ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್: ಟಿಕೆಟ್ ಮೇಲೆ ಶೇ 20ರಷ್ಟು ಡಿಸ್ಕೌಂಟ್ ಇಲ್ಲಿದೆ ಸಂಪೂರ್ಣ ಮಾಹಿತಿ!
ರೈಲ್ವೆ ಸಚಿವಾಲಯವು ಕೊನೆಗೂ ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕಳೆದ ಕೆಲವು ದಿನಗಳಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಹಾಗೂ ತತ್ಕಾಲ್ ಸೇರಿದಂತೆ ಹಲವು ವಿಚಾರದಲ್ಲಿ ಗೊಂದಲಗಳು ಮುಂದುವರಿದಿವೆ. ಇದೀಗ ಕೊನೆಗೂ ರೈಲ್ವೆ ಪ್ರಯಾಣಿಕರಿಗೆ ರೈಲು ಟಿಕೆಟ್ ವಿಷಯದಲ್ಲಿ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗುವುದು ಹಾಗೂ ಬರುವುದಕ್ಕೆ ಎರಡೂ ಕಡೆ ಟಿಕೆಟ್ ಬುಕ್ ಮಾಡಿಕೊಂಡರೆ ಭರ್ಜರಿ ರಿಯಾಯಿತಿ ಸಿಗಲಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ರೈಲಿನಲ್ಲಿ ನಿತ್ಯವೂ ಕೋಟ್ಯಾಂತರ ಜನ ಪ್ರಯಾಣಿಸುತ್ತಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಇನ್ನಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಅಲ್ಲದೇ ಪ್ರಯಾಣದ ಸಮಯವನ್ನು ಸಹ ಕಡಿಮೆ ಮಾಡಿದೆ. ಆದರೆ ಟಿಕೆಟ್ ಬುಕ್ಕಿಂಗ್ ಸಿಗದೆ ಹಾಗೂ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೂ ಶುಲ್ಕ ಕಡಿತವಾಗುತ್ತಿದೆ. ಈ ರೀತಿಯ ಬೆಳವಣಿಗೆಗಳು ರೈಲು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ರೈಲು ಟಿಕೆಟ್ ಸಿಗದೆ ಸಮಸ್ಯೆ ಆಗುತ್ತಿರುವ ಬಗ್ಗೆಯೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಇರುವಾಗಲೇ ಹೊಸದೊಂದು ಗುಡ್‌ನ್ಯೂಸ್ ನೀಡಲಾಗಿದೆ.

ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಿ ಬರುವ ಟಿಕೆಟ್ ಅನ್ನು ಒಂದೇ ಬಾರಿ ಮುಂಗಡವಾಗಿ ಬುಕ್ ಮಾಡಿಕೊಂಡರೆ ಅಥವಾ ಕಾಯ್ದಿರಿಸಿದರೆ ಪ್ರಯಾಣಿಕರಿಗೆ ಲಾಭವಾಗಲಿದೆ. ಈ ರೀತಿ ಮಾಡುವುದರಿಂದ ಪ್ರಯಾಣಿಕರಿಗೆ ಟಿಕೆಟ್ ಬೆಲೆಯ ಮೇಲೆ ಬರೋಬ್ಬರಿ ಶೇ 20ರಷ್ಟು ರಿಯಾಯಿತಿ ಸಿಗಲಿದೆ. ಇದು ರೈಲ್ವೆ ಪ್ರಯಾಣಿಕರಿಗೆ ಲಾಭವನ್ನು ತಂದುಕೊಡಲಿದೆ ಎಂದು ಹೇಳಲಾಗಿದೆ.
ಇನ್ನು ಈ ರೀತಿಯ ಹೊಸ ಸೇವೆ ಹಾಗೂ ಡಿಸ್ಕೌಂಟ್‌ನ ಬಗ್ಗೆ ರೈಲ್ವೆ ಸಚಿವಾಲಯವು ಮಾಹಿತಿ ಹಂಚಿಕೊಂಡಿದೆ. ಈ ಕೊಡುಗೆಯು ಅಕ್ಟೋಬರ್ 13ರಿಂದ 26ರ ಒಳಗೆ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರ ಒಳಗೆ ಪ್ರಯಾಣ ಮಾಡುವ ರೈಲು ಪ್ರಯಾಣಿಕರಿಗೆ ಮಾತ್ರ ಅನ್ವಯವಾಗಲಿದೆ. ಈ ರಿಯಾಯಿತಿಯು ಇದೇ 14ರಿಂದ ಶುರುವಾಗಲಿದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಸಾಲು.. ಸಾಲು ರಜೆ ಹಾಗೂ ಹಬ್ಬದ ದಿನಗಳು ಇರುವುದರಿಂದ ಈ ರೀತಿ ರೈಲು ಸೇವೆಯನ್ನು ಪರಿಚಯಿಸಲಾಗಿದೆ ಎಂದು ಹೇಳಲಾಗಿದೆ. ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳು ಇರುವುದರಿಂದ ಜನ ಹೆಚ್ಚು ರೈಲು ಬಳಕೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಬಾರದು ಹಾಗೂ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಈ ಸೇವೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಷರತ್ತುಗಳು ಅನ್ವಯ: ಇನ್ನು ಇದೇ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಈ ರೀತಿ ರೈಲು ಟಿಕೆಟ್ ಬುಕ್ ಮಾಡುವವರು ಹೋಗುವ ಜಾಗ ಹಾಗೂ ಇಂದಿರುಗುವ ಜಾಗ ಒಂದೇ ಆಗಿರಬೇಕು. ಬುಕ್ ಮಾಡಿದವರ ಹೆಸರಿಗೆ ಮಾತ್ರ ಈ ಡಿಸ್ಕೌಂಟ್ ಇರಲಿದೆ. ರಿಟರ್ನ್ ಟಿಕೆಟ್ ಸಹ ಬುಕ್ ಆದ ಮೇಲೆ ಒಟ್ಟಾರೆ ರೌಂಡ್ ಟ್ರಿಪ್‌ನ ಮೇಲೆ ಶೇ 20ರಷ್ಟು ಡಿಸ್ಕೌಂಟ್ ಸಿಗಲಿದೆ ಎಂದು ರೈಲ್ವೆ ಸಚಿವಾಲಯವು ಮಾಹಿತಿ ನೀಡಿದೆ.











Click it and Unblock the Notifications