Railway Stations: ಜಂಕ್ಷನ್, ಟರ್ಮಿನಲ್, ಸೆಂಟ್ರಲ್, ರೋಡ್ ರೈಲು ನಿಲ್ದಾಣಗಳು ಎಂಬ ನಾಮಫಲಕಗಳ ಅರ್ಥವೇನು ಗೊತ್ತೆ?-ಮಾಹಿತಿ
ಬೆಂಗಳೂರು, ಏಪ್ರಿಲ್, 07: ಸಾಮಾನ್ಯವಾಗಿ ಕೆಲವು ರೈಲ್ವೆ ನಿಲ್ದಾಣಗಳು ಜಂಕ್ಷನ್, ಟರ್ಮಿನಲ್, ಸೆಂಟ್ರಲ್ ಕಂಟೋನ್ಮೆಂಟ್, ರೋಡ್ ಸ್ಟೇಷನ್ ಎಂಬ ನಾಮಫಲಕಗಳನ್ನು ಹೊಂದಿರುತ್ತದೆ. ಹಾಗಾದರೆ ಇವುಗಳ ಅರ್ಥ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
1. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ: ಯಾವ ನಿಲ್ದಾಣ ಆರ್ಮಿ ಏರಿಯಾದಲ್ಲಿರುತ್ತದೆಯೋ ಅಂತಹ ನಿಲ್ದಾಣವನ್ನು ಕಂಟೋನ್ಮೆಂಟ್ ಸ್ಟೇಷನ್ ಎಂದು ಕರೆಯುತ್ತಾರೆ. ಉದಾಹರಣಗೆ ಬೆಂಗಳೂರು ದಂಡು ರೈಲ್ವೆ ನಿಲ್ದಾಣ.

2. ರೋಡ್ ರೈಲ್ವೆ ನಿಲ್ದಾಣ: ಕೆಲವೆಡೆ ಸ್ಟೇಷನ್ ಹಸರಿನ ಜೊತೆ ರೋಡ್ ಎಂದು ಸೇರಿಸಿರುತ್ತಾರೆ. ಉದಾಹರಣೆಗೆ ಗೋಕರ್ಣ ರೋಡ್ ರೈಲ್ವೆ ಸ್ಟೇಷನ್. ಕೆಲವು ಊರುಗಳಿಗೆ ರೈಲ್ವೆ ಟ್ರ್ಯಾಕ್ ಹಾಕದ ಸಂದರ್ಭದಲ್ಲಿ ಆ ಊರಿನ ಪಕ್ಕದಲ್ಲಿರುವ ಸ್ಟೇಷನ್ ಅನ್ನು ರೋಡ್ ರೈಲ್ವೆ ಸ್ಟೇಷನ್ ಎಂದು ಇಡಲಾಗುತ್ತದೆ.
3. ಟರ್ಮಿನಲ್: ಟರ್ಮಿನಲ್ ಅಂದರೆ ಕೊನೇ ಅಂತಾ ಅರ್ಥ. ಆ ಟ್ರ್ಯಾಕ್ ಅಲ್ಲಿಗೆ ಮುಕ್ತಾಯ ಆಗಲಿದ್ದು, ಅಲ್ಲಿದೆ ಬಂದಿರುವ ರೈಲುಗಳು ಅಲ್ಲಿಂದ ಹಿಂದಿರುಗಬೇಕು ಅಂತಾ ಟರ್ಮಿನಲ್ ಎಂಬ ನಾಮಫಲಕವನ್ನು ಅಳವಡಿಕೆ ಮಾಡಿರುತ್ತಾರೆ.
4. ಜಂಕ್ಷನ್: ಯಾವ ಸ್ಷೇಷನ್‌ಗೆ ಎರಡಕ್ಕೂ ಹೆಚ್ಚಿನ ಮಾರ್ಗಗಳಿಂದ ರೈಲುಗಳು ಬರುತ್ತವೆಯೋ ಅಂತಹ ನಿಲ್ದಾಣಗಳಿಗೆ ಜಂಕ್ಷನ್ ಅಂತಾ ಕರೆಯುತ್ತಾರೆ. ಉದಾಹರಣಗೆ ಯಶವಂತಪುರ ಜಂಕ್ಷನ್. ಈ ರೈಲು ನಿಲ್ದಾಣಕ್ಕೆ ತುಮಕೂರು, ಶಿವಮೊಗ್ಗ, ಹಾಸನ, ಮಂಗಳೂರು, ಮತ್ತೊಂದೆಡೆ ಬೆಂಗಳೂರು, ಮೈಸೂರು ಮಾರ್ಗದಿಂದಲೂ ರೈಲುಗಳು ಹೆಚ್ಚಾಗಿ ಬರುತ್ತವೆ. ಆದ್ದರಿಂದ ಈ ಸ್ಟೇಷನ್ ಅನ್ನು ಜಂಕ್ಷನ್ ಅಂತಾ ಕರೆಯಲಾಗುತ್ತದೆ.
5. ಸೆಂಟ್ರಲ್ ರೈಲ್ವೆ ನಿಲ್ದಾಣ: ಭಾರತದಲ್ಲಿ ಕೇವಲ 5 ಸೆಂಟ್ರಲ್ ರೈಲ್ವೆ ನಿಲ್ದಾಣಗಳಿದ್ದು, ಈ ನಿಲ್ದಾಣಗಳಿಗೆ ಹೆಚ್ಚಿನ ಪ್ರಯಾಣಿಕರು ಬರುತ್ತಾರೆ. ಜೊತೆಗೆ ಹೆಚ್ಚಿನ ರೈಲುಗಳು ಈ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡುತ್ತವೆ. ಆದ್ದರಿಂದ ಇಂತಹ ಸ್ಟೇಷನ್ ಅನ್ನು ಸೆಂಟ್ರಲ್ ರೈಲ್ವೆ ಸ್ಟೇಷನ್ ಎಂದು ಕರೆಯಲಾಗುತ್ತದೆ.
ಭಾರತದಲ್ಲಿರುವ ಸೆಂಟ್ರಲ್ ರೈಲ್ವೆ ನಿಲ್ದಾಣಗಳು
* ಮುಂಬೈ ಸೆಂಟ್ರಲ್
* ಚೆನ್ನೈ ಸೆಂಟ್ರಲ್
* ಮಂಗಳೂರು ಸೆಂಟ್ರಲ್
* ಮುಂಬೈ ಸೆಂಟ್ರಲ್
* ಕಾನ್ಫುರ ರೈಲ್ವೆ ಸ್ಟೇಷನ್












Click it and Unblock the Notifications