Diwali special Vande Bharat train: ಈ ಮಾರ್ಗಗಳಲ್ಲಿ ವಿಶೇಷ ವಂದೇ ಭಾರತ್ ರೈಲು ಸಂಚಾರ, ಸಮಯ, ದಿನಾಂಕಗಳ ವಿವರ
ಚೆನ್ನೈ, ನವೆಂಬರ್, 08: ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ವೇಳೆ ನಗರ ಪ್ರದೇಶಗಳಿಂದ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಈ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆಯು ಈ ಮಾರ್ಗದಲ್ಲಿ ವಿಶೇಷ ವಂದೇ ಭಾರತ್ ರೈಲು ಓಡಿಸಲು ನಿರ್ಧರಿಸಿದೆ. ಹಾಗಾದರೆ ರೈಲು ಹೊರಡುವ ಸಮಯ, ನಿಲುಗಡೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪ್ರತಿವರ್ಷವೂ ಸಹ ಹಬ್ಬಗಳ ಸಮಯದಲ್ಲಿ, ಅದರಲ್ಲೂ ದೀಪಾವಳಿ ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆಯು ದೇಶಾದ್ಯಂತ ಪ್ರಮುಖ ನಗರಗಳ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಲೇ ಬಂದಿದೆ. ಹಾಗೆಯೇ ಇದೀಗ ದಕ್ಷಿಣ ರೈಲ್ವೆಯು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಚೆನ್ನೈ-ತಿರುನೆಲ್ವೇಲಿ ಮಾರ್ಗದಲ್ಲಿ ವಿಶೇಷ ವಂದೇ ಭಾರತ್ ರೈಲು ಓಡಿಸಲು ನಿರ್ಧರಿಸಿದೆ.

06067 ನಂಬರ್‌ನ ಚೆನ್ನೈ ಎಗ್ಮೋರ್-ತಿರುನೆಲ್ವೇಲಿ ವಂದೇ ಭಾರತ್ ರೈಲು ನವೆಂಬರ್ 9ರಂದು ಬೆಳಗ್ಗೆ 6 ಗಂಟೆಗೆ ಎಗ್ಮೋರ್‌ನಿಂದ ಹೊರಟು ಮಧ್ಯಾಹ್ನ 2:15ಕ್ಕೆ ತಿರುನಲ್ವೇಲಿಗೆ ತಲುಪಲಿದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ತಿರುನಲ್ವೇಲಿಯಿಂದ ಹೊರಟು ರಾತ್ರಿ 11:15ಕ್ಕೆ ಚೆನ್ನೈ ಎಗ್ಮೋರ್ ತಲುಪಲಿದೆ. 8 ಕೋಚ್‌ಗಳನ್ನು ಹೊಂದಿರುವ ಈ ವಂದೇ ಭಾರತ್ ರೈಲು ತಾಂಬರಂ, ವಿಲ್ಲುಪುರಂ, ತಿರುಚ್ಚಿ, ದಿಂಡಿಗಲ್, ಮಧುರೈ ಮತ್ತು ವಿರುಧುನಗರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ.
ತಾಂಬರಂ - ನಾಗರಕೋಯಿಲ್ ವಿಶೇಷ ರೈಲು
ಅಷ್ಟೇ ಅಲ್ಲದೆ ತಾಂಬರಂ-ನಾಗರ್ಕೋಯಿಲ್ ಮಾರ್ಗದಲ್ಲಿ ಮತ್ತೊಂದು ದೀಪಾವಳಿ ವಿಶೇಷ ರೈಲು ಬಿಡಲಾಗಿದೆ. ಈ ವಿಶೇಷ ರೈಲು (06061) ತಾಂಬರಂನಿಂದ ನವೆಂಬರ್ 10, 17 ಮತ್ತು 24ರಂದು ಕಾರ್ಯನಿರ್ವಹಿಸುತ್ತದೆ. ಇದು ತಾಂಬರಂನಿಂದ ರಾತ್ರಿ 07:30 ಕ್ಕೆ ಹೊರಟು ಮರುದಿನ ಬೆಳಗ್ಗೆ 07:10ಕ್ಕೆ ನಾಗರಕೋಯಿಲ್‌ಗೆ ತಲುಪುತ್ತದೆ. ಈ ರೈಲು ಚೆಂಗಲ್ಪಟ್ಟು, ವಿಲ್ಲುಪುರಂ, ವಿರುಧಾಚಲಂ, ತಿರುಚ್ಚಿ, ದಿಂಡಿಗಲ್, ಮಧುರೈ, ವಿರುಧುನಗರ, ಸತ್ತೂರ್, ಕೋವಿಲ್ಪಟ್ಟಿ, ತಿರುನಲ್ವೇಲಿ ಮತ್ತು ವಲ್ಲಿಯೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ತಿಳಿಸಿದೆ.
ಬುಕ್ಕಿಂಗ್‌ಗಳು ಈಗ ಸಾರ್ವಜನಿಕರಿಗೆ ಮುಕ್ತವಾಗಿವೆ
ಈ ರೈಲಿನಲ್ಲಿ 8 ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಇರುವ ಸಾಧ್ಯತೆಯಿದೆ. ವಿಶೇಷ ರೈಲು ಸೇವೆಗಳಿಗೆ ಟಿಕೆಟ್ ಕಾಯ್ದಿರಿಸುವಿಕೆಗೆ ಇದೀಗ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಸಾಮಾನ್ಯ ರೈಲುಗಳ ಬುಕಿಂಗ್ ಸುಮಾರು ಮೂರು ತಿಂಗಳ ಹಿಂದೆ ಸಂಪೂರ್ಣವಾಗಿ ಮುಗಿದಿದೆ ಎಂದು ತಿಳಿಸಿದೆ.
ಇನ್ನು ಈ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದೀಪಾವಳಿ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬಿಡಲಾಗಿದೆ. ಇನ್ನು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿನ ಪ್ರಯಾಣದ ಸ್ಥಳಗಳಿಗೆ ದೃಢೀಕರಿಸಿದ ಟಿಕೆಟ್‌ಗಳನ್ನು ಪಡೆಯಲು ವಿಫಲರಾದವರಿಗೆ ಹಾಸನ ಕಲ್ಪಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ರವಾನಿಸಿದೆ.












Click it and Unblock the Notifications