಂಕಗಳು ಮತ್ತು ಎಲ್ಲೆಲ್ಲಿ ನಿಲುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೈಲು ಸಂಖ್ಯೆ 06501 ಎಸ್‌ಎಂವಿಟಿ ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲು, ಫೆಬ್ರವರಿ 24ರಂದು ರಾತ್ರಿ 11:55ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 7:10ಕ್ಕೆ ಕೊಚುವೇಲಿ ತಲುಪುತ್ತದೆ. ರೈಲು ಸಂಖ್ಯೆ 06502 ಕೊಚುವೇಲಿ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು, ಫೆಬ್ರವರಿ 25ರಂದು ರಾತ್ರಿ 10 ಗಂಟೆಗೆ ಕೊಚುವೇಲಿಯಿಂದ ಹೊರಟು ಮರುದಿನ ಸಂಜೆ 4:30ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸುತ್ತದೆ.

Indian Railways: Special train between Bengaluru-Kochuveli for Pongal festival

ಇದು ವೈಟ್‌ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಒಟ್ಟಪ್ಪಲಂ, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗನ್ನೂರ್, ಕಾಯಂಕುಲಂ ಮತ್ತು ಕೊಲ್ಲಂನಲ್ಲಿ ನಿಲುಗಡೆಯಾಗಲಿದೆ ಎಂದು ತಿಳಿಸಿದೆ.

ನವದೆಹಲಿ-ಬೆಂಗಳೂರು ನಡುವೆ ಸಾಪ್ತಾಹಿಕ ಪಾರ್ಸೆಲ್ ರೈಲು ಸೇವೆ

ಭಾರತೀಯ ರೈಲ್ವೆಯು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈ ಬದಲಾವಣೆಗಳನ್ನು ಪ್ರಯಾಣಿಕರ ವಿಭಾಗ ಹಾಗೂ ಗೂಡ್ಸ್‌ ವಿಭಾಗಗಳಲ್ಲೂ ಕಾಣಬಹುದಾಗಿದೆ. ಇನ್ನು ರಾಪಿಡ್ ಕಾರ್ಗೋ ಎಕ್ಸ್‌ಪ್ರೆಸ್, ಸಾಪ್ತಾಹಿಕ ಪಾರ್ಸೆಲ್ ಎಕ್ಸ್‌ಪ್ರೆಸ್ ಸೇವಾ ರೈಲು ಬೆಂಗಳೂರಿನ ಯಶವಂತಪುರ ಮತ್ತು ದೆಹಲಿಯ ತುಘಲಕಾಬಾದ್ ನಡುವೆ ಓಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಸೇವೆಯ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

ನೈಋತ್ಯ ರೈಲ್ವೆ ಪ್ರಕಾರ, ತುಘಲಕಾಬಾದ್‌ನಿಂದ ಮೊದಲ ಸೇವೆಯು ಫೆಬ್ರವರಿ 27 ರಂದು 11:15ಕ್ಕೆ ಪ್ರಾರಂಭವಾಗಲಿದ್ದು, ಫೆಬ್ರವರಿ 29ರಂದು ಬೆಳಗ್ಗೆ 11:30ಕ್ಕೆ ಯಶವಂತಪುರವನ್ನು ತಲುಪುತ್ತದೆ. ಬಳಿಕ ಹಿಂತಿರುಗುವ ದಿಕ್ಕಿನಲ್ಲಿ, ಪಾರ್ಸೆಲ್ ರೈಲು ಮಾರ್ಚ್ 3ರಂದು ರಾತ್ರಿ 12:10ಕ್ಕೆ ಯಶವಂತಪುರದಿಂದ ಹೊರಟು ಮಾರ್ಚ್ 5ರಂದು ರಾತ್ರಿ 12:10ಕ್ಕೆ ತುಘಲಕಾಬಾದ್ ತಲುಪುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+