ಗೋವಾ ಪ್ರವಾಸಿಗರಿಗೆ ಸಿಹಿ ಸುದ್ದಿ, ಇಲ್ಲಿದೆ ವಿವರಗಳು
ಪಣಜಿ, ಡಿಸೆಂಬರ್ 7: ಗೋವಾ ಹೆಚ್ಚಿನ ಜನರ ಪ್ರವಾಸಿ ತಾಣವಾಗಿದೆ. ಇಲ್ಲಿ ಕ್ಯಾಬ್‌ಗಳನ್ನು ನಿರ್ವಹಿಸುವುದು ಎಷ್ಟು ಕಷ್ಟ ಎಂದು ಅಲ್ಲಿಗೆ ಹೋದವರಿಗೆ ತಿಳಿದಿದೆ. ಇಲ್ಲಿನ ಕ್ಯಾಬ್‌ಗಳ ದರಗಳು, ಅದರ ಲಭ್ಯತೆವರೆಗೆ ಇದು ತೊಂದರೆಯಾಗುತ್ತಿತ್ತು. ಈಗ ಇದಕ್ಕೆ ಪರಿಹಾರ ಸಿಕ್ಕಿದೆ.
ಓಲಾ ಅಥವಾ ಉಬರ್‌ನಂತಹ ಆಪ್ ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್‌ಗಳ ಲಭ್ಯತೆ ತೀರಾ ಕಡಿಮೆಯಾದದ್ದರಿಂದ ಗೋವಾ ಟ್ಯಾಕ್ಸಿ ಎಂಬ ಸ್ವಂತ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಅಗ್ರಿಗೇಟರ್ ಸೇವೆಯನ್ನು ಪ್ರಾರಂಭಿಸಲು ಗೋವಾ ರಾಜ್ಯವು ಸಿದ್ಧವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವ ಸಾಧ್ಯತೆ ಇದೆ.
ಟ್ಯಾಕ್ಸಿ ಅಗ್ರಿಗೇಟರ್ ಆ್ಯಪ್ ಗೋವಾ ಟ್ಯಾಕ್ಸಿ ಅನ್ನು ಪ್ರವಾಸೋದ್ಯಮ ಮತ್ತು ಸಾರಿಗೆ ಇಲಾಖೆಗಳು ಜಂಟಿಯಾಗಿ ಬಿಡುಗಡೆ ಮಾಡಲಿದ್ದು, ಸರ್ಕಾರಿ ಸ್ವಾಮ್ಯದ ಗೋವಾ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಜಿಇಎಲ್) ಇದನ್ನು ನಿರ್ವಹಿಸಲಿದೆ ಎಂದು ಸಾರಿಗೆ ಸಚಿವ ಮೌವಿನ್ ಗೊಡಿನ್ಹೋ ಬುಧವಾರ ಹೇಳಿದ್ದಾರೆ.

ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಅವರು ಈ ಅಪ್ಲಿಕೇಶನ್ ಗೋವಾ ಟ್ಯಾಕ್ಸಿವಾಲಾಗಳ ನಿರ್ವಹಣೆ ನೋಡಿಕೊಳ್ಳುತ್ತದೆ. ಅವರು ಈಗ ತಮ್ಮದೇ ಆದ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಯನ್ನು ನಡೆಸುತ್ತಾರೆ. ಹೆಚ್ಚುವರಿ ಲಾಭವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಇದು ಪ್ರವಾಸಿಗರಿಗೆ ಮಾತ್ರವಲ್ಲದೆ ಸ್ಥಳೀಯ ಸಾರ್ವಜನಿಕರಿಗೂ ಉಪಯುಕ್ತವಾಗಿದ್ದು, ತಮ್ಮ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಎರಡು ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಪರಿಚಯಿಸುವ ಪ್ರಯತ್ನಗಳು ಗೋವಾದ ಟ್ಯಾಕ್ಸಿ ನಿರ್ವಾಹಕರಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದವು. ಸರ್ಕಾರಿ ಸ್ವಾಮ್ಯದ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಜಿಟಿಡಿಸಿ) ಬೆಂಬಲದೊಂದಿಗೆ ಖಾಸಗಿ ಕಂಪನಿಯು ಪರಿಚಯಿಸಿದ ಅಂತಹ ಒಂದು ಸೇವೆ ಗೋವಾ ಮೈಲ್ಸ್ ಸ್ಥಳೀಯ ಟ್ಯಾಕ್ಸಿ ನಿರ್ವಾಹಕರಿಂದ ತೀವ್ರ ವಿರೋಧವನ್ನು ಎದುರಿಸಿತು. ಅಲ್ಲದೆ ಅದರ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ನಡೆಸಿತು.
ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪೆರ್ನೆಮ್‌ನ ನ್ಯೂ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ GTDC ಏರ್‌ಪೋರ್ಟ್ ಪ್ರಿ-ಪೇಯ್ಡ್ ಟ್ಯಾಕ್ಸಿ ಕೌಂಟರ್‌ಗೆ ತಮ್ಮನ್ನು ನೋಂದಾಯಿಸಿಕೊಳ್ಳಲು ಮಾನ್ಯವಾದ ಆಲ್ ಗೋವಾ ಟೂರಿಸ್ಟ್ ಅಥವಾ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಟೂರಿಸ್ಟ್ ಟ್ಯಾಕ್ಸಿ ವಾಹನಗಳಿಗೆ ಆಹ್ವಾನ ನೀಡಿದೆ. ನೋಂದಣಿಗಾಗಿ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಟ್ಯಾಕ್ಸಿ ಆಪರೇಟರ್‌ಗಳು ತಮ್ಮ ಅರ್ಜಿಯನ್ನು ಪ್ರವಾಸೋದ್ಯಮ ಉತ್ತರ ಇಲಾಖೆಯ ನೋಂದಣಿ ಸೌಲಭ್ಯ ಕೇಂದ್ರದಲ್ಲಿ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸಲಾಗಿದೆ.

ನೋಂದಣಿ ಫಾರ್ಮ್ ಅನ್ನು https://www.goa- tourism.com ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಗೋವಾ ಟ್ಯಾಕ್ಸಿ-ಡ್ರೈವರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಿಂಕ್ https://goa-tourism.com/taxi-registration ನಲ್ಲಿಯೂ ಲಭ್ಯವಿದೆ.












Click it and Unblock the Notifications