'ಅಣ್ಣ' ಎನ್ನಬೇಡಿ: ಕ್ಯಾಬ್ ಚಾಲಕನ ಮಾರ್ಗಸೂಚಿ ಫುಲ್ ವೈರಲ್!

ಬೆಂಗಳೂರು, ಅಕ್ಟೋಬರ್ 14: ಭಾರತದ ವಿವಿಧ ನಗರದಲ್ಲಿ ಕ್ಯಾಬ್ ಸೇವೆಗಳು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿವೆ. ಆದರೆ ಬೇರೆ ಬೇರೆ ಕಾರಣಕ್ಕೆ ಕ್ಯಾಬ್ ಚಾಲಕರನ್ನು ದೂರುವವರು ಇದ್ದಾರೆ. ಕ್ಯಾನ್ಸಲ್ ಮಾಡುವುದು, ಹೆಚ್ಚಿನ ದರ ವಸೂಲಿ, ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುವುದು ಮುಂತಾದ ಘಟನೆಗಳು ಆಗಾಗ ವರದಿಯಾಗುತ್ತವೆ. ಆದರೆ ಈಗ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕರಿಗೆ ಹಾಕಿರುವ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ಯಾಕ್ಸಿ ಚಾಲಕನೊಬ್ಬ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹಾಕಿದ್ದಾನೆ. ಇದರ ಫೋಟೋವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ಈಗ ವೈರಲ್ ಆಗುತ್ತಿದೆ. 6 ಮಾರ್ಗಸೂಚಿಗಳಲ್ಲಿ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

Dont Say Bhaiya Cab Driver 6 Strict Guidelines Goes Viral

ಅಣ್ಣ ಎನ್ನಬೇಡಿ: ಕ್ಯಾಬ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರು ಚಾಲಕನಿಗೆ ಬೈಯ್ಯಾ ಅಥವ ಅಣ್ಣ ಎನ್ನುವುದು ಸಾಮಾನ್ಯವಾಗಿದೆ. ಆದರೆ ಈ ಕ್ಯಾಬ್ ಚಾಲಕ ತನ್ನ ಮಾರ್ಗಸೂಚಿಯಲ್ಲಿ 'ನಮ್ಮನ್ನು ಅಣ್ಣ ಎನ್ನಬೇಡಿ' ಎಂದು ಹೇಳಿದ್ದು, ಅದನ್ನು ಪ್ರಿಂಟ್ ಮಾಡಿ ತನ್ನ ಸೀಟಿನ ಹಿಂಬದಿಗೆ ಅಂಟಿಸಿದ್ದು, ಇಂಟರ್‌ನೆಟ್‌ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಮಾರ್ಗಸೂಚಿಗಳು

* ನೀವು ಕ್ಯಾಬ್‌ನ ಮಾಲೀಕರಲ್ಲ

* ಕ್ಯಾಬ್ ಓಡಿಸುತ್ತಿರುವವನು ಈ ಕ್ಯಾಬ್‌ನ ಮಾಲೀಕ

* ಸಭ್ಯತೆಯಿಂದ ಮಾತನಾಡಿ ಮತ್ತು ಗೌರವ ಪಡೆಯಿರಿ

* ಕಾರಿನ ಬಾಗಿಲನ್ನು ನಿಧಾನವಾಗಿ ಹಾಕಿ

* ನೀವು ನಮಗೆ ಹೆಚ್ಚಿನ ಹಣ ಕೊಡುವುದಿಲ್ಲ. ನಿಮ್ಮ ಆಟಿಟ್ಯೂಡ್ ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ, ನಮ್ಮ ಮುಂದೆ ತೋರಿಸಬೇಡಿ.

* ನಮಗೆ ಅಣ್ಣ ಎಂದು ಹೇಳಬೇಡಿ

ಕಾರಿನ ಡೋರ್ ಹಾಕುವ ವಿಚಾರದಲ್ಲಿ ಹಲವು ಬಾರಿ ಪ್ರಯಾಣಿಕರು, ಚಾಲಕರ ನಡುವೆ ಗಲಾಟೆ ನಡೆಯುತ್ತದೆ. ವೇಗವಾಗಿ ಬಾಗಿಲು ಹಾಕಿ ಅದಕ್ಕೆ ಹಾನಿ ಮಾಡುತ್ತಾರೆ ಎಂಬುದು ಕ್ಯಾಬ್ ಚಾಲಕರ ಆರೋಪ. ಇದನ್ನು ಚಾಲಕರು ಹಲವು ಬಾರಿ ಹೇಳುತ್ತಾರೆ. ಆದರೆ ಈ ಕ್ಯಾಬ್ ಚಾಲಕ ಅದನ್ನು ಪ್ರಿಂಟ್ ಮಾಡಿಸಿ ಸೀಟಿಗೆ ಅಂಟಿಸಿದ್ದಾನೆ.

ಮನೆಯ ಅಥವ ಕಛೇರಿಯ ಟೆಕ್ಷನ್ ಅನ್ನು ಕ್ಯಾಬ್ ಚಾಲಕರ ಮೇಲೆ ತೋರಿಸಲಾಗುತ್ತದೆ. ಹಲವು ಬಾರಿ ಪ್ರಯಾಣಿಕರು ಅವರನ್ನು ನಿಂದಿಸುವುದು ಇದೇ. ಆದ್ದರಿಂದ ಸಭ್ಯತೆಯಿಂದ ಮಾತನಾಡಿ, ನಮಗೆ ಗೌರವ ಕೊಡಿ, ನೀವು ಗೌರವ ಪಡೆಯಿರಿ ಎಂದು ಕ್ಯಾಬ್ ಚಾಲಕ ಹೇಳಿದ್ದಾನೆ.

ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು ಆರಂಭವಾಗಿವೆ. ಆದ್ದರಿಂದ ಕ್ಯಾಬ್ ಏರಿದ ತಕ್ಷಣ ಒಟಿಪಿ ಹೇಳಬೇಕು. ಆಗ ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರು ಬೈಯ್ಯಾ ಒಟಿಪಿ ಎಂದು ಹೇಳುವುದು ಸಾಮಾನ್ಯವಾಗಿದೆ. ಇದರಿಂದ ಬಹುಶಃ ಅಪಾರ ಕಿರಿಕಿರಿ ಅನುಭವಿಸಿರುವ ಚಾಲಕ ನಮ್ಮನ್ನು ಬೈಯ್ಯಾ ಎನ್ನಬೇಡಿ ಎಂದು ಪ್ರಿಂಟ್ ಮಾಡಿಸಿ ಪ್ರಯಾಣಿಕರ ಮಾರ್ಗಸೂಚಿಯಲ್ಲಿ ಹಾಕಿದ್ದಾನೆ.

ಈ ಕ್ಯಾಬ್ ಚಾಲಕ ಯಾವ ನಗರದವನು?, ಏಕೆ ಈ ಮಾದರಿಯ ಮಾರ್ಗಸೂಚಿ ಪ್ರಿಂಟ್ ಮಾಡಿಸಿ ಹಾಕಿದ್ದಾನೆ ಎಂಬ ಕುರಿತು ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾರ್ಗಸೂಚಿಯ ಪೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಸಹ ಹಲವು ಮಾರ್ಗಸೂಚಿಗಳಿಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+